/newsfirstlive-kannada/media/post_attachments/wp-content/uploads/2024/10/BABA-IN-DEIT.jpg)
ಭಾರತದಲ್ಲಿ ಸಾಧು, ಸಂತರು, ಯೋಗಿಗಳು ಲೋಕ ಕಲ್ಯಾಣಕ್ಕಾಗಿ ತಪಸ್ಸು, ಧ್ಯಾನ ಮಾಡುತ್ತಾ ಲೋಕ ಕಲ್ಯಾಣಕ್ಕಾಗಿ ಆಧ್ಯಾತ್ಮಿಕ ಸಾಧನೆ ಮಾಡುತ್ತಿದ್ದಾರೆ. ಕೆಲವರು ಸಂತರ ವೇಷದಲ್ಲಿ ಐಷಾರಾಮಿ ಜೀವನ ನಡೆಸಿದರೆ, ಇನ್ನೂ ಕೆಲವರು ದೇವರನ್ನು ಹುಡುಕುವ ಪ್ರಯತ್ನ ಮುಂದುರೆಸಿದ್ದಾರೆ. ಇಲ್ಲೊಬ್ಬ ಬಾಬಾ ಎಲ್ಲಾ ಇದ್ದೂ ಕಳೆದ 35 ವರ್ಷಗಳಿಂದ ದೇವಿಯ ಧ್ಯಾನದಲ್ಲಿದ್ದಾರೆ.
ನವರಾತ್ರಿ ಹೊತ್ತಲ್ಲಿ ಮಧ್ಯಪ್ರದೇಶದ ಖಾರ್ಗೋನ್​ನಲ್ಲಿ ಸಾಧು ಒಬ್ಬರು ವಿಶೇಷ ಸಾಧನೆ ಮಾಡುತ್ತಿದ್ದಾರೆ. ಬಾಬಾ ತನ್ನ ಕುತ್ತಿಗೆವರೆಗೆ ನೆಲದಲ್ಲಿ ಹೂತುಕೊಂಡು 9 ದಿನಗಳವರೆಗೆ ಆಹಾರ, ನೀರು ತ್ಯಜಿಸಿ ಕಠಿಣ ತಪಸ್ಸು ಮಾಡುತ್ತಾರೆ. ಈ ಬಾಬಾರ ತಪಸ್ಸು ದಸರಾ ದಿನದಂದು ಮುಕ್ತಾಯವಾಗಲಿದೆ.
ಖಾರ್ಗೋನ್​ನಿಂದ 60 ಕಿಮೀ ದೂರದ ಕರೌಂಡಿಯ ಗ್ರಾಮದಲ್ಲಿ 50 ವರ್ಷದ ಗುಜರಾತಿ ಬಾಬಾ ವಿಶಿಷ್ಟವಾದ ಧ್ಯಾನದಲ್ಲಿ ಮುಳುಗಿದ್ದಾರೆ. ಅನ್ನ, ನೀರು ತ್ಯಜಿಸಿ 9 ದಿನಗಳವೆಗೆ ದೇವಿಯ ಧ್ಯಾನ, ಪೂಜೆಯಲ್ಲಿ ಮಗ್ನರಾಗಿರುವ ಬಾಬಾ, ಕುತ್ತಿಗೆವರೆಗೆ ಸಮಾಧಿಯಾಗುತ್ತಾರೆ. ಅದರ ಮೇಲೆ ಗೋಧಿ ಬಿತ್ತಲಾಗುತ್ತದೆ. ಸಮಾಧಿಯ ಸಮಯದಲ್ಲಿ ಬಾಬಾ ಕೇವಲ ಒಂದು ಚಮಚ ನೀರು ಮಾತ್ರ ಕುಡಿಯುತ್ತಾರಂತೆ.
ಇದನ್ನೂ ಓದಿ:ಆಧುನಿಕ ಭಾರತದ ಕೊಡುಗೈ ದಾನಿ ರತನ್​ ಟಾಟಾ; ಬಡವರಿಗಾಗಿ ಮಿಡಿದ ಹೃದಯ ಎಂಥದ್ದು?
ಗುಜರಾತಿ ಬಾಬಾ ಅವರ ಮೂಲ ಹೆಸರು ಜಗದೀಶಾನಂದ ಗುರು ಕಲ್ಯಾಣದಾಸ್ ಮಹಾರಾಜ್. ಇವರು ಕಳೆದ 33 ವರ್ಷಗಳಿಂದ ದೇವಿಯ ಧ್ಯಾನ ಮಾಡುತ್ತಿದ್ದಾರಂತೆ. ಬಾಬಾ ಇದುವರೆಗೂ ಹಿಮಾಲಯ ಸೇರಿ ಹಲವೆಡೆ 25 ಬಾರಿ ಸಮಾಧಿಯಾಗಿದ್ದಾರಂತೆ. ಗುಜರಾತ್, ಪಂಜಾಬ್, ಹರಿಯಾಣ, ಉತ್ತರಪ್ರದೇಶದಲ್ಲಿಯೂ ಸಮಾಧಿ ಸ್ಥಿತಿಯಲ್ಲಿ ಧ್ಯಾನ ಮಾಡಿದ್ದಾರಂತೆ.
ಸಂಸಾರದಿಂದ ಸನ್ಯಾಸಿಯೆಡೆಗೆ
ಮೂಲತಃ ಗುಜರಾತ್​ನವರಾಗಿರುವ ಬಾಬಾ, ವಿವಾಹಿತ ಸನ್ಯಾಸಿ. ಬಾಬಾರ ಹೆಂಡತಿ, ಮಕ್ಕಳು ಗುಜರಾತ್​ನಲ್ಲಿದ್ದಾರೆ. ಮುಂಬೈನಲ್ಲಿ 2 ದೊಡ್ಡ ಮಾಲ್​ಗಳನ್ನೂ ಹೊಂದಿದ್ದರಂತೆ. ನಂತರ ಎಲ್ಲವನ್ನೂ ತ್ಯಜಿಸಿ ಹಿಮಾಲಯಕ್ಕೆ ಹೋದ ಬಾಬಾ ಕಠಿಣ ತಪಸ್ಸು ಮಾಡಿದ್ದಾರೆ ಅಂತಾರೆ ಅವರ ಭಕ್ತರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us