/newsfirstlive-kannada/media/post_attachments/wp-content/uploads/2025/07/B-SAROJA-DEVI-10.jpg)
ಸ್ಯಾಂಡಲ್​​ವುಡ್​ನ ಅಭಿನಯ ಸರಸ್ವತಿ, ಹಿರಿಯ ನಟಿ ಬಿ.ಸರೋಜಾ ದೇವಿ (B.Saroja Devi) ನಿಧನರಾಗಿದ್ದಾರೆ. ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದವರು. 60 ವರ್ಷದಲ್ಲಿ ಸುಮಾರು 200 ಚಿತ್ರಗಳಲ್ಲಿ ಅಭಿನಯಿಸಿದ್ದರು. ಆ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಅಭಿನಯ ಸರಸ್ವತಿ ಎಂದು ಬಿರುದು ಪಡೆದುಕೊಂಡಿದ್ದರು.
ಇದನ್ನೂ ಓದಿ:ಬಿ.ಸರೋಜಾದೇವಿ, SM ಕೃಷ್ಣ ನಡುವೆ ಮದುವೆ ಪ್ರಸ್ತಾಪ.. ಆದರೆ ಸಂಬಂಧವಾಗಿ ಬದಲಾಗಲಿಲ್ಲ; ಯಾಕೆ ಗೊತ್ತಾ?
/newsfirstlive-kannada/media/post_attachments/wp-content/uploads/2025/07/B-SAROJA-DEVI-9.jpg)
ಭಾರತದ ಸಿನಿ ಜಗತ್ತಿನಲ್ಲಿ ಅತ್ಯಂತ ಯಶಸ್ವಿ ನಟಿಯಾಗಿದ್ದ ಸರೋಜಾದೇವಿ, ಚರ್ತುಭಾಷಾ ನಟಿ ಎಂದೇ ಹೆಸರು ವಾಸಿಯಾಗಿದ್ದರು. ಸರೋಜಾ ದೇವಿ ಅವರ ಜನ್ಮನಾಮ ರಾಧಾದೇವಿ ಎಂದಾಗಿತ್ತು. ಬೈರಪ್ಪ ಗೌಡ- ರುದ್ರಮ್ಮ ದಂಪತಿಗೆ 1938 ಜನವರಿ 7ರಂದು ಬೆಂಗಳೂರಿನಲ್ಲಿ ಸರೋಜಾದೇವಿ ಮಗಳಾಗಿ ಜನಿಸಿದ್ದರು. ತಂದೆ ಪೊಲೀಸ್​ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸರೋಜಾ ದೇವಿ ಬೈರಪ್ಪ ದಂಪತಿಗೆ ನಾಲ್ಕನೇ ಮಗಳಾಗಿದ್ದರು.
ಅಮ್ಮನಿಗೆ ಮಾತು ಕೊಟ್ಟಿದ್ದರು..
ಸರೋಜಾದೇವಿ ಬೆಂಗಳೂರಿನವರು. ಅವರ ತಂದೆ ಭೈರಪ್ಪ ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು. ತಾಯಿ ಗೃಹಿಣಿ ಆಗಿದ್ದರು. ನೃತ್ಯ ಕಲಿಯಲು ಹಾಗೂ ನಟನೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಭೈರಪ್ಪ ಅವರು ಮಗಳಿಗೆ ಪ್ರೋತ್ಸಾಹಿಸಿದರು. ಅವರು ನಟನೆಗೆ ಬರಲು ಸಿದ್ಧವಾದಾಗ ತಾಯಿ ಮಗಳಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ನೀಡಿದ್ದರು. ಈಜುಡುಗೆ ಹಾಗೂ ತೋಳಿಲ್ಲದ ಬ್ಲೌಸ್​​ನ ಯಾವಾಗಲೂ ಹಾಕಬಾರದು ಎಂದು ತಾಯಿ ಸ್ಟ್ರಿಕ್ಟ್ ಆಗಿ ಹೇಳಿದ್ದರು. ಇದನ್ನು ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಪರಿಪಾಲಿಸಿಕೊಂಡು ಬಂದಿದ್ದರು. ಅದೇ ಕಾರಣಕ್ಕೆ ಸರೋಜಾ ದೇವಿ ಯಾವುದೇ ಸಿನಿಮಾದಲ್ಲಿ ಬೋಲ್ಡ್​ ಆಗಿ ಕಾಣಿಸಿಕೊಂಡಿರಲಿಲ್ಲ. 161 ಸಿನಿಮಾಗಳಲ್ಲಿ ಲೀಡ್​ ರೋಲ್​ನಲ್ಲಿ ನಟಿಸಿರೋ ಅಭಿನಯ ಸರಸ್ವತಿ ಬಿ.ಸರೋಜಾ ದೇವಿ.
ಇದನ್ನೂ ಓದಿ: ನಿಧನಕ್ಕೂ ಮುನ್ನ ಬೆಳಗ್ಗೆ ನಟಿ ಸರೋಜಾ ದೇವಿಗೆ ಆಗಿದ್ದೇನು..? ಕೊನೆಯ ಕ್ಷಣ ಹೇಗಿತ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us