newsfirstkannada.com

ಬಿಜೆಪಿ ಬೇಗುದಿಗೆ ಮದ್ದರೆಯುತ್ತಿದ್ದಾರೆ BSY! ಕದನ ಕಣದಲ್ಲಿ ಅಪ್ಪನಂತೆ ವಿಜಯೇಂದ್ರ ರಾಜಕೀಯ ಚತುರತೆ

Share :

Published April 2, 2024 at 7:09am

    ಹೈಕಮಾಂಡ್​ ಇಟ್ಟ ವಿಶ್ವಾಸ ಉಳಿಸಿಕೊಳ್ಳಲು ಶತಪ್ರಯತ್ನಕ್ಕೆ ಇಳಿದ ಬಿಎಸ್​ವೈ

    ಹೊಳಲ್ಕೆರೆ ಶಾಸಕ ಚಂದ್ರಪ್ಪ ಪುತ್ರ ರಘುಚಂದನ್​​​ ಬಂಡಾಯಕ್ಕೆ ವ್ಯಾಕ್ಸಿನ್​​!

    ಖಾಸಗಿ ಹೋಟೆಲ್​ನಲ್ಲಿ ಪ್ರೀತಂಗೌಡ ಜೊತೆ ವಿಜಯೇಂದ್ರ ಸಂಧಾನ

ಲೋಕಸಭೆ ಚುನಾವಣೆ ಮೋದಿಗಷ್ಟೇ ಅಲ್ಲ, ಬಿಎಸ್​​ವೈ ಪಾಲಿಗೂ ಪ್ರತಿಷ್ಠೆ. ವಿಧಾನಸಭೆ ಎಲೆಕ್ಷನ್​​ಗೂ ಮುನ್ನ ನಡೆದ ಬೆಳವಣಿಗೆಯಿಂದ ಪಾಠ ಕಲಿತ ಹೈಕಮಾಂಡ್​​​, ಈಗ ಮತ್ತೆ ಕ್ಯಾಪ್ಟನ್​​ಶಿಪ್​​ ನೀಡಿದೆ. ಪುತ್ರನಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿ ಲೋಕಸಭೆ ದಿಗ್ವಿಜಯಕ್ಕಾಗಿ ರೇಸ್​ಗೆ ಇಳಿಸಲಾಗಿದೆ. ಈ ರೇಸ್​ಗೆ ಮಾಜಿ ಸಿಎಂ ಯಡಿಯೂರಪ್ಪ ಸಹ ಬಲ ತುಂಬಿದ್ದಾರೆ. ಹೈಕಮಾಂಡ್​ ಇಟ್ಟ ವಿಶ್ವಾಸ ಉಳಿಸಿಕೊಳ್ಳಲು ಶತಪ್ರಯತ್ನಕ್ಕೆ ಇಳಿದಿದ್ದಾರೆ.

ಮೂನ್ನೂರಲ್ಲ, ನಾನೂರು. ಇದು ಇತಿಹಾಸ ಬರೆಯಲು ಹೊರಟ ಮೋದಿ ಕನಸು. ಈ ಕನಸಿನ ಬೆನ್ನೇರಿ ಬೆಂಬಲವಾಗಿ ನಿಂತಿದ್ದು ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರು. ಈ ನಾನೂರು ಟಾರ್ಗೆಟ್​​ ಕ್ರಾಸ್​​ಗೆ ಕಾಂಗ್ರೆಸ್​​​ ಮಣಿಸಿ ರಾಜ್ಯದಲ್ಲಿ 28 ಕ್ಷೇತ್ರ ಗೆದ್ದು ಬೀಗಿದಾಗ ಮಾತ್ರ ಅದಕ್ಕೊಂದು ಆತ್ಮತೃಪ್ತಿ. ಈ ಸಾಧ್ಯತೆಯ ನೊಗ ಹೆಗಲೇರಿಸಿ ಹೊರಟ ಮಾಜಿ ಸಿಎಂ ಬಿಎಸ್​​ವೈ ಮತ್ತು ವಿಜಯೇಂದ್ರ.. ಬೀದರ್​​ ಟು ಚಾಮರಾಜನಗರ ವರೆಗೆ ಹಾರಿದ ಬಂಡಾಯದ ಕಿಡಿಗೆ ಅಶ್ರುವಾಯು ಪ್ರಯೋಗ ಆಗ್ತಿದೆ.

ನಾಯಕತ್ವ ಸಿಕ್ಕ ಬಳಿಕ ಫೀಲ್ಡ್​​ಗಿಳಿದ ಬಿಜೆಪಿ ಪಾಲಿನ ರಾಜಾಹುಲಿ, ಪಕ್ಷ ಬಿಟ್ಟವರನ್ನ ಮರಳಿ ಪಕ್ಷದ ತೆಕ್ಕೆಗೆ ಬಾಚಿದ್ದಾರೆ. ಬಂಡೆದ್ದ ಜಾಗಕ್ಕೆ ಹೋಗಿ ಮದ್ದು ನೀಡಿ ಮದ್ದಾನೆಗಳನ್ನ ಪಳಗಿಸ್ತಿದ್ದಾರೆ.. ಬೆಂಗಳೂರು ಉತ್ತರ, ಕೋಲಾರ, ರಾಯಚೂರು, ಬೆಳಗಾವಿ, ಬೀದರ್​ನಲ್ಲಿ ಎದ್ದಿದ್ದ ಅಸಮಾಧಾನ ಶಮನವಾಗಿದೆ. ನಿನ್ನೆ ಸರಣಿಯಾಗಿ ನಡೆದ ಸಂಧಾನಗಳು ಸಫಲಕ್ಕೆ ತಳ್ಳಿ, ಯುದ್ಧಕ್ಕೂ ಮುನ್ನವೇ ಅರ್ಧ ಗೆಲುವಿನ ನಗೆ ಬೀರಿದ್ದಾರೆ.

ದುರ್ಗದ ಗುಹೆಗೆ ನುಗ್ಗಿದ ಯಡಿಯೂರಪ್ಪ

ಚಿತ್ರದುರ್ಗದ ಟಿಕೆಟ್​​ಗಾಗಿ ಬಂಡೆದ್ದ ಹೊಳಲ್ಕೆರೆ ಶಾಸಕ ಚಂದ್ರಪ್ಪ ಪುತ್ರ ರಘುಚಂದನ್​​​ಗೆ ಬೆಂಗಳೂರಿಗೆ ಕರೆಯಿಸಿ ರಾಜೀ ಸಂಧಾನ ಮುಗಿಸಿದ್ದಾರೆ.. ಶಾಸಕ ಚಂದ್ರಪ್ಪ ಜೊತೆ ಮಾತುಕತೆ ನಡೆಸಿದ ಬಿಎಸ್​​ವೈ, ಬಂಡಾಯವನ್ನ ಶಮನ ಮಾಡುವಲ್ಲಿ ಸಕ್ಸಸ್​ ಆಗಿದ್ದಾರೆ.

ಇತ್ತ, ಚಿಕ್ಕಬಳ್ಳಾಪುರದಲ್ಲಿ ಹಾರಿದ್ದ ಬಂಡಾಯದ ಬಾವುಟ ಕೆಳಗಿಳಿದಿದೆ.. ಯಡಿಯೂರಪ್ಪ ಸೂಚನೆ ಮೇರೆಗೆ ಭೇಟಿಗೆ ಆಗಮಿಸಿದ ಎಸ್.ಆರ್ ವಿಶ್ವನಾಥ್​ರನ್ನ ಮಾತುಕತೆ ನಡೆಸಿದ್ದಾರೆ.. ಮೋದಿ ಹೆಸರಲ್ಲಿ ಮತ ಕೇಳಲು ಒಪ್ಪಿದ್ದಾರೆ.. ಆದ್ರೆ, ಸುಧಾಕರ್​ ಮೇಲಿನ ಸಿಟ್ಟು ಮಾತ್ರ ಕರಗಿಲ್ಲ..

ಹಾಸನ ಕದನದಲ್ಲಿ ಅಸಮಾಧಾನ ತಣಿಸಲು ಕಸರತ್ತು!

ಇನ್ನು, ದಳ ಪಾಲಾಗಿರುವ ಹಾಸನ ಕ್ಷೇತ್ರದಲ್ಲಿ ಬಿಜೆಪಿಯೊಳಗೆ ಎದ್ದಿದ್ದ ಅಸಮಾಧಾನವನ್ನ ವಿಜಯೇಂದ್ರ ಶಮನ ಮಾಡಿದ್ದಾರೆ.. ಹಾಸನ ಕ್ಷೇತ್ರದ ಸಮನ್ವಯ ಸಭೆ ನಡೆಸಿದ ವಿಜಯೇಂದ್ರ ಸಂಧಾನ ನಡೆಸಿದ್ರು.. ಪ್ರಜ್ವಲ್ ರೇವಣ್ಣರನ್ನ ಗೆಲ್ಲಿಸಬೇಕು.. ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು ಅನ್ನೋ ತೀರ್ಮಾನಕ್ಕೆ ಪ್ರೀತಂಗೌಡ ಸಮ್ಮತಿಸಿದ್ರು.. ಆಪ್ತನನ್ನ ಅಖಾಡದಿಂದ ಹಿಂದಕ್ಕೆ ಸರಿಸಿದ್ರು..

ಇದನ್ನೂ ಓದಿ: ಅಬ್ಬಾ! ಇವರ ಆಸ್ತಿನೇ.. ಒಬ್ಬೊಬ್ಬರು ಕೋಟಿ ಕುಬೇರರು.. ಯದುವೀರ್, ರಕ್ಷಾ ರಾಮಯ್ಯ, ಡಾ ಸುಧಾಕರ್​ ಆಸ್ತಿ ಎಷ್ಟು ಗೊತ್ತಾ?

ಒಟ್ಟಾರೆ, ತಮ್ಮ ಮೇಲೆ ಇಟ್ಟ ವಿಶ್ವಾಸ ಉಳಿಸಿಕೊಳ್ಳಲು ಬಿಎಸ್​​ವೈ ಅಂತಿಮ ಯುದ್ಧಕ್ಕೆ ಶಸ್ತ್ರ ಸಜ್ಜಿತರಾಗಿದ್ದಾರೆ.. ಹಲವು ಕ್ಷೇತ್ರಗಳಲ್ಲಿ ಎದುರಾಗಿದ್ದ ಬಂಡಾಯವನ್ನ ಬಿಎಸ್​ವೈ ಮತ್ತು ವಿಜಯೇಂದ್ರ ಸಂಧಾನದ ಮೂಲಕ ಬಗೆಹರಿಸ್ತಿದ್ದಾರೆ.. ಈ ಮೂಲಕ ಆತಂಕದಲ್ಲಿ ಕಮಲ ನಳನಳಿಸ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಬೇಗುದಿಗೆ ಮದ್ದರೆಯುತ್ತಿದ್ದಾರೆ BSY! ಕದನ ಕಣದಲ್ಲಿ ಅಪ್ಪನಂತೆ ವಿಜಯೇಂದ್ರ ರಾಜಕೀಯ ಚತುರತೆ

https://newsfirstlive.com/wp-content/uploads/2024/04/BSY.jpg

Load More