newsfirstkannada.com

ಹಾಡಿನ ಮೂಲಕ ದರ್ಶನ್​​ ನೆನೆದ ಸಚಿವ ಜಮೀರ್​​.. ಡಿ ಬಾಸ್​ನ ಕಾಪಾಡಿ ಎಂದ ಫ್ಯಾನ್ಸ್​!

Share :

Published June 17, 2024 at 7:24pm

Update June 17, 2024 at 7:29pm

    ನಟ ದರ್ಶನ್​ ಅರೆಸ್ಟ್​ ಬೆನ್ನಲ್ಲೇ ಸಚಿವ ಜಮೀರ್ ಅಹಮದ್ ಖಾನ್​​ ಪ್ರತ್ಯಕ್ಷ

    ಸಚಿವ ಜಮೀರ್ ಅಹಮದ್‌ ಖಾನ್​ ಅವರ ರೀಲ್ಸ್​ಗೆ ದರ್ಶನ್​ ಫ್ಯಾನ್ಸ್​ ಕಾಮೆಂಟ್

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಜಮೀರ್ ಅಹಮದ್‌ ವಿಡಿಯೋ

ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಸ್ಯಾಂಡಲ್​ವುಡ್​ ನಟ ದರ್ಶನ್ ಅಂಡ್​ ಗ್ಯಾಂಗ್​ ಪೊಲೀಸ್​ ವಶದಲ್ಲಿದೆ. ಸದ್ಯ ದಿನ ಕಳೆದಂತೆ ಈ ಕೊಲೆ ಕೇಸ್​​ನಲ್ಲಿ ಪೊಲೀಸ್ ಅಧಿಕಾರಿಗಳು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಇದೇ ಕೇಸ್​​ ಸಂಬಂಧ ಈಗಾಗಲೇ ಮೋಹಕ ತಾರೆ ರಮ್ಯಾ, ಕಿಚ್ಚ ಸುದೀಪ್​​, ನಟ ಉಪೇಂದ್ರ ಸೇರಿದಂತೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್​ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಮೆಗ್ಗರ್​​ ರಾಜುನ ಕ್ರೌರ್ಯದ ಇತಿಹಾಸ ತುಂಬಾನೇ ಭಯಾನಕ.. ಚಿತ್ರಹಿಂಸೆ ಅನುಭವಿಸಿದ್ದು ರೇಣುಕಾಸ್ವಾಮಿ ಒಬ್ಬರೇ ಅಲ್ಲ..!

ನಟ ದರ್ಶನ್​ ಜೊತೆಗೆ ರಾಜ್ಯ ವಸತಿ ಸಚಿವ ಜಮೀರ್ ಅಹಮದ್‌ ಖಾನ್ ಅವರು ನಿಕಟ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಆದರೆ ನಟ ದರ್ಶನ್​ ಅರೆಸ್ಟ್​ ಬೆನ್ನಲ್ಲೇ ಜಮೀರ್ ಅಹಮದ್‌ ಖಾನ್​ ಅವರು ತುಂಬಾ ಸೈಲೆಂಟ್ ಆಗಿಬಿಟ್ಟಿದ್ದಾರೆ. ಈ ಹಿಂದೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಜಮೀರ್ ಅಹಮದ್ ನಿವಾಸಕ್ಕೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ್ದರು.

ಆದರೆ ಇದೀಗ ಸಚಿವ ಜಮೀರ್ ಅಹಮದ್ ಖಾನ್​ ಅವರು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ರೀಲ್ಸ್​ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್​ ಮಾಡಿಕೊಂಡ ರೀಲ್ಸ್​ನಲ್ಲಿ ಜಮೀರ್ ಅಹಮದ್ ಅವರು ತಮ್ಮ ಮನೆಯ ಸಾಕು ಪ್ರಾಣಿ ಬೆಕ್ಕಿಗೆ ಆಹಾರ ನೀಡುತ್ತಿದ್ದಾರೆ. ಇದೇ ವಿಡಿಯೋಗೆ ನಟ ದರ್ಶನ್​ ನಟನೆಯ ಲಾಲಿ ಹಾಡು ಸಿನಿಮಾದ ಸ್ನೇಹ ಎಂಬ ತಂಗಾಳಿಗೆ ಯಾವ ರೂಪ ಇಲ್ಲ ಎಂಬ ಚರಣವನ್ನು ಹಾಕಿ ಪೋಸ್ಟ್​ ಮಾಡಲಾಗಿದೆ. ಇನ್ನು ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ದಯಮಾಡಿ ನಮ್ಮ ಡಿ ಬಾಸ್​ ಸಹಾಯ ಮಾಡಿ ಅಂತ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಡಿನ ಮೂಲಕ ದರ್ಶನ್​​ ನೆನೆದ ಸಚಿವ ಜಮೀರ್​​.. ಡಿ ಬಾಸ್​ನ ಕಾಪಾಡಿ ಎಂದ ಫ್ಯಾನ್ಸ್​!

https://newsfirstlive.com/wp-content/uploads/2024/06/dbos.jpg

Load More