VIDEO: 72 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ; ಕಜಕಿಸ್ತಾನದಲ್ಲಿ ಭಾರೀ ದುರಂತ

author-image
Veena Gangani
Updated On
VIDEO: 72 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ; ಕಜಕಿಸ್ತಾನದಲ್ಲಿ ಭಾರೀ ದುರಂತ
Advertisment
  • ವಿಮಾದಲ್ಲಿದ್ದ ಪ್ರಯಾಣಿಕರ ಪೈಕಿ 14 ಮಂದಿ ಬಚಾವ್
  • ನೋಡ ನೋಡುತ್ತಿದ್ದಂತೆ ಪತನಗೊಂಡ ಬೃಹತ್​ ವಿಮಾನ
  • ಕಝಾಕಿಸ್ತಾನದ ಅಕ್ಟೌ ನಗರದಲ್ಲಿ ನಡೀತು ಭಾರೀ ದುರಂತ

ಸುಮಾರು 72 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಏಕಾಏಕಿ ಅಕಟು ವಿಮಾನ ನಿಲ್ದಾಣದಲ್ಲಿ ಪತನಗೊಂಡಿದೆ. ಕಝಾಕಿಸ್ತಾನದ ಅಕ್ಟೌ ನಗರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪತನಗೊಂಡ ವಿಮಾನದಲ್ಲಿ 72 ಪ್ರಯಾಣಿಕರು ಇದ್ದರು ಎಂದು ಕಝಾಕಿಸ್ತಾನದ ತುರ್ತು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಆಯತಪ್ಪಿ ಕಂದಕಕ್ಕೆ ಬಿದ್ದ ಸೇನೆಯ ಟ್ರಕ್​; ಚಿಕ್ಕೋಡಿ ಮೂಲದ ಸೈನಿಕ ಧರ್ಮರಾಜ್ ಹುತಾತ್ಮ!

publive-image

ಅಜರ್‌ಬೈಜಾನ್ ಏರ್‌ಲೈನ್ಸ್ ವಿಮಾನವು ಬಾಕುದಿಂದ ರಷ್ಯಾದ ಚೆಚೆನ್ಯಾದ ಗ್ರೋಜ್ನಿಗೆ ತೆರಳುತ್ತಿತ್ತು. ಆದರೆ ಗ್ರೋಜಿಯಲ್ಲಿ ಅತಿಯಾದ ಮಂಜು ಆವರಿಸಿದ ಮಾರ್ಗವನ್ನು ಬದಲಾಯಿಸಲಾಯಿತು ಎಂದು ಸುದ್ದಿ ಸಂಸ್ಥೆಗಳು ತಿಳಿಸಿವೆ. ಈ ಅಪಘಾತದ ಮೊದಲು ವಿಮಾನ ನಿಲ್ದಾಣದ ಮೇಲೆ ಹಲವಾರು ಬಾರಿ ಸುತ್ತು ಹಾಕಿತ್ತಂತೆ. ಆಗ ವಿಮಾನ ಪತನಕ್ಕೂ ಮುನ್ನ ಪೈಲಟ್‌ ಎಮರ್ಜೆನ್ಸಿ ಲ್ಯಾಂಡಿಂಗ್​ಗೆ ಮನವಿ ಮಾಡಿದ್ದರಂತೆ. ಆದರೆ ಈಗ ವಿಮಾದಲ್ಲಿದ್ದ ಪ್ರಯಾಣಿಕರ ಪೈಕಿ 14 ಮಂದಿ ಬಚಾವ್ ಆಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.


">December 25, 2024

ಇನ್ನೂ ಈ ಘಟನೆಯಲ್ಲಿ ಹಲವರು ಮಂದಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಕೆಲವರು ಬದುಕುಳಿದಿರಬಹುದು ಎಂದು ಹೇಳಲಾಗುತ್ತಿದೆ. ವಿಮಾನ ಪತನಗೊಂಡ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬಳಿಕ ಘಟನೆಯಲ್ಲಿ ಬದುಕುಳಿದವನ್ನು ಹತ್ತಿರದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment