/newsfirstlive-kannada/media/post_attachments/wp-content/uploads/2025/07/SAROJA_DEVI_PUNEETH.jpg)
ಬೆಂಗಳೂರು: ಅಭಿನಯ ಸರಸ್ವತಿ, ಹಿರಿಯ ನಟಿ ಬಿ ಸರೋಜಾ ದೇವಿ (87) ಅವರು ಇಂದು ಬೆಂಗಳೂರಿನ ಮಲ್ಲೇಶ್ವರಂನ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಹುಟ್ಟೂರು ಚನ್ನಪಟ್ಟಣದ ದಶಾವರದಲ್ಲಿ ಏಪ್ರಿಲ್ 15 ಅಂದರೆ ನಾಳೆ ಅಂತ್ಯಕ್ರಿಯೆ ನಡೆಸಲಾಗುತ್ತದೆ.
ಸುಮಾರು ಆರು ದಶಕಗಳ ಕಾಲ ದಕ್ಷಿಣ ಭಾರತ ಚಿತ್ರರಂಗದ ಸೇವೆ ಮಾಡಿರುವ ಬಹುಭಾಷಾ ನಟಿ ಸರೋಜಾ ದೇವಿ ಏಳು ಭಾಷೆಗಳಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರ ಸಾಧನೆಗೆ ಪ್ರಶಸ್ತಿಗಳು ಸಾಲುಗಟ್ಟಿ ಬಂದಿವೆ. ಸರೋಜಾ ದೇವಿ ಅವರ ಮಗನ ಪಾತ್ರದಲ್ಲಿ ಪುನೀತ್ ರಾಜ್​ಕುಮಾರ್ ಅಭಿನಯಿಸಿರುವುದು ಈಗಲೂ ಜನಮಾನಸದಲ್ಲಿ ಅಳಿದಿಲ್ಲ. ಇದಕ್ಕೆ ಕಾರಣ ಅದೊಂದು ಹಾಡು.
ಕಣ್ಣಿಗೆ ಕಾಣದ ದೇವರು ಎಂದರೆ ಅದು ಅಮ್ಮನು ತಾನೆ.. ಕಣ್ಣಿಗೆ ಕಾಣದ ದೇವರು ಎಂದರೆ ಅದು ಅಮ್ಮನು ತಾನೆ.. ಎನ್ನುವ ಹಾಡು ಈಗಲೂ ಜನಮಾನಸಲ್ಲಿ ಅಳಿಯದೇ ಉಳಿದಿದೆ. ಪುನೀತ್ ರಾಜ್​ಕುಮಾರ್ ಅವರ ಧ್ವನಿಯಿಂದ ಬಂದಿರುವ ಪ್ರತಿ ಹಾಡುಗಳು ಎಲ್ಲ ಸೂಪರ್ ಹಿಟ್​. ಅದರಂತೆ ಕಣ್ಣಿಗೆ ಕಾಣದ ದೇವರು ಎಂದರೆ ಅದು ಅಮ್ಮನು ತಾನೆ ಹಾಡನ್ನು ಬಾಲಕನಾಗಿದ್ದಾಗ ಪುನೀತ್ ರಾಜ್​ ಕುಮಾರ್ ಅವರು ಹಾಡಿದ್ದರು. ಈಗಲೂ ಈ ಸಾಂಗ್​ ಕೇಳಲು ಸುಮಧುರ.
1984ರಲ್ಲಿ ಬಿಡುಗಡೆಗೊಂಡ ಯಾರಿವನು ಸಿನಿಮಾದ ಹಾಡೇ ಕಣ್ಣಿಗೆ ಕಾಣದ ದೇವರು ಎಂದರೆ ಅದು ಅಮ್ಮನು ತಾನೆ ಆಗಿದೆ. ಈ ಸಿನಿಮಾವನ್ನು ಬಿ.ದೊರೈರಾಜು ಅವರು ನಿರ್ದೇಶನ ಮಾಡಿದ್ದರು. ಡಾ.ರಾಜ್​ಕುಮಾರ್ ಅವರು ಮುಖ್ಯಪಾತ್ರದಲ್ಲಿ ನಟಿಸಿದ್ದರು. ವಿಶೇಷ ಎಂದರೆ ಬಿ ಸರೋಜಾ ದೇವಿ ಅವರ ಮಗನಾಗಿ ಪುನೀತ್ ರಾಜ್​ಕುಮಾರ್ ಅವರು ಬಾಲಕನಾಗಿದ್ದಾಗ ಮನಮೋಹಕವಾಗಿ ನಟಿಸಿದ್ದರು. ಆವಾಗಲೇ ಪುನೀತ್​​ರನ್ನ ನೋಡಿ ಈ ಮಗು ನನ್ನ ಮಗವೇ ಆಗಿದ್ರೆ ಎಷ್ಟು ಚೆನ್ನಾಗಿತ್ತು ಎಂದು ಸರೋಜಾ ದೇವಿ ಅಂದುಕೊಂಡಿದ್ದರಂತೆ.
ಯಾರಿವನು ಸಿನಿಮಾದಲ್ಲಿ ಸರೋಜಾ ದೇವಿ ಅವರಿಗೆ ಪುನೀತ್ ರಾಜ್​ಕುಮಾರ್ ಮಗನಾಗಿ ನಟಿಸಿದ್ದಕ್ಕೆ ತುಂಬಾ ಸಂತೋಷ ಪಟ್ಟಿದ್ದರಂತೆ. ಸಿನಿಮಾದಲ್ಲಿ ಬಾಲಕನಾಗಿದ್ದ ಪುನೀತ್ ರಾಜ್​ಕುಮಾರ್ ಹುಟ್ಟುಹಬ್ಬದ ಸಮಾರಂಭದಲ್ಲಿ ಕೇಕ್ ಕಟ್ ಮಾಡಿ, ಸರೋಜಾ ದೇವಿ ಅವರಿಗೆ ಕೇಕ್ ತಿನ್ನಿಸಿ, ತಾಯಿಯನ್ನು ಉದ್ದೇಶಿಸಿ ಕಣ್ಣಿಗೆ ಕಾಣದ ದೇವರು ಎಂದರೆ ಅದು ಅಮ್ಮನು ತಾನೆ.. ಎನ್ನುವ ಹಾಡನ್ನು ಹಾಡುತ್ತಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಬರೀ ಸಮಸ್ಯೆಗಳು.. IT, BT ಕಂಪನಿಗಳನ್ನ ತುಮಕೂರು ನಗರಕ್ಕೆ ಸೆಳೆಯಲು ಪ್ಲಾನ್!
1984ರಲ್ಲಿ ಯಾರಿವನು ಸಿನಿಮಾದ ಬಳಿಕ ಮತ್ತೆ ಪುನೀತ್ ರಾಜ್​ಕುಮಾರ್ ಹಾಗೂ ಬಿ ಸರೋಜಾ ದೇವಿ ಅವರು ಒಟ್ಟಾಗಿ 2019ರಲ್ಲಿ ನಟಿಸಿದ್ದರು. ಪವನ್ ಒಡೆಯರ್​ ನಿರ್ದೇಶನದಲ್ಲಿ ಪುನೀತ್​ ರಾಜ್​ಕುಮಾರ್ ಲೀಡ್​ ರೋಲ್​ನಲ್ಲಿ ನಟಿಸಿದ್ದ ನಟಸಾರ್ವಭೌಮ ಸಿನಿಮಾದಲ್ಲಿ ಸರೋಜಾ ದೇವಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಇದೇ ಇವರ ಕೊನೆಯ ಸಿನಿಮಾವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ