ಬಾಹುಬಲಿ ಸಿನಿಮಾ ಬಗ್ಗೆ ಬಿಗ್ ಅಪ್​ಡೇಟ್..​ ನಿರ್ದೇಶಕ ರಾಜಮೌಳಿ ಮತ್ತೆ ಮೂವಿ ಮಾಡ್ತಾರಾ?

author-image
Bheemappa
Updated On
ಬಾಹುಬಲಿ ಸಿನಿಮಾ ಬಗ್ಗೆ ಬಿಗ್ ಅಪ್​ಡೇಟ್..​ ನಿರ್ದೇಶಕ ರಾಜಮೌಳಿ ಮತ್ತೆ ಮೂವಿ ಮಾಡ್ತಾರಾ?
Advertisment
  • ಬಾಹುಬಲಿ ಸಿನಿಮಾ ರಿಲೀಸ್ ಆಗಿ ಎಷ್ಟು ವರ್ಷಗಳು ಕಳೆದಿವೆ?
  • ಅಕ್ಟೋಬರ್ 31 ರಂದು ಅಭಿಮಾನಿಗಳಿಗೆ ಇದೇ ಸರ್​ಪ್ರೈಸ್​​
  • ಮೂವಿ ಎರಡು ಭಾಗಗಳ ಬಗ್ಗೆ ನಿರ್ದೇಶಕರು ಏನು ಹೇಳಿದ್ರು?

ಟಾಲಿವುಡ್​ನ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಬಾಹುಬಲಿ ಸಿನಿಮಾ ಈಗಲೂ ಎಲ್ಲರ ಕಣ್ಣುಗಳಲ್ಲಿ ಅಚ್ಚು ಅಳಿಯದೇ ಉಳಿದಿದೆ. ಸ್ಟಾರ್ ಡೈರೆಕ್ಟರ್​ ರಾಜಮೌಳಿ ನಿರ್ದೇಶನದ ಈ ಸಿನಿಮಾ ಎರಡು ಭಾಗದಲ್ಲೂ ಅಬ್ಬರಿಸಿ ಜೊತೆಗೆ ಕೋಟಿ ಕೋಟಿ ಹಣ ಕಲೆಕ್ಷನ್ ಮಾಡಿತ್ತು. ಪಾರ್ಟ್​​-1 ರಲ್ಲಿ ಕೊಟ್ಟಂತಹ ಟ್ವಿಸ್ಟ್​ ಪ್ರಧಾನಿ ಮೋದಿಗೂ ಕುತೂಹಲ ಮೂಡಿಸಿತ್ತು. ಮಹಾಕಾವ್ಯದಂತಿರುವ ಈ ಸಿನಿಮಾ ಎರಡು ಭಾಗಗಳನ್ನ ಸೇರಿಸಿ ಮತ್ತೆ ರಿಲೀಸ್ ಮಾಡಲಾಗುವುದು ಎಂದು ರಾಜಮೌಳಿ ಹೇಳಿದ್ದಾರೆ.

publive-image

ಅಭಿಮಾನಿಗಳಲ್ಲಿ ಹೊಸದೊಂದು ಲೋಕವನ್ನೇ ಸೃಷ್ಟಿಸಿದ್ದ ಬಾಹುಬಲಿ ಸಿನಿಮಾ ಭಾರತದ ರಾಜಮನೆತನಗಳು ಹೀಗೆ ಆಳ್ವಿಕೆ ಮಾಡಿರಬಹುದು ಎಂಬುದನ್ನು ಕಣ್ಣಿಗೆ ಕಟ್ಟಿದಂತೆ ತೋರಿಸಿತ್ತು. ಸಿನಿಮಾದಲ್ಲಂತೂ ಪ್ರಭಾಸ್ ಹಾಗೂ ರಾಣಾ ಅವರ ನಡುವಿನ ಯುದ್ಧದ ಪೈಪೋಟಿ ವಿಶ್ವವನ್ನೇ ಬೆರಗುಗೊಳಿಸಿತ್ತು. ರಾಜಮೌಳಿ ಅವರು ಸಿನಿಮಾದ ಪ್ರತಿ ಪ್ರೇಮ್ ಕೂಡ ದೃಷ್ಟಿನ ಬಿಟ್ಟು ಹೋಗದಾಗೆ ನಿರ್ದೇಶಿಸಿದ್ದರು. ಸದ್ಯ ಬಾಹುಬಲಿ ಸಿನಿಮಾಗೆ 10ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಡೈರೆಕ್ಟರ್ ಸಂತಸದ ಸುದ್ದಿ ನೀಡಿದ್ದಾರೆ.

ಈ ಬಗ್ಗೆ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿರುವ ರಾಜಮೌಳಿ ಅವರು, ಬಾಹುಬಲಿ ಸಿನಿಮಾದ ಪ್ರಯಾಣ ಲೆಕ್ಕವಿಲ್ಲದಷ್ಟು ನೆನಪುಗಳನ್ನು ಕಟ್ಟಿಕೊಟ್ಟಿದೆ. ಸ್ಪೂರ್ತಿಯ ಸೆಲೆಯಾಗಿದೆ. ಸದ್ಯ ಮಹಾಕಾವ್ಯದ ಸಿನಿಮಾಗೆ 10 ವರ್ಷಗಳು ತುಂಬಿವೆ. ಸಿನಿ ಕ್ಷೇತ್ರದಲ್ಲೇ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದ ಬಾಹುಬಲಿ ಸಿನಿಮಾದ ಎರಡು ಭಾಗಗಳನ್ನು ಸಂಯೋಜಿತ ಆವೃತ್ತಿ ಬಿಡುಗಡೆ ಮಾಡಲಾಗುವುದು. 2025ರ ಅಕ್ಟೋಬರ್ 31ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಾಹುಬಲಿ ಮತ್ತೆ ಅಬ್ಬರಿಸಲಿದ್ದಾನೆ ಎಂದು ರಾಜಮೌಳಿ ಅವರು ತಿಳಿಸಿದ್ದಾರೆ.

ಬಾಹುಬಲಿ ಸಿನಿಮಾ ಭಾಗ-1 Beginning 2015ರ ಜುಲೈ 10 ರಂದು ವಿಶ್ವದ್ಯಾಂತ ಬಿಡುಗಡೆಯಾಗಿತ್ತು. ಭಾರತದಲ್ಲಿ ತೆಲುಗು, ಹಿಂದಿ, ತಮಿಳು ಹಾಗೂ ಮಳಿಯಾಳಂ ಭಾಷೆಗಳಲ್ಲಿ ತೆರೆ ಕಂಡಿತ್ತು. ಎಲ್ಲ ಕಡೆಯಿಂದಲೂ ಈ ಸಿನಿಮಾಗೆ ದೊಡ್ಡ ಮಟ್ಟದ ರೆಸ್ಪಾನ್ಸ್​ ಸಿಕ್ಕಿತ್ತು. ಈ ಭಾಗ-1ರ ಕೊನೆಯಲ್ಲಿ ಕಟ್ಟಪ್ಪ, ಬಾಹುಬಲಿರನ್ನ ಸಾಯಿಸುವುದು ಏಕೆ ಎನ್ನುವುದೇ ಇಡೀ ವಿಶ್ವಕ್ಕೆ ಕುತೂಹಲ ಮೂಡಿಸಿತ್ತು.

ಇದನ್ನೂ ಓದಿ:ಕನ್ನಡಿಗರಿಗೆ ಒಲಿದ ಸ್ಥಾನ.. ಟೀಮ್ ಇಂಡಿಯಾದ ಪ್ಲೇಯಿಂಗ್- 11ಗೆ ಬುಮ್ರಾ ಎಂಟ್ರಿ!

publive-image

ಇದಾದ ಮೇಲೆ ಬಾಹುಬಲಿ ಭಾಗ-2 The Conclusion 2017ರ ಏಪ್ರಿಲ್​ 28 ರಂದು ರಿಲೀಸ್ ಆಗಿತ್ತು. ಭಾಗ-1ರಲ್ಲಿ ಕೊಟ್ಟಂತಹ ಟ್ವಿಸ್ಟ್​ಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಥಿಯೇಟರ್​ಗೆ ಲಗ್ಗೆ ಇಟ್ಟಿದ್ದರು. ಇದು ಕೂಡ ದೊಡ್ಡಮಟ್ಟದಲ್ಲೇ ಯಶಸ್ಸು ಕಂಡು ಇಡೀ ಚಿತ್ರತಂಡಕ್ಕೆ ಖ್ಯಾತಿ ತಂದಿತ್ತು. ಹೀಗಾಗಿಯೇ ಈಗಲೂ ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಸಿನಿ ಜನರು ಕ್ಯೂ ಕಟ್ಟುತ್ತಾರೆ.


">July 10, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment