EXCLUSIVE: ‘ಎರಡು ತಿಂಗಳು ಮಾತ್ರ ರಾಜ್ಯದಲ್ಲಿ ಸಿದ್ದು ಅಧಿಕಾರ’- ಬಿ.ವೈ ವಿಜಯೇಂದ್ರ ಶಾಕಿಂಗ್ ಹೇಳಿಕೆ

author-image
admin
Updated On
ಹಿಂದೂ ಧಾರ್ಮಿಕ ಆಚಾರ, ವಿಚಾರಗಳ ದಮನಕ್ಕೆ ಷಡ್ಯಂತ್ರ ನಡೀತಿದೆ -ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ
Advertisment
  • ಈ ವಾಲ್ಮೀಕಿ ಬಹುಕೋಟಿ ಹಗರಣ, ಮುಡಾ ಅಕ್ರಮ ಸಣ್ಣದಲ್ಲ
  • ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ವಿಜಯೇಂದ್ರ ಸ್ಫೋಟಕ ಸುಳಿವು
  • ರಾಹುಲ್ ಗಾಂಧಿ ಅವರಿಗೂ ರಾಜ್ಯದಿಂದ ಕಪ್ಪ ಕಾಣಿಕೆ ಹೋಗಿದೆ

ವಾಲ್ಮೀಕಿ ಬಹುಕೋಟಿ ಹಗರಣ, ಮುಡಾ ಅಕ್ರಮ ಸೈಟು ಹಂಚಿಕೆ ಆರೋಪ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗಿರ್ಕಿ ಹೊಡೆಯುತ್ತಿದೆ. ವಿರೋಧ ಪಕ್ಷ ಬಿಜೆಪಿ ನಾಯಕರು ಕೈಗೆ ಸಿಕ್ಕ ಬ್ರಹ್ಮಾಸ್ತ್ರವನ್ನು ಪ್ರಬಲವಾಗಿಯೇ ಪ್ರಯೋಗಿಸುತ್ತಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸುತ್ತಿರುವಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

publive-image

ನ್ಯೂಸ್ ಫಸ್ಟ್ ಚಾನೆಲ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಎಕ್ಸ್‌ಕ್ಲೂಸಿವ್ ಸಂದರ್ಶನ್ ನೀಡಿದ್ದಾರೆ. ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ವಿಜಯೇಂದ್ರ, ಇನ್ನು ಎರಡು ತಿಂಗಳು ಆದ ಮೇಲೆ ನಾನು ಹೇಳುತ್ತೇನೆ ಅನ್ನೋ ಮೂಲಕ ಸ್ಫೋಟಕ ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ಗೋವಿಂದ.. ಗೋವಿಂದ, 187 ಕೋಟಿ ಗೋವಿಂದ.. ಸರ್ಕಾರದ ವಿರುದ್ಧ ಕೇಸರಿ ಪಡೆಯ ಅಹೋರಾತ್ರಿ ಧರಣಿ

ಬಿ.ವೈ ವಿಜಯೇಂದ್ರ ಹೇಳಿದ್ದೇನು?
ಮುಡಾ ಹಗರಣದ ಫೈಲ್‌ ಅನ್ನು ಬಿಜೆಪಿಯವರಿಗೆ ಕೊಟ್ಟಿದ್ದೇ ಕಾಂಗ್ರೆಸ್ ನಾಯಕರು ಅನ್ನೋ ಮಾತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯೇಂದ್ರ ಅವರು ಬಿಜೆಪಿಗರಿಗೆ ಯಾವ ಕಾಂಗ್ರೆಸ್ ಮುಖಂಡರು ಕೊಟ್ಟಿಲ್ಲ. ಆದರೆ ಮುಡಾ ಹಗರಣ ಬಯಲಾಗಲು ಕಾಂಗ್ರೆಸ್ ನಾಯಕರು ಪಿತೂರಿ ಮಾಡಿದ್ದಾರೆ ಅನ್ನೋ ವಿಚಾರ ನಮ್ಮ ಕಿವಿಗೂ ಬಿದ್ದಿದೆ. ಸತ್ಯಾಂಶಗಳು ಮುಂದಿನ ದಿನಗಳಲ್ಲಿ ಗೊತ್ತಾಗಬೇಕು ಎಂದಿದ್ದಾರೆ.

ಇನ್ನು, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪದಚ್ಯುತಿಗೊಳ್ಳುತ್ತಾರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಅವರು, ಇನ್ನೆರಡು ತಿಂಗಳು ಕಳೆದ ಮೇಲೆ ನಾನು ಹೇಳುತ್ತೇನೆ. 187 ಕೋಟಿಯ ವಾಲ್ಮೀಕಿ ಹಗರಣ, ಮುಡಾ ಅಕ್ರಮ ಸಣ್ಣ ವಿಷಯವಲ್ಲ. ರಾಜ್ಯದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಸರ್ಕಾರ ಕೊಳ್ಳೆ ಹೊಡೆದಿದೆ. ಅಧಿಕಾರಕ್ಕೆ ಬಂದ 14 ತಿಂಗಳು ಲೂಟಿ ಮಾಡೋ ಸ್ಟ್ರಾಟಜಿ ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್, ರಾಹುಲ್ ಗಾಂಧಿ ಅವರಿಗೂ ಕಪ್ಪ ಕಾಣಿಕೆ ಹೋಗಿದೆ. ಸಿಎಂ ಸಿದ್ದರಾಮಯ್ಯ ಅವರ ಸರ್ಕಾರವೇ ಇನ್ನೆರಡು ತಿಂಗಳೇ ಡೌಟ್‌ ಖಂಡಿತ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment