B.C ಪಾಟೀಲ್​ ಅಳಿಯ ಆತ್ಮಹತ್ಯೆ.. ಇಂದು ಮಧ್ಯಾಹ್ನ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ

author-image
AS Harshith
Updated On
ಅಳಿಯನ ಆತ್ಮಹತ್ಯೆಗೆ ಅಸಲಿ ಕಾರಣ ಬಿಚ್ಚಿಟ್ಟ ಮಾಜಿ ಸಚಿವ ಬಿ.ಸಿ ಪಾಟೀಲ್​​.. ಈ ಬಗ್ಗೆ ಏನಂದ್ರು?
Advertisment
  • ತಂದೆಯ ಸಮಾಧಿ ಪಕ್ಕದಲ್ಲೇ ಪ್ರತಾಪ್​ ಅಂತ್ಯಕ್ರಿಯೆ
  • ಪ್ರತಾಪ್​ನನ್ನು ಕಂಡು ಕಣ್ಣೀರು ಹಾಕಿದ ಪತ್ನಿ ಸೌಮ್ಯ
  • ಅಂತಿಮ ದರ್ಶನ ಪಡೆದ ಹಿರೇಕೆರೂರು ಶಾಸಕ ಯು.ಬಿ ಬಣಕಾರ್

ದಾವಣಗೆರೆ: ಮಾಜಿ ಸಚಿವ ಬಿ ಸಿ ಪಾಟೀಲ್ ಅಳಿಯ ಪ್ರತಾಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬವಂತೂ ಅಳಿಯನ ಸಾವಿನಿಂದ ನೊಂದು ಕಣ್ಣಿರು ಹಾಕುತ್ತಿದ್ದಾರೆ. ಸದ್ಯ ಕತ್ತಲಗೆರೆ ಗ್ರಾಮಕ್ಕೆ ಮೃತ ಪ್ರತಾಪ್ ಪತ್ನಿ ಸೌಮ್ಯ, ತಂಗಿ ಸೃಷ್ಟಿ ಆಗಮಿಸಿದ್ದಾರೆ.

ಪತ್ನಿ ಸೌಮ್ಯ ಪತಿ ಪ್ರತಾಪ್​​​ಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಾವ ಬಿ ಸಿ ಪಾಟೀಲ್ ಆಗಮಿಸಿ ಅಳಿಯನ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಪತಿಯ ಪಾರ್ಥಿವ ಶರೀರ ಮುಂದೆ ಪತ್ನಿ ಕಣ್ಣೀರು ಹಾಕಿದ್ದಾರೆ.

ಬಿ .ಸಿ ಪಾಟೀಲ್ ಜೊತೆ ಹಿರೇಕೆರೂರು ಶಾಸಕ ಯು.ಬಿ ಬಣಕಾರ್ ಆಗಮಿಸಿದ್ದಾರೆ. ಮೃತ ಪ್ರತಾಪ್ ಗೆ ಶಾಸಕ ಬಣಕಾರ್ ಅಂತಿಮ ನಮನ ಸಲ್ಲಿಸಿದ್ದಾರೆ.

ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ರತಾಪ್​ ಅಂತ್ಯಕ್ರಿಯೆ ನೆರವೇರಲಿದೆ. ವೀರಶೈವ ಸಂಪ್ರದಾಯದಂತೆ, ಅವರ ತೋಟದಲ್ಲಿರುವ ತಂದೆಯ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment