/newsfirstlive-kannada/media/post_attachments/wp-content/uploads/2025/07/B-SAROJA-DEVI-6.jpg)
ರಾಮನಗರ: ಅಭಿನಯ ಸರಸ್ವತಿ ಬಿ ಸರೋಜಾ ದೇವಿ (B.Saroja Devi) ಇನ್ನು ನೆನಪು ಮಾತ್ರ. ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜಾ ದೇವಿ ಇಹಲೋಕ ತ್ಯಜಿಸಿದ್ದಾರೆ. ಅವರ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆಯೇ ನಟಿಯ ಸೋದರ ಮಾವನ ಮಗ ಆನಂದ್ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ಬಿ.ಸರೋಜಾ ದೇವಿ ಇನ್ನು ನೆನಪು ಮಾತ್ರ; ಮಹಾನ್ ನಟಿಯ ಅಪರೂಪದ ಫೋಟೋಗಳು..!
ಸರೋಜಾ ದೇವಿಯನ್ನು ಕಳೆದುಕೊಂಡ ದುಃಖದಲ್ಲಿ ಮಾತನಾಡಿರುವ ಅವರು.. ನಮ್ಮ ಕುಟುಂಬದಲ್ಲಿ ಒಂದು ಮಾಣಿಕ್ಯವನ್ನ ಕಳೆದುಕೊಂಡತ್ತಾಗಿದೆ. ಅವರ ಸಾವು ನಮ್ಮ ಕುಟುಂಬಕ್ಕೆ ತುಂಬಲಾಗದ ನಷ್ಟ ಎಂದು ರಾಮನಗರದ ದಶವಾರ ಗ್ರಾಮದಲ್ಲಿ ಹೇಳಿದ್ದಾರೆ. ಅವರು ಗ್ರಾಮಕ್ಕೆ ಸಾಕಷ್ಟು ಸಹಾಯ ಮಾಡಿದ್ದಾರೆ. ಶಾಲೆ ಕಟ್ಟಿಸಿಕೊಟ್ಟಿದ್ದರು, ಸಾಕಷ್ಟು ಸಹಾಯ ಮಾಡಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಬಂದು ಹೋಗಿದ್ದರು. ಇತ್ತೀಚಿಗೆ ಅವರ ಆರೋಗ್ಯ ಸರಿ ಇರಲಿಲ್ಲ. ಅವರ ಸಾವು ನಮಗೆ ಅತೀವ ನೋವುಂಟು ಮಾಡಿದೆ ಎಂದು ದುಃಖಿತರಾಗಿದ್ದಾರೆ.
ಸರೋಜಾ ದೇವಿ ಹುಟ್ಟೂರು ದಶವಾರ
ಸರೋಜಾ ದೇವಿ ಮೂಲತಃ ಚನ್ನಪಟ್ಟಣ ತಾಲ್ಲೂಕಿನ ದಶವಾರ ಗ್ರಾಮದವರು. ದಶವಾರ ಗ್ರಾಮದಲ್ಲಿ ಮನೆ, ಜಮೀನು ಹೊಂದಿದ್ದಾರೆ. ಆಗಾಗ್ಗೆ ದಶವಾರ ಗ್ರಾಮಕ್ಕೆ ಬಂದು ಹೋಗ್ತಿದ್ದರು. ಸದ್ಯ ದಶವಾರ ಗ್ರಾಮದಲ್ಲೇ ಸರೋಜಾದೇವಿ ಕುಟುಂಬಸ್ಥರು ವಾಸವಿದ್ದಾರೆ.
ಇದನ್ನೂ ಓದಿ: ಅಣ್ಣಾವ್ರ ಜೊತೆಗೂ ನಟನೆ.. MGR ಜೊತೆ 26 ಚಿತ್ರಗಳಲ್ಲಿ ಆ್ಯಕ್ಟಿಂಗ್.. ಸರೋಜಾ ದೇವಿಗೆ ಜನಪ್ರಿಯತೆ ತಂದ್ಕೊಟ್ಟ ಚಿತ್ರ ಯಾವ್ದು?
ರುದ್ರಮ್ಮ ಹಾಗೂ ಭೈರಪ್ಪ ದಂಪತಿ ಪುತ್ರಿ ಸರೋಜಾದೇವಿ. ಪೊಲೀಸ್ ಮುಖ್ಯ ಪೇದೆಯಾಗಿದ್ದರು. ಸರೋಜಾ ದೇವಿಗೆ ಸಿದ್ದಲಿಂಗಮ್ಮ, ಕಮಲಮ್ಮ ಎಂಬ ಇಬ್ಬರು ಹಿರಿಯ ಸಹೋದರಿಯರಿದ್ದರು. ಕೊನೆಯ ಮಗಳು ಬಿ.ಸರೋಜಾ ದೇವಿ. ಸುಮಾರು 10 ವರ್ಷ ವಯಸ್ಸಿನ ತನಕ ಸರೋಜಾ ದೇವಿ ದಶವಾರ ಗ್ರಾಮದಲ್ಲಿದ್ದರು. ದಶವಾರ ಗ್ರಾಮದಲ್ಲೇ ಬಾಲ್ಯ ಕಳೆದಿದ್ದ ಸರೋಜಾ ದೇವಿ, ಬಳಿಕ ತಂದೆಯ ಜೊತೆ ಬೆಂಗಳೂರಿಗೆ ತೆರಳಿ ಅಲ್ಲೇ ವಾಸ್ತವ್ಯ ಹೂಡಿದ್ದರು.
ರಾಮನಗರದಲ್ಲಿ ಸಂತಾಪ..
ಸರೋಜಾದೇವಿ ನಿಧನಕ್ಕೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು. ಚನ್ನಪಟ್ಟಣ ನಗರದ ಕಾವೇರಿ ಸರ್ಕಲ್ನಲ್ಲಿ ಶ್ರದ್ದಾಂಜಲಿ ಸಭೆ ನಡೆಸಿದ್ದಾರೆ. ಬಿ.ಸರೋಜಾದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಚನ್ನಪಟ್ಟಣ ತಾಲ್ಲೂಕಿನ ಮಗಳು ಬಹುಭಾಷೆಗಳಲ್ಲಿ ನಟಿಸಿ ಚನ್ನಪಟ್ಟಣಕ್ಕೆ ಹಿರಿಮೆ ತಂದಿದ್ದಾಳೆ. ಹಲವು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಬಿ.ಸರೋಜಾದೇವಿ ಹೆಸರನಲ್ಲಿ ಶಿಕ್ಷಣ ಸಂಸ್ಥೆ, ಸ್ಮಾರಕ, ಯಾವುದಾದರೂ ರಸ್ತೆಗೆ ಸರೋಜಾದೇವಿ ಹೆಸರಿಡುವ ಕೆಲಸ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬಿ.ಸರೋಜಾದೇವಿ, SM ಕೃಷ್ಣ ನಡುವೆ ಮದುವೆ ಪ್ರಸ್ತಾಪ.. ಆದರೆ ಸಂಬಂಧವಾಗಿ ಬದಲಾಗಲಿಲ್ಲ; ಯಾಕೆ ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ