newsfirstkannada.com

×

ಸಲ್ಮಾನ್ ಹಾಗೂ ಶಾರುಖ್ ನಡುವೆ ಸೇತುವೆಯಂತಿದ್ದ ಬಾಬಾ ಸಿದ್ಧಕಿ; ಇಫ್ತಾರ್​ಕೂಟದಲ್ಲಿಯೇ ಆಗುತ್ತಿತ್ತು ಸಂಧಾನ

Share :

Published October 13, 2024 at 6:19pm

    ಸಲ್ಮಾನ್ ಖಾನ್- ಶಾರುಖ್​ ಖಾನ್ ನಡುವೆ ಸಂಧಾನ ಮಾಡಿದ್ದ ಸಿದ್ಧಕಿ

    ಕತ್ರಿನಾ ಕೈಫ್ ಹುಟ್ಟು ಹಬ್ಬದಂದು ಕಿತ್ತಾಡಿಕೊಂಡಿದ್ದ ಸಲ್ಮಾನ್-ಶಾರುಖ್​

    ಇಬ್ಬರ ನಡುವಿನ ಐದು ವರ್ಷದ ವೈಷಮ್ಯ ಮರೆಸಿದ್ದು ಹೇಗೆ ಬಾಬಾ ಸಿದ್ಧಕಿ

ಬಾಬಾ ಸಿದ್ಧಕಿ ಬಿಷ್ಣೋಯಿ ಗ್ಯಾಂಗ್ ನಡೆಸಿದ ಗುಂಡಿನ ದಾಳಿಗೆ ಪ್ರಾಣಬಿಟ್ಟಿದ್ದಾರೆ. ಪಶ್ಚಿಮ ಬಾಂದ್ರಾದಲ್ಲಿದ್ದ ಅವರ ಪುತ್ರನ ಆಫೀಸ್​ನಿಂದ ಆಚೆ ಬಂದು ಕಾರ್​ ಹತ್ತುವಾಗ ಅವರ ಬಳಿ ಬಂದ ಮೂವರು ದುಷ್ಕರ್ಮಿಗಳು ಅವರ ಮೇಲೆ ಮೂರು ಸುತ್ತಿನ ಗುಂಡಿನ ದಾಳಿ ನಡೆಸಿದ್ದರು. ಕೂಡಲೇ ಸಿದ್ಧಕಿಯನ್ನು ಆಸ್ಪತ್ರೆಗೆ ಸೇರಿಸಲಾಯ್ತು ಆದರೂ ಕೂಡ ಅವರು ಬದುಕುಳಿಯಲಿಲ್ಲ.

ಬಾಬಾ ಸಿದ್ಧಕಿ ಪಶ್ಚಿಮ ಬಾಂದ್ರಾದಿಂದ ಒಟ್ಟು ಮೂರ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಒಂದು ಬಾರಿ ಮಹಾರಾಷ್ಟ್ರ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಹೀಗಿದ್ದ ಬಾಬಾ ಸಿದ್ಧಕಿ ಬಾಲಿವುಡ್​ ನಟರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಕಾಂಗ್ರೆಸ್​ನ ಹಿರಿಯ ನಾಯಕ ಹಾಗೂ ಬಾಲಿವುಡ್​ ನಟ ಹಾಗೂ ನಿರ್ದೇಶಕರಾಗಿದ್ದ ದಿವಂಗತ ಸುನೀಲ್ ದತ್ತ ಜೊತೆಗೆ ಸಿದ್ಧಕಿ ತುಂಬಾ ಆತ್ಮೀಯ ಸಂಬಂಧವನ್ನು ಹೊಂದಿದ್ದರು. ಇದು ಅವರಿಗೆ ತಮ್ಮ ಶಾಸಕರಾಗುವ ದಾರಿಯನ್ನು ದೊಡ್ಡದಾಗಿ ತೆರೆಸಿಕೊಟ್ಟಿತ್ತು. ಅದರ ಜೊತೆಗೆ ಬಾಲಿವುಡ್​ ಸಂಪರ್ಕಕ್ಕೆ ಒಂದು ದಾರಿಯಾಗಿ ಮಾರ್ಪಟ್ಟಿತ್ತು.

ಇದನ್ನೂ ಓದಿ: ಗೆಳೆಯನ ಭೀಕರ ಹ*ತ್ಯೆಯಿಂದ ವಿಚಲಿತನಾದ ಸಲ್ಮಾನ್ ಖಾನ್! ನಿದ್ದೆ ಮಾಡಲು ಪರದಾಡುತ್ತಿರುವ ಸಲ್ಲು!

ಬಾಬಾ ಸಿದ್ಧಕಿ ಆಗಾಗ ಏರ್ಪಡಿಸುತ್ತಿದ್ದ ಐಷಾರಾಮಿ ಇಫ್ತಾರ್​ ಪಾರ್ಟಿಗಳಲ್ಲಿ ಬಾಲಿವುಡ್​ನ ಹಲವು ಸ್ಟಾರ್​ಗಳು ಪಾಲ್ಗೊಳ್ಳುತ್ತಿದ್ದರು. ಶಾರುಖ್​ ಖಾನ್, ಸಲ್ಮಾನ್ ಖಾನ್, ಸುನೀಲ್ ದತ್ತ, ಸಂಜಯ್​ ದತ್ತ, ಶಿಲ್ಪಾಶೆಟ್ಟಿ ಹೀಗೆ ಹಲವಾರು ಬಾಲಿವುಡ್ ನಟ ನಟಿಯರು ಇವರ ಇಫ್ತಾರ್​ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದರು.

ಈ ಒಂದು ಇಫ್ತಾರ್​ಕೂಟವೇ ಸಲ್ಮಾನ್ ಹಾಗೂ ಶಾರುಖ್​ ಖಾನ್​ರನ್ನ ಬಾಬಾ ಸಿದ್ಧಕಿಗೆ ಮತ್ತಷ್ಟು ಹತ್ತಿರ ಮಾಡಿದವು. ಈ ಮೂವರ ನಡುವೆ ಒಂದು ಆತ್ಮೀಯ ಬಾಂಧವ್ಯ ಸೃಷ್ಟಿಯಾಯ್ತು. 2008ರಲ್ಲಿ ಕತ್ರಿನಾ ಕೈಫ್​ ಹುಟ್ಟುಹಬ್ಬದ ಪಾರ್ಟಿಯಂದು ಸಲ್ಮಾನ್ ಹಾಗೂ ಶಾರುಖ್​ ಕಿತ್ತಾಡಿಕೊಂಡಿದ್ದರು. ಒಂದು ಹಂತಕ್ಕೆ ಸಲ್ಲು ಶಾರುಖ್ ಮೇಲೆ ಹಲ್ಲೆ ಮಾಡಲು ಕೂಡ ಮುಂದಾಗಿದ್ದಾರೆ ಎಂಬ ಮಾತುಗಳು ಹರಿದಾಡಿದ್ದವು. 2008ರಿಂದ 2013ರವರೆಗೆ ಅಂದ್ರೆ ಐದು ವರ್ಷಗಳ ಕಾಲ ಸಲ್ಮಾನ್ ಹಾಗೂ ಶಾರುಖ್ ಇಬ್ಬರ ನಡುವೆ ಮಾತುಗಳೇ ಮುರಿದು ಬಿದ್ದಿದ್ದವು.

ಇದನ್ನೂ ಓದಿ: ಗೀತಾ ಜಯಂತಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ! ಆಮೇಲೆ ಆಗಿದ್ದೇನು?

2013ರಲ್ಲಿ ಬಾಬಾ ಸಿದ್ಧಕಿ ಇಫ್ತಾರ್ ಪಾರ್ಟಿಯಲ್ಲಿ ಈ ಇಬ್ಬರು ಸ್ಟಾರ್​ ನಟರು ಬಂದಿದ್ದರು. ಈ ವೇಳೆ ಬಾಬಾ ಸಿದ್ಧಕಿ ಇಬ್ಬರನ್ನು ಒಂದು ಮಾಡುವಲ್ಲಿ ಯಶಸ್ವಿ ಕೂಡ ಆದರೂ. ಒಬ್ಬರಿಗೊಬ್ಬರು ಅಪ್ಪಿಕೊಂಡು ಹಳೆಯ ವೈಷಮ್ಯ ಮರೆಯುವಂತೆ ಸಿದ್ಧಕಿ ಹೇಳಿದ್ದರು. ಅದರಂತೆ ಇಬ್ಬರೂ ಸೂಪರ್​ಸ್ಟಾರ್​ಗಳ ಒಬ್ಬರಿಗೊಬ್ಬರು ಅಪ್ಪಿಕೊಂಡು ಹಳೆಯ ವೈಷಮ್ಯವನ್ನು ಮರೆತು ಮತ್ತೆ ಒಂದಾದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಲ್ಮಾನ್ ಹಾಗೂ ಶಾರುಖ್ ನಡುವೆ ಸೇತುವೆಯಂತಿದ್ದ ಬಾಬಾ ಸಿದ್ಧಕಿ; ಇಫ್ತಾರ್​ಕೂಟದಲ್ಲಿಯೇ ಆಗುತ್ತಿತ್ತು ಸಂಧಾನ

https://newsfirstlive.com/wp-content/uploads/2024/10/SALMAN-KHAN-SIDDAQUE-3.jpg

Load More