newsfirstkannada.com

ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ; ಸಚಿವ ನಾಗೇಂದ್ರ ತಲೆದಂಡಕ್ಕೆ ಅಸಲಿ ಕಾರಣವೇನು?

Share :

Published June 6, 2024 at 9:34pm

  ರಾಜೀನಾಮೆ ನೀಡಿ ಕಾವೇರಿ ನಿವಾಸದಿಂದ ತೆರಳಿದ ಮಾಜಿ ಸಚಿವ

  ಒಂದೇ ಸಾಲಿನಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದ ಸಚಿವ ಬಿ. ನಾಗೇಂದ್ರ

  ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ ಅಧೀಕ್ಷಕ ಚಂದ್ರಶೇಖರ್

ವಾಲ್ಮೀಕಿ ನಿಗಮದ ಅವ್ಯವಹಾರ ಆರೋಪದಲ್ಲಿ ಸರ್ಕಾರದ ಮೊದಲ ವಿಕೆಟ್ ಪತನವಾಗಿದೆ. ನಾನವನಲ್ಲ ನಾನೇನು ತಪ್ಪು ಮಾಡಿಲ್ಲ ಅಂತಾ ಇಷ್ಟು ದಿನ ಹೇಳ್ತಿದ್ದ ಸಚಿವ ನಾಗೇಂದ್ರ ಕೊನೆಗೂ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಚಾರ ತಾಂಡವ ಆಡ್ತಿದ್ಯಾ ಎಂಬ ಪ್ರಶ್ನೆ ಉದ್ಭವವಾಗಿತ್ತು. ಈ ಹಗರಣದಲ್ಲಿ ಸಚಿವರ ಹೆಸರು ಕೇಳಿಬಂದಾಗ ವಿಪಕ್ಷಗಳ ಟೀಕೆಗೆ ಕಾಂಗ್ರೆಸ್‌ಗೆ ಬಾಯಿ ಕೊಡೋಕೆ ಆಗುತ್ತಿರಲಿಲ್ಲ.

ಇದನ್ನೂ ಓದಿ: VIDEO: ಏರ್‌ಪೋರ್ಟ್‌ನಲ್ಲಿ ಕಂಗನಾ ರನೌತ್‌ಗೆ ಕಪಾಳ ಮೋಕ್ಷ; ಅಸಲಿಗೆ ಆಗಿದ್ದೇನು?

ಆದ್ರೀಗ ಹಗರಣದಲ್ಲಿ ಸಚಿವರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನು, ರಾಜೀನಾಮೆ ಸಲ್ಲಿಸೋಕು ಮುಂಚೆಯೇ ಡಿ.ಕೆ ಶಿವಕುಮಾರ್ ನಾಗೇಂದ್ರ ಅವರು ರಾಜೀನಾಮೆ ಸಲ್ಲಿಸಿದ್ರು ಅಂತಾ ಹೇಳಿಕೆ ಕೊಟ್ಟಿದ್ದರು.  ಸುದ್ದಿಗೋಷ್ಠಿಯೊಂದರಲ್ಲಿಯೇ ಡಿ.ಕೆ ಶಿವಕುಮಾರ್‌ಗೆ ನಾಗೇಂದ್ರ ಫೋನ್ ಮಾಡಿ ನಾನು ರಾಜೀನಾಮೆ ಇನ್ನು ಸಲ್ಲಿಸಿಲ್ಲ ಅಂತಾ ತಿಳಿಸಿದ್ರು. ತಕ್ಷಣ ಡಿ.ಕೆ ಶಿವಕುಮಾರ್ ನಾಗೇಂದ್ರ ರಾಜೀನಾಮೆ ಕೊಟ್ಟಿಲ್ಲ ಅಂದ್ರು. ಇದ್ರಿಂದಾಗಿ ನಾಗೇಂದ್ರ ರಾಜೀನಾಮೆ ಪ್ರಹಸನ ನಡೆಯಿತು.

ದಲಿತರ ಹಣ ನುಂಗಿದ ಸಚಿವ ನಾಗೇಂದ್ರ ರಾಜೀನಾಮೆ ನೀಡಲಿ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯ್ತು. ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ಸುನೀಲ್ ಕುಮಾರ್ ಹಾಗೂ ಛಲವಾದಿ ನಾರಾಯಣಾ ಸ್ವಾಮಿ ಸೇರಿದಂತೆ ಹಲವರು ಭಾಗಿಯಾಗಿದ್ರು. ವಿಧಾನಸೌಧದಿಂದ ರಾಜಭವನದವರೆಗೂ ಕಾಲ್ನಡಿಗೆ ಜಾಥಾದ ಮೂಲಕ ನಾಗೇಂದ್ರರನ್ನ ಕ್ಯಾಬಿನೆಟ್‌ನಿಂದ ವಜಾಗೊಳಿಸುವಂತೆ ಬಿಜೆಪಿ ನಿಯೋಗ ಮನವಿ ಮಾಡ್ತು. ಪ್ರತಿಭಟನೆ ಬೆನ್ನಲ್ಲೇ ನಾಗೇಂದ್ರ ರಾಜೀನಾಮೆ ಮಾಡಿದ್ದರು. ವಾಲ್ಮೀಕಿ ನಿಗಮದಲ್ಲಿ ನಡೆದ ಅವ್ಯವಹಾರ ದಿನದಿಂದ ದಿನಕ್ಕೆ ಒಬ್ಬೊಬ್ಬರನ್ನೇ ಸುತ್ತಿಕೊಳ್ತಿದೆ. ಮುಜುಗರದಿಂದ ಪಾರಾಗಲು ಸಚಿವ ನಾಗೇಂದ್ರ ರಾಜೀನಾಮೆ ಏನೋ ಕೊಟ್ರು. ಆದ್ರೆ ಇದರಲ್ಲಿ ಅವರ ಕೈವಾಡ ಇದ್ಯೋ ಇಲ್ವೋ ಅಂತಾ ತನಿಖೆ ನಂತರವೇ ಗೊತ್ತಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ; ಸಚಿವ ನಾಗೇಂದ್ರ ತಲೆದಂಡಕ್ಕೆ ಅಸಲಿ ಕಾರಣವೇನು?

https://newsfirstlive.com/wp-content/uploads/2024/06/nagendra-1.jpg

Load More