newsfirstkannada.com

1992ರಲ್ಲಿ ಮಾಡಿದ ಪ್ರತಿಜ್ಞೆ.. 500Km​ ದೂರದ ಅಯೋಧ್ಯೆಗೆ ಜಡೆಯಲ್ಲಿ ರಾಮರಥ ಎಳೆದುಕೊಂಡು ಹೊರಟ ಬಾಬಾ! 

Share :

Published January 17, 2024 at 4:13pm

  ಜಡೆಯಲ್ಲಿ ರಾಮರಥ ಎಳೆದು ಸಾಗುತ್ತಿರುವ ಬಾಬಾ

  ರಾಮ ಮಂದಿರ ನಿರ್ಮಾಣಕ್ಕಾಗಿ ಅಂದು ಮಾಡಿದ್ರು ಪ್ರತಿಜ್ಞೆ

  ಬಾಬಾ ಬದ್ರಿನಾಥ್ ಜೊತೆಗೆ ಅಯೋಧ್ಯೆಗೆ ಹೊರಟ ಶ್ವಾನ!

ದೇಶದಾದ್ಯಂತ ಭಕ್ತರು ರಾಮಲಲ್ಲಾನನ್ನು ಕಾಣಲು ಉತ್ಸಾಹದಲ್ಲಿದ್ದಾರೆ. ಹಾಗಾಗಿ ಪ್ರಾಣ ಪ್ರತಿಪ್ಠೆಯನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದಾರೆ. ದೇಶದ ವಿವಿಧ ಮೂಲೆಯಿಂದ ಆಯೋಧ್ಯೆಗೆ ಭಕ್ತರು ಆಗಮಿಸುತ್ತಿದ್ದಾರೆ. ಒಂದಲ್ಲಾ ಒಂದು ಹರಕೆಯನ್ನು ಕಟ್ಟಿಕೊಂಡು ತಲುಪುತ್ತಿದ್ದಾರೆ. ಅದರಂತೆಯೇ ಇಲ್ಲೊಬ್ಬ ಬಾಬಾ ಸುಮಾರು 500 ಕಿ.ಮೀ ರಾಮರಥವನ್ನ ಎಳೆದುಕೊಂಡು ರಾಮಜನ್ಮ ಭೂಮಿಯನ್ನು ತಲುಪಲು ಮುಂದಾಗಿದ್ದಾರೆ.

ಹೌದು. ಫತೇಪುರ್​​ ಬಾಬಾ ಬದ್ರಿನಾಥ್ ​ಅಯೋಧ್ಯೆಗೆ ಹೊರಟಿದ್ದಾರೆ. 500 ಕಿಲೋ ಮೀಟರ್​ ದೂರದ ಅಯೋಧ್ಯೆಗೆ ರಾಮರಥವನ್ನು ಎಳೆದುಕೊಂಡು ಹೋಗುತ್ತಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ತಮ್ಮ ಜಡೆಯ ಮೂಲಕ ರಾಮರಥವನ್ನು ಎಳೆದುಕೊಂಡು ಹೊರಟಿದ್ದಾರೆ. ಇವರ ಜೊತೆಗೆ ಶ್ವಾನ ಕೂಡ ಸಾಥ್ ನೀಡಿದೆ.

1992ರಲ್ಲಿ ಪ್ರತಿಜ್ಞೆ ಮಾಡಿದ್ದ ಬಾಬಾ

ಬಾಬಾ ಬದ್ರಿನಾಥ್ ರಾಮಭಕ್ತನಾಗಿದ್ದು, ಮಧ್ಯಪ್ರದೇಶದ ದಾಮೋಕ್​ ನಿವಾಸಿಯಾಗಿದ್ದಾರೆ. ಇವರು 1992ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರವಾದರೆ ರಾಮರಥವನ್ನು ತಮ್ಮ ಜಡೆಯ ಮೂಲಕ ಎಲೆದುಕೊಂಡು ಬರುವುದಾಗಿ ಪ್ರತಿಜ್ಞೆ ಮಾಡಿದ್ದರು. ಅದರಂತೆಯೇ ಇದೀಗ ಜನವರಿ 22ರಂದು ಅಯೋಧ್ಯೆಯನ್ನು ಬಾಬ ತಲುಪಲಿದ್ದಾರೆ.

ಮತ್ತೊಂದು ಸಂಗತಿ ಎಂದರೆ ಬಾಬಾ ಬದ್ರಿನಾಥ್​​ 310 ಕಿಲೋ ಮೀಟರ್​ ದೂರವನ್ನು ಈಗಾಗಲೇ ಕ್ರಮಿಸಿದ್ದಾರೆ. ಜನವರಿ 22 ರಂದು ರಾಮಜನ್ಮ ಭೂಮಿ ತಲುಪಲಿದ್ದಾರೆ. ಇವರ ಜೊತೆಗೆ ಶ್ವಾನ ಕೂಡ ಹೆಜ್ಜೆ ಹಾಕುತ್ತಿರೋದು ಅಚ್ಚರಿಗೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

1992ರಲ್ಲಿ ಮಾಡಿದ ಪ್ರತಿಜ್ಞೆ.. 500Km​ ದೂರದ ಅಯೋಧ್ಯೆಗೆ ಜಡೆಯಲ್ಲಿ ರಾಮರಥ ಎಳೆದುಕೊಂಡು ಹೊರಟ ಬಾಬಾ! 

https://newsfirstlive.com/wp-content/uploads/2024/01/baba-Badrinath.jpg

Load More