Advertisment

ಮಾಜಿ ಸಚಿವ ನಾಗೇಂದ್ರ ED ಕಸ್ಟಡಿಗೆ.. 13 ಮಂದಿ ಅರೆಸ್ಟ್​, ಎಲ್ಲಿದ್ದಾರೆ ಇನ್ನೂ 8 ಆರೋಪಿಗಳು..?

author-image
Bheemappa
Updated On
ಮಾಜಿ ಸಚಿವ ನಾಗೇಂದ್ರ ED ಕಸ್ಟಡಿಗೆ.. 13 ಮಂದಿ ಅರೆಸ್ಟ್​, ಎಲ್ಲಿದ್ದಾರೆ ಇನ್ನೂ 8 ಆರೋಪಿಗಳು..? 
Advertisment
  • ಇಡಿ ಈಟಿಯಿಂದ ಸದ್ಯಕ್ಕೆ ಬಚಾವ್​ ಆದ ಶಾಸಕ ಬಸನಗೌಡ ದದ್ದಲ್​
  • 2 ದಿನಗಳಿಂದ ದಾಳಿ, ಪರಿಶೀಲನೆ, ವಿಚಾರಣೆ ಬಳಿಕ ನಾಗೇಂದ್ರ ಅರೆಸ್ಟ್
  • ಕಾಂಗ್ರೆಸ್​​​ ಸರ್ಕಾರದ ಮಾಜಿ ಸಚಿವರೊಬ್ಬರ ಜೈಲು ಪರೇಡ್ ಆರಂಭ​

ವಾಲ್ಮೀಕಿ ನಿಗಮದಲ್ಲಿ ನಡೆದ ನೂರಾರು ಕೋಟಿ ರೂ. ಹಗರಣದ ಕೇಸ್​ನಲ್ಲಿ ಇಡಿ ಬಹುದೊಡ್ಡ ಬೇಟೆ ಆಡಿದೆ. ಮಾಜಿ ಸಚಿವ ಬಿ ನಾಗೇಂದ್ರರನ್ನ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆ ಬೆಳಗ್ಗೆ ವಶಕ್ಕೆ ಪಡೆದಿದ್ದ ಇಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ ಬಳಿಕ ಅರೆಸ್ಟ್​ ಮಾಡಿದ್ದಾರೆ. ಮಾತ್ರವಲ್ಲ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

Advertisment

publive-image

ರಾತ್ರಿ ಮೆಡಿಕಲ್​ ಚೆಕಪ್​ ಮಾಡಿಸಿದ ಅಧಿಕಾರಿಗಳು!

ಇ.ಡಿ ಈಟಿಗೆ ಸಿಲುಕಿದ ಮಾಜಿ ಸಚಿವ ನಾಗೇಂದ್ರ ಬಂಧನವಾಗಿದೆ. ಈ ಮೂಲಕ ಕಾಂಗ್ರೆಸ್​​​ ಸರ್ಕಾರದಲ್ಲಿ ಮಾಜಿ ಸಚಿವರೊಬ್ಬರ ಜೈಲು ಪರೇಡ್​ ಆರಂಭವಾಗಿದೆ. 2 ದಿನಗಳಿಂದ ನಿರಂತರ ದಾಳಿ, ಪರಿಶೀಲನೆ, ವಿಚಾರಣೆ ಬಳಿಕ ನಾಗೇಂದ್ರರನ್ನ ವಶಕ್ಕೆ ಪಡೆದಿದ್ದ ಇ.ಡಿ ನಿನ್ನೆ ರಾತ್ರಿ ಬಂಧಿಸಿದೆ.

ಮಾಜಿ ಸಚಿವ ನಾಗೇಂದ್ರ ಅರೆಸ್ಟ್​!

  • ನಾಗೇಂದ್ರ ನಿವಾಸದ ಮೇಲೆ ಸುದೀರ್ಘ 13 ಗಂಟೆಗಳ ದಾಳಿ
  • ದಾಳಿ ಬಳಿಕ ಮಾಜಿ ಸಚಿವ ನಾಗೇಂದ್ರರನ್ನ ಬಂಧಿಸಿದ ಇ.ಡಿ
  • ಬಂಧನ ಬಳಿಕ ಬೌರಿಂಗ್ ಆಸ್ಪತ್ರೆಗೆ ಕರೆತಂದ ಅಧಿಕಾರಿಗಳು
  • ರಾತ್ರಿಯೇ ನಾಗೇಂದ್ರಗೆ ಮೆಡಿಕಲ್ ಚೆಕಪ್​ ಮಾಡಿಸಿದ ಇ.ಡಿ
  • ಸಮಯದ ಅಭಾವ ಕಾರಣ ಜಡ್ಜ್​​ ನಿವಾಸಕ್ಕೆ ಹಾಜರು
  • ಜುಲೈ 18ವರೆಗೆ ಇಡಿ ಕಸ್ಟಡಿ ನೀಡಿರುವ ನ್ಯಾಯದೀಶರು
  • ಇಂದಿನಿಮದ 6 ದಿನ ಇಡಿ ಕಸ್ಟಡಿ ನೀಡಿರುವ ನ್ಯಾಯದೀಶರು

ಕಸ್ಟಡಿ ಪಡೆದ ಬೆನ್ನಲ್ಲೇ ನಾಗೇಂದ್ರ ಅವರನ್ನು ಅಧಿಕಾರಿಗಳು ಇಡಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ನಿನ್ನೆ ಇಡಿ ಕಚೇರಿಯಲ್ಲಿ ಇಬ್ಬರು ಆರೋಪಿಗಳ ಸಮ್ಮುಖದಲ್ಲಿ ನಾಗೇಂದ್ರ ವಿಚಾರಣೆ ನಡೆದಿದೆ. ಇವತ್ತೂ ಕೂಡ ಅಲ್ಲಿಯೇ ಪ್ರಕರಣಕ್ಕೆ ಸಂಬಂಧಿಸಿ ತೀವ್ರ ವಿಚಾರಣೆ ನಡೆಸಲಿದ್ದಾರೆ.

Advertisment

ಇದನ್ನೂ ಓದಿ:ಅನಂತ್ ಅಂಬಾನಿ-ರಾಧಿಕಾ ವಿವಾಹ ಸಂಭ್ರಮ.. ಮದುವೆಯಲ್ಲಿ ಗಣ್ಯರು ಭಾಗಿ.. ಯಶ್ ಸೇರಿ ಯಾರೆಲ್ಲ ಇದ್ದಾರೆ..?

publive-image

ಇದೇ ಕೇಸ್​​ನಲ್ಲಿ ಎಸ್​​ಐಟಿ ಅಂಗಳಕ್ಕೆ ತೆರಳಿದ್ದ ಶಾಸಕ ಬಸನಗೌಡ ದದ್ದಲ್​, ಇಡಿ ಈಟಿಯಿಂದ ಸದ್ಯಕ್ಕೆ ಬಚಾವ್​ ಆಗಿದ್ದಾರೆ. ನಿನ್ನೆ ಬೆಳಗ್ಗೆ 10:45ರ ಸುಮಾರಿಗೆ ಸಿಐಡಿ ಕಚೇರಿಗೆ ಆಗಮಿಸಿದ್ದ ದದ್ದಲ್, ಸಂಜೆ ಸರಿ ಸುಮಾರು 7ರ ಹೊತ್ತಿಗೆ ತೆರಳಿದ್ದರು. ಮಾಧ್ಯಮಗಳ ಕಣ್ತಪ್ಪಿಸಿ ಪೊಲೀಸ್ ವಾಹನದಲ್ಲಿ ನಿರ್ಗಮಿಸಿದ ಶಾಸಕ ದದ್ದಲ್​ಗೆ ಇವತ್ತೂ ಸಹ ವಿಚಾರಣೆಗೆ ಎಸ್​ಐಟಿ ನೋಟಿಸ್​​ ನೀಡಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ MUDA ಜತೆ ವಾಲ್ಮೀಕಿ ಹಗರಣದ ಸಂಕಷ್ಟ.. ಪ್ರಕರಣದ ಅಸಲಿ ರಹಸ್ಯಗಳೇನು?

Advertisment

ವಾಲ್ಮೀಕಿ ನಿಗಮ ಹಗರಣದಲ್ಲಿ ಈವರೆಗೆ ನಾಗೇಂದ್ರ ಸೇರಿ 13 ಜನ ಬಂಧನವಾಗಿದೆ. 8 ಜನ ತಲೆಮರೆಸಿಕೊಂದಿದ್ದಾರೆ.. ಇನ್ನೊಬ್ಬರು ಎಸ್​ಐಟಿ ವಿಚಾರಣೆಯಲ್ಲಿದ್ದಾರೆ.. ಈ ಎಲ್ಲ ಬೆಳವಣಿಗೆ ಸರ್ಕಾರವನ್ನ ಮಾತ್ರ ಮುಜುಗರಕ್ಕೆ ತಳ್ಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment