VIDEO: ದುಬಾರಿ ಕಾರು ಖರೀದಿಸಿ ಶಾಕ್ ಕೊಟ್ಟ ಮಹಾಕುಂಭಮೇಳದ ಗಿರಿ ಬಾಬಾ; ಏನಿದರ ವಿಶೇಷ?

author-image
admin
Updated On
VIDEO: ದುಬಾರಿ ಕಾರು ಖರೀದಿಸಿ ಶಾಕ್ ಕೊಟ್ಟ ಮಹಾಕುಂಭಮೇಳದ ಗಿರಿ ಬಾಬಾ; ಏನಿದರ ವಿಶೇಷ?
Advertisment
  • ಪ್ರಯಾಗರಾಜ್‌ನಲ್ಲಿ ಒಂದು ಕೈ ಮೇಲೆತ್ತಿ ಕುಳಿತುಕೊಂಡಿದ್ದ ಸನ್ಯಾಸಿ
  • ಮಹೀಂದ್ರಾ ಶೋ ರೂಮ್‌ಗೆ ಹೋಗಿ ಕಾರು ಖರೀದಿಸಿದ ಈ ಸನ್ಯಾಸಿ
  • ಮಹಾಕುಂಭಮೇಳದಲ್ಲಿ ನಾಗಾಸಾಧುಗಳಿಗೂ ಆದಾಯ ಹೇಗೆ ಬರುತ್ತೆ?

144 ವರ್ಷದ ಬಳಿಕ ನಡೆದ ಪ್ರಯಾಗರಾಜ್‌ ಮಹಾಕುಂಭಮೇಳ ಹಲವು ಅಳಿಸಲಾಗದ ದಾಖಲೆಗಳನ್ನ ಬರೆದಿದೆ. ಈ ಶತಮಾನದ ಮಹಾಕುಂಭಮೇಳದ ಹೆಜ್ಜೆ, ಹೆಜ್ಜೆಯೂ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.

ಪ್ರಯಾಗರಾಜ್‌ನ ಮಹಾಕುಂಭಮೇಳದಲ್ಲಿ ಭಾಗಿಯಾಗಿದ್ದ ಮಹಾಕಾಳ ಗಿರಿ ಬಾಬಾ ಇದೀಗ ಮಹೀಂದ್ರಾ ಸ್ಕಾರ್ಪಿಯೋ ಖರೀದಿ ಮಾಡಿ ಎಲ್ಲರೂ ಶಾಕ್ ಆಗುವಂತೆ ಮಾಡಿದ್ದಾರೆ.

ಮಹಾಕಾಳ ಗಿರಿ ಬಾಬಾ ಪ್ರಯಾಗರಾಜ್‌ನಲ್ಲಿ ಒಂದು ಕೈ ಮೇಲೆತ್ತಿ ಕುಳಿತುಕೊಂಡು ಎಲ್ಲರ ಗಮನ ಸೆಳೆದಿದ್ದರು.

publive-image

ಮಹೀಂದ್ರಾ ಶೋ ರೂಮ್‌ಗೆ ಹೋಗಿ ಕಾರು ಖರೀದಿಸಿರುವ ಈ ಸನ್ಯಾಸಿ ತಾವೇ ಒಂದು ಕೈಯಲ್ಲಿ ಡ್ರೈವ್ ಕೂಡ ಮಾಡಿಕೊಂಡು ಹೊರಟಿದ್ದಾರೆ.

publive-image

ಮಹಾಕುಂಭ ಮೇಳದಲ್ಲಿ ಗಳಿಸಿದ ಆದಾಯದಿಂದಲೇ ಮಹಾಕಾಳ ಗಿರಿ ಬಾಬಾ ಈ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮೊನಾಲಿಸಾಳಿಂದ ಐಐಟಿ ಬಾಬಾ.. ಇಂಟರ್​ನೆಟ್​ನಲ್ಲಿ ಸಂಚಲನ ಮೂಡಿಸಿದ ಮಹಾಕುಂಭದ ಈ ಘಟನೆಗಳು 

ಮಹಾಕುಂಭಮೇಳದಲ್ಲಿ ಸನ್ಯಾಸಿ ಹಾಗೂ ನಾಗಾಸಾಧುಗಳಿಗೂ ಒಳ್ಳೆಯ ಆದಾಯ ಬರುತ್ತದೆ. ಮಹಾಕುಂಭಮೇಳದಲ್ಲಿ ಭಕ್ತರು, ಜನ ಸಾಮಾನ್ಯರು ನೀಡಿದ ದೇಣಿಗೆ ಹಣದಿಂದಲೇ ಈ ಬಾಬಾ ಕಾರು ಖರೀದಿ ಮಾಡಿದ್ದಾರೆ.


">May 1, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment