ಸರೋಜಾದೇವಿಗಾಗಿ ಕಂಬನಿ ಮಿಡಿದ ಚಿತ್ರರಂಗ.. ಇವತ್ತು ಹುಟ್ಟೂರಿನಲ್ಲಿ ಕಲಾದೇವಿಯ ಅಂತ್ಯಕ್ರಿಯೆ..

author-image
Ganesh
Updated On
ನಿಧನಕ್ಕೂ ಮುನ್ನ ಬೆಳಗ್ಗೆ ನಟಿ ಸರೋಜಾ ದೇವಿಗೆ ಆಗಿದ್ದೇನು..? ಕೊನೆಯ ಕ್ಷಣ ಹೇಗಿತ್ತು..?
Advertisment
  • ಇಹಲೋಕದ ನಟನೆ ಮುಗಿಸಿದ ಸರೋಜಾದೇವಿ
  • ತಮಿಳು ನಟರಾದ ಕಾರ್ತಿ, ವಿಶಾಲ್​ರಿಂದಲೂ ಅಂತಿಮ ದರ್ಶನ
  • ಒಕ್ಕಲಿಗ ಅಂತಿಮ ಸಂಪ್ರದಾಯದಂತೆ ವಿಧಿವಿಧಾನ

ಚಂದನವನದ ಅರಗಿಣಿ.. ಅಭಿನಯ ಸರಸ್ವತಿ, ಹಿರಿಯ ನಟಿ ಬಿ.ಸರೋಜಾದೇವಿ ಇಹಲೋಕ ತ್ಯಜಿಸಿದ್ದು ಇಡೀ ಸ್ಯಾಂಡಲ್​ವುಡ್ ಕಣ್ಣೀರಿಗೆ ಜಾರಿದೆ. ಚತುರ್ಭಾಷಾ ತಾರೆ ಬಿ.ಸರೋಜಾದೇವಿಗೆ ನಿಧನಕ್ಕೆ ಸಂತಾಪದ ಸಾಗರ ಹರಿದಿದೆ. ಹುಟ್ಟೂರಲ್ಲಿ ಶೋಕ ಮಡುಗಟ್ಟಿದ್ದು, ಇಂದು ಅಂತ್ಯಕ್ರಿಯೆ ನೆರವೇರಲಿದೆ.

ನಟ ಶಿವರಾಜಕುಮಾರ್, ರಾಘಣ್ಣ, ಜಗ್ಗೇಶ್, ಉಪೇಂದ್ರ ಸೇರಿದಂತೆ ಹಲವು ನಟರು ಸರೋಜಾದೇವಿಯವರ ಅಂತಿಮ ದರ್ಶನ ಪಡೆದುಕೊಂಡ್ರು. ನಟಿಯರಾದ ತಾರಾ, ಶೃತಿ, ಮಾಲಾಶ್ರೀ ಸೇರಿದಂತೆ ಹಲವು ಹಿರಿಯ ನಟಿಯರು ಸರೋಜಮ್ಮನ ಕೊನೆಯ ಬಾರಿ ಕಣ್ತುಂಬಿಕೊಂಡು ಕಣ್ಣಂಚಲಿ ನೀರು ತುಂಬಿಕೊಂಡ್ರು..

ಇದನ್ನೂ ಓದಿ: ಪತಿ, ಅಮ್ಮ, ಮಗಳು.. ಸಾಲು ಸಾಲು ನೋವುಗಳು; ಮಗಳ ನೆನಪಿಗಾಗಿ ಇಂದಿಗೂ ಭುವನೇಶ್ವರಿ ಪ್ರಶಸ್ತಿ..

publive-image

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲೇ ತಮಿಳು ಚಿತ್ರರಂಗದಲ್ಲೂ ಸರೋಜಾ ದೇವಿ ತಮ್ಮದೇ ಛಾಪು ಮೂಡಿಸಿದ್ದ ನಟಿ.. ಹೀಗಾಗಿ ತಮಿಳು ಚಿತ್ರರಂಗ ಕೂಡ ಅವ್ರ ಸಾವಿಗೆ ಕಂಬನಿ ಮಿಡಿದಿದೆ. ತಮಿಳು ನಟರಾದ ವಿಶಾಲ್‌, ಕಾರ್ತಿ ಸರೋಜಾ ದೇವಿಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ್ರು. ಇದೇ ವೇಳೆ ನಟ ಅರ್ಜುನ್ ಸರ್ಜಾ ಕೂಡ ಕುಟುಂಬ ಸಮೇತರಾಗಿ ಆಗಮಿಸಿ ಸರೋಜಾ ದೇವಿ ಅವ್ರಿಗೆ ಅಂತಿಮ ಗೌರವ ಸಲ್ಲಿಸಿದ್ರು. ಈ ವೇಳೆ ಮಾತ್ನಾಡಿದ ತಮಿಳು ನಟ ವಿಶಾಲ್‌, ಸರೋಜಮ್ಮಗೆ ರೀಪ್ಲೇಸ್ ಅನ್ನೋದೆ ಇಲ್ಲ ಅಂದ್ರು. ನಟ ಕಾರ್ತಿ ಮಾತನಾಡಿ, ತಿಂಗಳಿಗೆ ಒಮ್ಮೆಯಾದ್ರೂ ಕಾಲ್‌ ಮಾತಾಡ್ತಿದ್ವಿ, ಬೆಂಗಳೂರಿಗೆ ಬಂದಾಗೆಲ್ಲ..‌ ಮನೆಗೆ ಕರೀತಿದ್ರು ಅಂತ ಹಿರಿಯ ನಟಿ ಜೊತೆಗಿನ ಒಡನಾಟ ಮೆಲುಕು ಹಾಕಿದ್ರು.

ಕಲಾ ಹಾದಿಯಲ್ಲಿ ದೊಡ್ಡ ಹೆಜ್ಜೆಯ ಅಚ್ಚೊತ್ತಿದ್ದ ಸರೋಜಾದೇವಿಯವರನ್ನ ನೆನೆದು ಭಾರತೀಯ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಇನ್ನು, ಇಂದು ಹುಟ್ಟೂರಿನಲ್ಲಿ ಕಲಾದೇವಿಯ ಅಂತ್ಯಕ್ರಿಯೆ ನೆರವೇರಲಿದೆ.

ಇದನ್ನೂ ಓದಿ: ನಾಲ್ವರೂ ಹೆಣ್ಮಕ್ಕಳೇ.. ಸರೋಜಾ ದೇವಿ ಹುಟ್ಟಿಗೆ ಕಾರಣವಾಯ್ತು ಅದೊಂದು ಪ್ರಸಾದ..!

publive-image

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ದಶವರದಲ್ಲಿ ಇರೋ ಇದೇ ಪ್ರಕೃತಿ ಮಡಿಲಲ್ಲಿ ಬೆಳಗ್ಗೆ 11.30ಕ್ಕೆ ಒಕ್ಕಲಿಗ ಸಂಪ್ರದಾಯದಂತೆ ಕಲಾ ಸರಸ್ವತಿಯ ಅಂತಿಮ ಸಂತ್ಯಕ್ರಿಯೆ ನಡೆಲಿದೆ. ರಾತ್ರಿಪೂರ್ತಿ ಸರೋಜಾ ಅಂತಿಮ ದರ್ಶನ ಮಾಡಲಾಗಿದ್ದು, ಹಲವರು ಬಂದು ಅಭಿನಯ ಶಾರದೆಯನ್ನ ಕೊನೆಯ ಬಾರಿಗೆ ಕಣ್ತುಂಬಿಕೊಂಡ್ರು.

ಬೆಳಗ್ಗೆ 10 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ಅಂತಿಮ ದರ್ಶನವನ್ನ ಪಡೆಯಲಿದ್ದಾರೆ. ಬಳಿಕ ರಾಮನಗರದ ದಶವರದಲ್ಲಿ ಕುಟುಂಬಸ್ಥರು ಅಂತಿವ ವಿಧಿವಿಧಾನ ನಡೆಯಲಿದೆ. ತಮಿಳಿನಲ್ಲಿ ಜಯಲಲಿತಾರನ್ನೂ ಸೈಡಿಗೆ ಹಾಕಿದ್ದ, ಕನ್ನಡದ ಮೊಟ್ಟ ಮೊದಲ ಮಹಿಳಾ ಸೂಪರ್​ಸ್ಟಾರ್ ಸರೋಜಾದೇವಿ ಅನ್ನೋ ಮಾಣಿಕ್ಯ ಕೊಂಡಿಯೊಂದು ಕಳಚಿದ್ದು, ಕನ್ನಡಕ್ಕೆ, ಕರ್ನಾಟಕಕ್ಕೆ ತುಂಬಲಾರದ ನಷ್ಟ ಅನ್ನೋದು ಅಕ್ಷರಶಃ ಸತ್ಯ.

ಇದನ್ನೂ ಓದಿ: ಪುನೀತ್​-ಸರೋಜಾ ದೇವಿಯ ಈ ಹಾಡು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.. ಕೊನೆಯದಾಗಿ ನಟಿಸಿದ್ದೂ ಅಪ್ಪು ಜೊತೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment