/newsfirstlive-kannada/media/post_attachments/wp-content/uploads/2024/06/darshan-10-1.jpg)
ದರ್ಶನ್ ಕೊಲೆ ಮಾಡಿದ್ದಕ್ಕೆ ಕನ್ನಡ ಫಿಲ್ಮ್ ಚೇಂಬರ್ 5 ಲಕ್ಷ ರೂಪಾಯಿ ಫೈನ್ ಕಟ್ಟಬೇಕಾತ್ತಲ್ಲ ಎಂದು ದರ್ಶನ್ ಮೊಟ್ಟ ಮೊದಲ ಬಣ್ಣ ಹಚ್ಚಿದ ‘ಮೆಜೆಸ್ಟಿಕ್’ ಸಿನಿಮಾದ ನಿರ್ಮಾಪಕ ಬಾ.ಮಾ. ಹರೀಶ್ ಹೇಳಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯೂಸ್ ಫಸ್ಟ್ ಜೊತೆಗೆ ಮಾತನಾಡಿದ ಬಾ.ಮಾ. ಹರೀಶ್, ಈ ಘಟನೆ ಒಂಥರಾ ಬೇಸರವಾಗುತ್ತೆ, ಅಸಹ್ಯವಾಗುತ್ತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ ಪ್ರಕರಣದಲ್ಲಿ ಚಿಕ್ಕಣ್ಣನಿಗೂ ಸಂಕಷ್ಟ? ನೋಟಿಸ್ ಕಳುಹಿಸಿ ತನಿಖೆಗೆ ಹಾಜರಾಗಿ ಎಂದ ಪೊಲೀಸರು!
ನಂತರ ಮಾತನಾಡಿದ ಅವರು, ಭಾ.ಮಾ. ಗಿರೀಶ್, ಚಿನ್ನೇಗೌಡ್ರು. ಎನ್ ಎಮ್ ಸುರೇಶ್ ಮುಂತಾದ ಹಿರಿಯರು ರೇಣುಕಾಸ್ವಾಮಿ ಮನೆಗೆ ಹೋಗಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ತಲುಪಿಸಿ ಬಂದಿದ್ದಾರೆ. ನೋಡಿ ಇಲ್ಲೂ ಸಹ ದರ್ಶನ್ ಕೊಲೆ ಮಾಡಿದ್ದಕ್ಕೆ ಕನ್ನಡ ಫಿಲ್ಮ್ ಚೇಂಬರ್ 5 ಲಕ್ಷ ರೂಪಾಯಿ ಫೈನ್ ಕಟ್ಟುವಂತಾಯ್ತು ಎಂದು ಬಾ.ಮಾ. ಹರೀಶ್ ಹೇಳಿದ್ದಾರೆ.
ಇದನ್ನೂ ಓದಿ: ಸುದೀಪ್ ಬೆನ್ನಲ್ಲೇ ದರ್ಶನ್ ಪ್ರಕರಣದ ಬಗ್ಗೆ ತುಟಿ ಬಿಚ್ಚಿದ ರಿಯಲ್ ಸ್ಟಾರ್! ಏನಂದ್ರು?
ದರ್ಶನ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೋ ಇಲ್ಲವೋ ಎಂದು ಪೊಲೀಸರು ತನಿಖೆ ಮಾಡ್ತಾ ಇದ್ದಾರೆ. ಪೊಲೀಸರ ಜೊತೆಗೆ ಮಾಧ್ಯಮದವರು ಇದ್ದಾರೆ. ಈ ಪ್ರಕರಣ ಕರ್ನಾಟಕ ಜನತೆ, ಕನ್ನಡ ಸಿನಿಮಾ ಕೂಡ ಎದುರು ನೋಡ್ತಾ ಇದೆ. ನ್ಯಾಯ ಖಂಡಿತವಾಗಿಯೂ ಸಿಕ್ಕೇ ಸಿಗುತ್ತೆ ಎಂದು ನಂಬಿದಿನಿ. ಆ ಕುಟುಂಬಕ್ಕೆ ಒಳ್ಳೆಯದಾಗಲಿ. ಯಾಕಂದ್ರೆ ರೇಣುಕಾಸ್ವಾಮಿ ಹೆಂಡತಿ 5 ತಿಂಗಳ ಗರ್ಭಿಣಿ ಅನ್ಸುತ್ತೆ. ವಯಸ್ಸಾದ ತಂದೆ,ತಾಯಿ, ಅಜ್ಜಿ ಇದ್ದಾರೆ ಎಂದು ಬಾ.ಮಾ. ಹರೀಶ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ