/newsfirstlive-kannada/media/post_attachments/wp-content/uploads/2025/07/sarojadevi13.jpg)
ಕನ್ನಡದ ಮೇರು ನಟಿ ಬಿ.ಸರೋಜಾದೇವಿ ಇಂದು ವಿಧಿವಶರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿದ್ದ ಅಭಿನಯ ಸರಸ್ವತಿ ಶಾಶ್ವತವಾಗಿ ಮರೆಯಾಗಿದ್ದಾರೆ. ಕನ್ನಡದ ಹಿರಿಯ ಕೊಂಡಿಯ ಅಗಲಿಕೆಗೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಮೊದಲ ಮಹಿಳಾ ಸೂಪರ್​ ಸ್ಟಾರ್​ ಆಗಿ ಗುರುತಿಸಿಕೊಂಡಿದ್ದ ಬಿ.ಸರೋಜಾ ದೇವಿ, ತಮ್ಮ ಬದುಕಿನಲ್ಲಿ ಅನೇಕ ನೋವುಗಳನ್ನು ಮೆಟ್ಟಿ ನಿಂತವರು. ಕಿತ್ತೂರು ರಾಣಿ ಚೆನ್ನಮ್ಮ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದ್ದ ಸರೋಜಾ ದೇವಿ, ವೈಯಕ್ತಿಕ ಬದುಕಿನಲ್ಲಿ ಮರೆಯಲಾಗದ ನೋವುಗಳನ್ನು ಅನುಭವಿಸಿದರು.
ಇದನ್ನೂ ಓದಿ: ಸರೋಜಾ ದೇವಿಗೆ ತುಂಬಾನೇ ಕಾಡಿದ ನೋವು ಅದು.. ಅಂದಿನಿಂದ ಚೇತರಿಸಿಕೊಳ್ಳಲು ತುಂಬಾ ವರ್ಷಗಳು ಬೇಕಾಯಿತು..
ಪತಿಯ ಅಗಲಿಕೆ..
ಬಿ.ಸರೋಜಾದೇವಿ 1967 ಮಾರ್ಚ್​​ 1ರಂದು ಎಂಜಿನಿಯರ್ ಶ್ರೀಹರ್ಷ ಎಂಬುವವರನ್ನ ವಿವಾಹವಾದರು. ಇವರು 1986ರಲ್ಲಿ ಪತಿ ಶ್ರೀಹರ್ಷ ಇಹಲೋಕ ತ್ಯಜಿಸಿಬಿಟ್ಟರು. ಪತಿ ನಿಧನ ಹೊಂದಿದ ನಂತರ ಅವರಿಗೆ ದುಃಖದಿಂದ ಆಚೆ ಬರಲು ತುಂಬಾ ವರ್ಷಗಳು ಬೇಕಾದವು. ಒಂದು ವರ್ಷಗಳ ಕಾಲ ಕ್ಯಾಮೆರಾವನ್ನೇ ಎದುರಿಸಿರಲಿಲ್ಲ. ಪತಿ ಹಾಗೂ ಕುಟುಂಬಸ್ಥರು ಅತಿಯಾಗಿ ಹೆಚ್ಚಿಕೊಂಡಿದ್ದ ಸರೋಜಾ ದೇವಿ, ಯಾರನ್ನೂ ಭೇಟಿ ಆಗಲಿಲ್ಲ. ಆದರೆ ಕೆಲವು ಸಿನಿಮಾಗಳಿಗೆ ಒಪ್ಪಂದ ಮಾಡಿಕೊಂಡಿದ್ದರ ಪರಿಣಾಮ ಅನಿವಾರ್ಯವಾಗಿ 1987ರಲ್ಲಿ ಚಿತ್ರೀಕರಣಕ್ಕೆ ಮರಳಿದ್ದರು. ಆದರೆ ಹೊಸ ಸಿನಿಮಾಗಳಿಗೆ ಅವರು ಸಹಿ ಮಾಡಲಿಲ್ಲ. ಬದಲಾಗಿ ಹಿಂದೆ ಸೈನ್ ಮಾಡಿದ್ದ ಸಿನಿಮಾಗಳನ್ನು ಮಾತ್ರ ಪೂರ್ಣಗೊಳಿಸಿಕೊಟ್ಟರು.
ಇದನ್ನೂ ಓದಿ: ಸರೋಜಾ ದೇವಿಗೆ ತುಂಬಾನೇ ಕಾಡಿದ ನೋವು ಅದು.. ಅಂದಿನಿಂದ ಚೇತರಿಸಿಕೊಳ್ಳಲು ತುಂಬಾ ವರ್ಷಗಳು ಬೇಕಾಯಿತು..
ಅಮ್ಮನ ಅಗಲಿಕೆ..
ಪತಿಯ ಅಗಲಿಕೆಯ ನೋವು ಮರೆಯುವಷ್ಟರಲ್ಲೇ ಅಮ್ಮ ರುದ್ರಮ್ಮ ನಿಧನರಾಗುತ್ತಾರೆ. ಸರೋಜಾ ದೇವಿಗೆ ಅಮ್ಮನ ಬೆಂಬಲವೂ ಇಲ್ಲದಂತಾಯಿತು. ಬೈರಪ್ಪ ಗೌಡ-ರುದ್ರಮ್ಮ ದಂಪತಿಗೆ 1938 ಜನವರಿ 7ರಂದು ಸರೋಜಾದೇವಿ ಜನಿಸಿದ್ದರು. ಸರೋಜಾ ದೇವಿ ಜನಿಸುತ್ತಿದ್ದಂತೆಯೇ ಅವರ ತಾತ, ದತ್ತು ನೀಡುವಂತೆ ಒತ್ತಾಯಿಸಿದ್ದರಂತೆ. ಆದರೆ ಸರೋಜಾ ದೇವಿಯ ತಾಯಿ ರುದ್ರಮ್ಮ ಹಠ ಮಾಡಿ ಉಳಿಸಿಕೊಂಡಿದ್ದರು. ಅಷ್ಟೇ ಅಲ್ಲದೇ, ಸರೋಜಾ ದೇವಿಗೆ ಚಿತ್ರರಂಗ ಪ್ರವೇಶ ಮಾಡಲು ಸಹಾಯ ಮಾಡಿದ್ದೇ ಅಮ್ಮ ರುದ್ರಮ್ಮ ಆಗಿದ್ದರು.
ಇದನ್ನೂ ಓದಿ: ಅಪ್ಪು ಜೊತೆ ಕೊನೆಯ ಸಿನಿಮಾದಲ್ಲಿ ನಟಿಸಿದ್ದ ಸರೋಜಾ ದೇವಿ.. ಆ ಚಿತ್ರ ಯಾವುದು?
ಮಗಳ ಅಗಲಿಕೆ..
ಸರೋಜಾ ದೇವಿ ಹಾಗೂ ಹರ್ಷ ದಂಪತಿಗೆ ಹರ್ಷ ಇಂದಿರಾ ಹಾಗೂ ಹರ್ಷ ಗೌತಮ್ ಎಂಬ ಇಬ್ಬರು ಮಕ್ಕಳಿದ್ದರು. ಅದರ ಜೊತೆಗೆ ಭುವನೇಶ್ವರಿ ಎಂಬ ಮಗುವನ್ನು ದತ್ತು ಪಡೆದುಕೊಂಡಿದ್ದರು. ಆದರೆ ಆ ಮಗು ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡಿತ್ತು. ಮಗಳ ನೆನಪಿಗಾಗಿ ಸರೋಜಾ ದೇವಿ ಸಾಹಿತ್ಯದಲ್ಲಿ ಸಾಧನೆ ಮಾಡಿದವರಿಗೆ ‘ಭುವನೇಶ್ವರಿ ಪ್ರಶಸ್ತಿ’ ನೀಡುತ್ತ ಬಂದಿದ್ದರು. ಅಲ್ಲದೇ ಪತಿ ಹಾಗೂ ಅಮ್ಮನ ನೆನಪಿಗಾಗಿ ಸಮಾಜಮುಖ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ