/newsfirstlive-kannada/media/post_attachments/wp-content/uploads/2025/01/MAHA-KUMBHA-1.jpg)
ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಅಗಣಿತ ಸಂಖ್ಯೆಯಲ್ಲಿ ಯಾತ್ರಿಗಳು ಹರಿದು ಬರುತ್ತಿದ್ದಾರೆ. ಕುಂಭಮೇಳಕ್ಕೆ ಬಂದ ಭಕ್ತನೊಬ್ಬನಿಗೆ ಸಾಧು ಸ್ಪೆಷಲ್ ಆಗಿ ಆಶೀರ್ವಾದ ಮಾಡಿದ ಘಟನೆ ನಡೆದಿದೆ.
ಆಗಿದ್ದು ಏನು..?
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ನೋಡಿದವರೆಲ್ಲ ಬಿದ್ದು ಬಿದ್ದು ನಗುತ್ತಿದ್ದಾರೆ. ಸಾಧು ಒಬ್ಬರು ಕೂತಿದ್ದಾರೆ. ಅಲ್ಲಿಗೆ ಆಗಮಿಸಿದ್ದ ಭಕ್ತನೊಬ್ಬ ಸ್ವಾಮೀಜಿಯ ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ.
ಇದನ್ನೂ ಓದಿ: Stampede: ಅದೆಷ್ಟೋ ಭಕ್ತರು ಜೀವ ಕಳೆದುಕೊಂಡ ಆತಂಕ.. ಕಾಲ್ತುಳಿತಕ್ಕೆ ಸಂಬಂಧಿಸಿದ 10 ಅಪ್ಡೇಟ್ಸ್..!
ವಿಡಿಯೋ ಆಧಾರದ ಮೇಲೆ ಹೇಳೋದಾದರೆ, ಸ್ವಾಮೀಜಿ ಬಳಿ ಆಶೀರ್ವಾದಕ್ಕೆ ಹೋದ ವ್ಯಕ್ತಿಗೆ ಕ್ಯಾಮೆರಾ ಹುಚ್ಚು ಇದ್ದಂತೆ ಕಾಣ್ತಿದೆ. ಜೇಬಿನಿಂದ ಹಣ ತೆಗೆದ ವ್ಯಕ್ತಿ, ಸ್ವಾಮೀಜಿ ಮುಂದೆ ಇರುವ ತಟ್ಟೆಗೆ ಹಣ ಹಾಕಿ ಆಶೀರ್ವಾದ ಪಡೆಯಲು ಮುಂದಾಗುತ್ತಾರೆ. ಆಶೀರ್ವಾದ ವೇಳೆ ಕ್ಯಾಮೆರಾಗೆ ಪೋಸ್ ನೀಡುತ್ತಾನೆ. ಇದನ್ನು ಗಮನಿಸಿದ ಸಾಧು, ಕ್ಯಾಮೆರಾದತ್ತ ಕೈಮಾಡಿ ತಲೆಗೆ ಸರಿಯಾಗಿ ಬಾರಿಸುತ್ತಾರೆ. ಇದರಿಂದ ಗಾಬರಿಯಾದ ಆತ, ಸ್ವಾಮೀಜಿಯನ್ನು ದಿಟ್ಟಿಸುತ್ತ ಎಸ್ಕೇಪ್ ಆಗಿದ್ದಾರೆ.
Yeh badiya tha guru 🤣😂🤣🤣 pic.twitter.com/PkxkpXZvOJ
— Mohit Gulati (@desimojito) January 28, 2025
ಮಹಾಕುಂಭದಲ್ಲಿ ಇಂದು ಮೌನಿ ಅಮವಾಸ್ಯೆಯ ಪವಿತ್ರ ಸ್ನಾನ ನಡೆಯುತ್ತಿದೆ. ಕೋಟ್ಯಾಂತರ ಭಕ್ತರು ತ್ರಿವೇಣಿ ಸಂಗಮಕ್ಕೆ ಆಗಮಿಸುತ್ತಿದ್ದಾರೆ. ಇಂದು ರಾತ್ರಿ ಒಂದು ಗಂಟೆ ಸುಮಾರಿಗೆ ಕಾಲ್ತುಳಿತ ಸಂಭವಿಸಿ ಭಾರೀ ಅನಾಹುತ ನಡೆದು ಹೋಗಿದೆ.
ಇದನ್ನೂ ಓದಿ: ಕುಂಭಮೇಳ ಮುಗಿಸಿ ಬರುವಾಗ ಭೀಕರ ಅಪಘಾತ.. ಮೈಸೂರಿನ ಭಕ್ತರು ಕೊನೆಯುಸಿರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ