/newsfirstlive-kannada/media/post_attachments/wp-content/uploads/2024/12/Ayyappa-Swamy-Male.jpg)
ಶಬರಿಮಲೆ: ಕೇರಳದ ಶಬರಿಮಲೆಯ ಸೀಸನ್ ಈಗಾಗಲೇ ಶುರುವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಈ ಬಾರಿ ಕೂಡ ಶಬರಿಮಲೆ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಭಾರಿ ಹೆಚ್ಚಳವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.25 ರಷ್ಟು ಹೆಚ್ಚು ಭಕ್ತರು ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಇನ್ನು ದೇವಸ್ಥಾನದ ಆದಾಯವೂ ಹೆಚ್ಚಳವಾಗಿದೆ. ಹತ್ತಾರು ಭಕ್ತರು ಏಕಕಾಲದಲ್ಲೇ ಜಮಾಯಿಸುವ ಕಾರಣ ಅನಿರೀಕ್ಷಿತ ಅವಘಡಗಳು ಸಂಭವಿಸುವುದು ಸಾಮಾನ್ಯ. ಈತ ಇಂಥದ್ದೇ ಒಂದು ಅವಘಡ ಉಂಟಾಗಿದೆ.
ಅಸಲಿಗೆ ಆಗಿದ್ದೇನು?
ಇನ್ನು, ಶಬರಿಮಲೆ ಬೆಟ್ಟವನ್ನು ಹತ್ತುವಾಗ ಮಾಲಾಧಾರಿ ಒಬ್ಬರು ಕೆಳಗೆ ಬಿದ್ದಿದ್ದಾರೆ. ಬೆಟ್ಟದ ಮೇಲಿಂದ ಕೆಳಗೆ ಬಿದ್ದ ಮಾಲಾಧಾರಿ ಬೆಂಗಳೂರು ಮೂಲದ ಕುಮಾರ್ ಎನ್ನುವರು. ಇವರ ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ