/newsfirstlive-kannada/media/post_attachments/wp-content/uploads/2025/07/sarojadevi11.jpg)
ಸ್ಯಾಂಡಲ್​​ವುಡ್​ನ ಅಭಿನಯ ಸರಸ್ವತಿ, ಹಿರಿಯ ನಟಿ ಬಿ.ಸರೋಜಾ ದೇವಿ (B.Saroja Devi) ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇಂದು ಬೆಳಗ್ಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. 60 ವರ್ಷದಲ್ಲಿ ಸುಮಾರು 200 ಚಿತ್ರಗಳಲ್ಲಿ ಅಭಿನಯಿಸಿದ್ದರು. ಆ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಅಭಿನಯ ಸರಸ್ವತಿ ಎಂದು ಬಿರುದು ಪಡೆದುಕೊಂಡರು.
/newsfirstlive-kannada/media/post_attachments/wp-content/uploads/2025/07/sarojadevi7.jpg)
ಜನಪ್ರಿಯತೆ ತಂದುಕೊಟ್ಟ ಸಿನಿಮಾ ಯಾವುದು..?
ಅಂದ್ಹಾಗೆ ಚತುರ್ಭಾಷಾ ತಾರೆ ಬಿ.ಸರೋಜಾದೇವಿ ಅಪ್ಪಟ ಕನ್ನಡದ ಪ್ರತಿಭೆ. ಕಿತ್ತೂರು ಚೆನ್ನಮ್ಮ (1961) ಸರೋಜಾದೇವಿ ಅವರಿಗೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ ಆಗಿದೆ. ಜೊತೆಗೆ ರಾಜ್‌ಕುಮಾರ್ ಜೊತೆ ನಟಿಸಿದ್ದ ‘ಅಣ್ಣ ತಂಗಿ’ ಚಿತ್ರವೂ ಹೆಚ್ಚು ಜನಮನ್ನಣೆ ನೀಡಿತ್ತು.
ಕನ್ನಡದ ಮೊಟ್ಟಮೊದಲ ವರ್ಣಮಯ ಚಿತ್ರ ‘ಅಮರ ಶಿಲ್ಪಿ ಜಕಣಾಚಾರಿ’ ಚಿತ್ರದ ನಾಯಕಿಯಾಗಿ ನಟಿಸಿದ್ದರು. ‘ಮಲ್ಲಮ್ಮನ ಪವಾಡ’, ‘ಭಾಗ್ಯವಂತರು’, ‘ಬಬ್ರುವಾಹನ’, ‘ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ’, ‘ಲಕ್ಷ್ಮೀಸರಸ್ವತಿ’, ‘ಕಥಾಸಂಗಮ’ದಲ್ಲಿ ಹೆಚ್ಚು ಸದ್ದು ಮಾಡಿದ್ದರು.
ಇದನ್ನೂ ಓದಿ: ಅಭಿನಯ ಸರಸ್ವತಿಗೆ ಭಾವುಕ ವಿದಾಯ.. ಗಣ್ಯರಿಂದ ನುಡಿ ನಮನ, ಯಾರು ಏನಂದ್ರು..?
/newsfirstlive-kannada/media/post_attachments/wp-content/uploads/2025/07/sarojadevi13.jpg)
ಕನ್ನಡದ ಜೊತೆಗೆ ತಮಿಳು ಚಿತ್ರರಂಗದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದ ಅವರನ್ನು ‘ಕನ್ನಡತ್ತು ಪೈಂಗಿಳಿ’ (ಕನ್ನಡದ ಸುಂದರಗಿಣಿ) ಎಂದೇ ಅಭಿಮಾನದಿಂದ ಕರೆಯಲಾಗ್ತಿತ್ತು. ಎಂಜಿಆರ್ ಜೋಡಿಯಾಗಿ ಸರೋಜಾದೇವಿ ತಮಿಳು ಚಿತ್ರರಂಗದ ಅಪಾರ ಸಾಧನೆ ಮಾಡಿದ್ದರು. ವಿಶೇಷ ಅಂದರೆ ಎಂಜಿಆರ್ ಜೋಡಿಯಾಗಿ 26 ಚಿತ್ರಗಳಲ್ಲಿ ಅಭಿನಯಿಸಿದ್ದರು. ಅನ್ಬೇವಾ, ಎಂಗವೀಟ್ಟು ಪಿಳ್ಳೈ, ತಿರುಡಾದೆ, ಪಡಕೋಟಿ ಮೊದಲಾದ ಚಿತ್ರಗಳಲ್ಲಿ ಎಂಜಿಆರ್-ಸರೋಜಾದೇವಿ ಜೋಡಿಯ ಪ್ರಮುಖ ಚಿತ್ರಗಳಾಗಿವೆ.
ಇದನ್ನೂ ಓದಿ: Breaking: ಸ್ಯಾಂಡಲ್​​ವುಡ್​ನ ಅಭಿನಯ ಸರಸ್ವತಿ ಬಿ.ಸರೋಜಾದೇವಿ ಇನ್ನಿಲ್ಲ
/newsfirstlive-kannada/media/post_attachments/wp-content/uploads/2025/07/sarojadevi2.jpg)
ಶಿವಾಜಿ ಗಣೇಶನ್ ಅವರೊಂದಿಗೆ ಆಲಯಮಣಿ, ಪಾಲುಂ ಪಳಮುಂ, ಪುದಿಯ ಪರವೈ ಸೇರಿದಂತೆ 22 ಚಲನಚಿತ್ರಗಳಲ್ಲೂ ಅಭಿನಯಿಸಿದ್ದರು. ತೆಲುಗಿನಲ್ಲೂ ನಾಗೇಶ್ವರರಾವ್, ಎನ್‌ಟಿಆರ್ ಚಿತ್ರಗಳಲ್ಲಿ ನಾಯಕಿಯಾಗಿದ್ದರು, ಹಿಂದಿಯಲ್ಲಿ ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ಶಮ್ಮಿ ಕಪೂರ್, ಸುನಿಲ್ ದತ್ ಜೊತೆ ಅಭಿನಯಿಸಿದ್ದರು.
ಇದನ್ನೂ ಓದಿ: ಬಿ.ಸರೋಜಾ ದೇವಿ ಇನ್ನು ನೆನಪು ಮಾತ್ರ; ಮಹಾನ್ ನಟಿಯ ಅಪರೂಪದ ಫೋಟೋಗಳು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us