/newsfirstlive-kannada/media/post_attachments/wp-content/uploads/2024/12/Shabarimala-Ayyappa.jpg)
ಶಬರಿಮಲೆಯಲ್ಲಿ ರಾಜ್ಯದ ಅಯ್ಯಪ್ಪ ಮಾಲಾಧಾರಿಯೊಬ್ಬರು ಪ್ರಾಣ ಬಿಟ್ಟಿದ್ದಾರೆ. ಮೃತ ಭಕ್ತರನ್ನ ರಾಮನಗರ ಜಿಲ್ಲೆ ಕನಕಪುರದ ನಿವಾಸಿ ಕುಮಾರ್ ಎಂದು ಗುರುತಿಸಲಾಗಿದೆ. ನಿನ್ನೆ ಅಯ್ಯಪ್ಪನ ದರ್ಶನ ಪಡೆದಿದ್ದ ಕುಮಾರ್ ಅವರು ಇದ್ದಕ್ಕಿದ್ದಂತೆ ದೇವಾಲಯದ ಮೇಲಿಂದ ಜಿಗಿದಿದ್ದರು. ಸನ್ನಿಧಾನಂ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ದಾಖಲು ಮಾಡಲಾಗಿತ್ತು.
ಅಯ್ಯಪ್ಪ ದರ್ಶನದ ಬಳಿಕ ಕುಮಾರ ಸ್ವಾಮಿ ಅವರು ಶಬರಿಮಲೆ ದೇವಾಲಯದ ಮೇಲಿಂದ ಬೇಕಂತಲೇ ಜಂಪ್ ಮಾಡಿದ್ದರು. ದೇವಾಲಯದ ಮೇಲಿಂದ ಜಿಗಿಯುವ ಈ ದೃಶ್ಯ ಭಕ್ತರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. 40 ವರ್ಷದ ಕುಮಾರ್ ಅವರು ಈ ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ. ಸದ್ಯ ಶಬರಿಮಲೆಗೆ ಕುಮಾರ್ ಕುಟುಂಬಸ್ಥರು ತೆರಳಿದ್ದಾರೆ.
ಅಯ್ಯಪ್ಪನ ಭಕ್ತ ಕುಮಾರ್ ಅವರು ಕನಕಪುರದ ಮದ್ದೂರಮ್ಮ ಬೀದಿ ನಿವಾಸಿ ಆಗಿದ್ದರು. ಗಾರೆ ಕೆಲಸ ಮಾಡಿಕೊಂಡಿದ್ದ ಕುಮಾರ್, ಮೊನ್ನೆಯಷ್ಟೇ 6 ಮಂದಿ ಭಕ್ತರು ಸೇರಿ ಶಬರಿಮಲೆಗೆ ತೆರಳಿದ್ದರು. ಅಯ್ಯಪ್ಪನ ದರ್ಶನ ಪಡೆದ ಬಳಿಕ ಕುಮಾರ್ ಅವರು ದೇವಾಲಯದ ಶೆಲ್ಟರ್ ಮೇಲಿಂದ ಜಂಪ್ ಮಾಡಿದ್ದಾರೆ.
ಇದನ್ನೂ ಓದಿ: ಶಬರಿಮಲೆ ಬೆಟ್ಟ ಹತ್ತುವಾಗ ಅವಘಡ; ಮೇಲಿಂದ ಕೆಳಗೆ ಬಿದ್ದ ಬೆಂಗಳೂರಿನ ಮಾಲಾಧಾರಿ
ಕೂಡಲೇ ಶಬರಿಮಲೆ ಸನ್ನಿಧಾನದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕೊಟ್ಟಾಯಂ ಮೆಡಿಕಲ್ ಕಾಲೇಜಿಗೆ ರವಾನೆ ಮಾಡುವ ಮಾರ್ಗ ಮಧ್ಯೆ ಕುಮಾರ್ ಸಾವನ್ನಪ್ಪಿದ್ದಾರೆ. ಶಬರಿಮಲೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ