Advertisment

ಸೆಟ್ಟೇರಿದೆ ರಾಜಮೌಳಿ ನಿರ್ದೇಶನದ ಮತ್ತೊಂದು ದೃಶ್ಯ ಕಾವ್ಯ.. ಹೀರೋ, ಹೀರೋಯಿನ್ ಯಾರು ಗೊತ್ತಾ?

author-image
Gopal Kulkarni
Updated On
ಸೆಟ್ಟೇರಿದೆ ರಾಜಮೌಳಿ ನಿರ್ದೇಶನದ ಮತ್ತೊಂದು ದೃಶ್ಯ ಕಾವ್ಯ.. ಹೀರೋ, ಹೀರೋಯಿನ್ ಯಾರು ಗೊತ್ತಾ?
Advertisment
  • ಮತ್ತೊಂದು ಅದ್ಭುತ ದೃಶ್ಯ ಕಾವ್ಯ ಹೆಣೆಯಲು ಸಜ್ಜಾದ ರಾಜಮೌಳಿ
  • ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕ ಬಿಟ್ಟುಕೊಟ್ಟ ಸುಳಿವು ಏನು?
  • ಸಿನಿಮಾಗೆ ಹೂಡುತ್ತಿರುವ ಬಂಡವಾಳದ ಬಗ್ಗೆ ಗೊತ್ತಾದ್ರೆ ಶಾಕ್​ ಆಗ್ತೀರಾ!

ಕಲ್ಪನಾ ವಿಹಾರಿ, ಅದ್ಭುತ ದೃಶ್ಯಕಾವ್ಯಗಳನ್ನು ಕಟ್ಟಿ ಕೊಡುವುದರಲ್ಲಿ ನಿಸ್ಸೀಮರೆನಿಸಿದ ನಿರ್ದೇಶಕರ ಭಾರತೀಯ ಚಿತ್ರರಂಗದಲ್ಲಿ ಇದ್ದರೆ ಅದು ಎಸ್​ ಎಸ್​ ರಾಜಮೌಳಿ. ಅವರ ಸಿನಿಮಾಗೆ ಕೇವಲ ದೇಶದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿಯೇ ಒಂದು ವಿಪರೀತ ಕುತೂಹಲ ಮೊಳಕೆಯೊಡೆದು ಹೆಮ್ಮರವಾಗಿ ನಿಲ್ಲುತ್ತದೆ. ಆರ್​​ಆರ್​ಆರ್ ಸಿನಿಮಾದ ಬಳಿಕ ಒಂದು ದೀರ್ಘ ಗ್ಯಾಪ್ ತೆಗೆದುಕೊಂಡಿರುವ ರಾಜಮೌಳಿ ಈಗ ಮತ್ತೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ.

Advertisment

RRR ಸಿನಿಮಾದ ಬಳಿಕ ರಾಜಮೌಳಿ ಅಭಿಮಾನಿಗಳು ಅವರ ಹೊಸ ಸಿನಿಮಾಗಾಗಿ ಬಹಳ ಉತ್ಸುಕತೆಯಿಂದ ಕಾಯುತ್ತಿದ್ದರು. ಮತ್ಯಾವ ಮಹಾಕಥೆಯೊಂದನ್ನು ಹೆಣೆದು ನಮ್ಮ ಮುಂದೆ ಇಡಲಿದ್ದಾರೆ ಎಂಬ ಕಾತುರತೆಯಲ್ಲಿ ಇದ್ದರು ಸದ್ಯ ಆ ಎಲ್ಲಾ ಕುತೂಹಲಗಳಿಗೆ ತೆರೆಬಿದ್ದಿದೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹೊಸ ಸಿನಿಮಾದ ಬಗ್ಗೆ ತುಂಬಾ ವಿಶೇಷವಾದ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ ರಾಜಮೌಳಿ

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ಮುಂದಿನ ಸಿನಿಮಾದ ಹೆಸರು ಎಸ್​ಎಸ್​ಎಂಬಿ29 ಎಂದು ಹೇಳಿದ್ದಾರೆ. ರಾಜಮೌಳಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಬಲೆಯಲ್ಲಿ ಸಿಂಹವಿದ್ದು ರಾಜಮೌಳಿ ಪಾಸ್​ಪೋರ್ಟ್​ವೊಂದನ್ನು ಹಿಡಿದು ಪೋಸ್​ ಕೊಟ್ಟಿದ್ದಾರೆ. ಈ ಮೂಲಕ ರಾಜಮೌಳಿ ಸಿಂಹವನ್ನು ಹಿಡಿದ ಸುಳಿವು ಕೊಡುವುದರ ಮೂಲಕ. ಆ ಸಿಂಹ ಬೇರೆ ಯಾರು ಅಲ್ಲ ಮಹೇಶ್​ ಬಾಬು ಎಂಬ ಸಂದೇಶವನ್ನು ನೀಡಿದ್ದಾರೆ. ಸಹಜವಾಗಿ ತೆಲುಗು ಸಿನಿಪ್ರಿಯರೆಲ್ಲಾ ಮಹೇಶ್​ ಬಾಬುವನ್ನು ಸಿಂಹವೆಂದೇ ಕರೆಯುವುದು.

Advertisment

ಇನ್ನು ರಾಜಮೌಳಿ ಪೋಸ್ಟ್​​ಗೆ ಮಹೇಶ್​ ಬಾಬು ಕೂಡ ಕೋಟ್ ಮಾಡಿದ್ದು. 2006ರಲ್ಲಿ ಬಂದ ಅವರ ಪೋಕ್ರಿ ಸಿನಿಮಾದ ಜನಪ್ರಿಯ ಡೈಲಾಗ್​ ಒಂದು ಬಾರಿ ನಾ ಕಮಿಟ್ ಆದ್ರೆ ನನ್ನ ಮಾತು ನಾನೇ ಕೇಳಲ್ಲ ಎಂಬ ಲೈನ್​ನ್ನು ಬರೆದುಕೊಂಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಪ್ರಿಯಾಂಕ ಚೋಪ್ರಾ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ದರ್ಶನ್​ಗೆ ಇಂದು ಬಿಗ್​​ ಡೇ.. ಸುಪ್ರೀಂ ಕೋರ್ಟ್​ ನಿರ್ಧಾರದ ಬಗ್ಗೆ ನಟನಿಗೆ ಟೆನ್ಷನ್

ಜನವರಿ 2 2025 ರಂದು ಎಸ್​ಎಸ್​ಎಂಬಿ29 ಸಿನಿಮಾಗೆ ಅಧಿಕೃತವಾಗಿ ಘೋಷಣೆಯಾಗಿ ವಿಶೇಷ ಪೂಜೆಯೂ ಕೂಡ ಹೈದ್ರಾಬಾದ್​ನಲ್ಲಿ ನಡೆದಿದೆ. ಈ ಪೂಜೆಯಲ್ಲಿ ರಾಜಮೌಳಿ ಹಾಗು ಮಹೇಶ್​ ಬಾಬು ಇಬ್ಬರು ಕೂಡ ಕಾಣಿಸಿಕೊಂಡಿದ್ದರು. ಈ ವರ್ಷದಿಂದ ಶೂಟಿಂಗ್ ಶುರುವಾಗಲಿರುವ ಸಿನಿಮಾ 2028ಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

Advertisment

ಇದನ್ನೂ ಓದಿ:ರಾಜ್ಯ ಸರ್ಕಾರದ ಅತ್ಯುತ್ತಮ ನಟ ಪ್ರಶಸ್ತಿ ನಿರಾಕರಿಸಿದ ಕಿಚ್ಚ ಸುದೀಪ್; ಕಾರಣವೇನು?

ಎಸ್​ಎಸ್​ಎಂಬಿ 29 ಸಿನಿಮಾ ಬಾಹುಬಲಿ ಸಿನಿಮಾದಂತೆ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಅದರಂತೆಯೇ ಎರಡು ಭಾಗದಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ. ಸುಮಾರು 900 ರಿಂದ 1000 ಕೋಟಿ ರೂಪಾಯಿ ಈ ಸಿನಿಮಾಗಾಗಿ ಬಂಡವಾಳ ಹೂಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಭಾರತೀಯ ಸಿನಿಮಾಗಳಲ್ಲಿ ಅತ್ಯಂದ ದೊಡ್ಡ ಸಿನಿಮಾವಾಗಿ ಗುರುತಿಸಿಕೊಳ್ಳುವ ಎಲ್ಲಾ ನಿರೀಕ್ಷೆಗಳು ಇವೆ. ಈಗಾಗಲೇ ಅಭಿಮಾನಿಗಳಲ್ಲ ಒಂದು ಉತ್ಸಾಹ ಗರಿಗೆದರಿದ್ದು, ಸಿನಿಮಾ ನೋಡಲು ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ ಹಾಗೂ ರಾಜಮೌಳಿ ತಂಡಕ್ಕೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment