/newsfirstlive-kannada/media/post_attachments/wp-content/uploads/2024/10/BABA-SIDDIQI-1.jpg)
ಬಾಂದ್ರಾ ಈಸ್ಟ್ ಮುಂಬೈನಲ್ಲಿ ಎನ್ಸಿಪಿ ಹಿರಿಯ ನಾಯಕ ಬಾಬಾ ಸಿದ್ಧಕಿ ಮೃತಪಟ್ಟಿದ್ದಾರೆ. ಇಂದು ಬಾಬಾ ಸಿದ್ಧಕಿ ಮೇಲೆ ಅಪರಿಚಿತರು ಗುಂಡಿನ ದಾಳಿ ಮಾಡಿದ್ದರು ಕೂಡಲೇ ಬಾಬಾ ಸಿದ್ಧಕಿಯನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯ್ತು.
ಇದನ್ನೂ ಓದಿ:2,847 ಹುದ್ದೆಗಳಿಗೆ ನೇರ ನೇಮಕಾತಿ.. ಬೆಳಗಾವಿಯ 2 ಹಂತದ Rallyಯಲ್ಲಿ ನೀವೂ ಭಾಗಿಯಾಗಿ
ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಬಾ ಸಿದ್ಧಕಿ ಮೃತಪಟ್ಟಿದ್ದಾರೆ.ಮುಂಬೈನ ಪೂರ್ವದಲ್ಲಿರುವ ಬಾಂದ್ರಾದಲ್ಲಿ ಇಂದು ಇಬ್ಬರು ಆಗಂತುಕರು ಸಿದ್ಧಕಿ ಮೇಲೆ ಹಠಾತ್ ಗುಂಡಿನ ದಾಳಿ ಮಾಡಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯ್ತು ಆದ್ರೂ ಕೂಡ ಸಿದ್ಧಕಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ
ಇದನ್ನೂ ಓದಿ:ಕೈದಿಗಳಿಗೆ ವರವಾಯ್ತು ಜೈಲಿನಲ್ಲಿ ನಡೆದ ರಾಮಲೀಲಾ ನಾಟಕ; ವಾನರ ವೇಷ ಹಾಕಿದ ಇಬ್ಬರು ಎಸ್ಕೇಪ್!
ಮೂಲಗಳ ಪ್ರಕಾರ ಈಗಾಗಲೇ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಅಪರಿಚಿತರು ಬಾಬಾ ಸಿದ್ಧಕಿ ಅವರ ಪುತ್ರ ಜೆಹ್ಸಾನ್ ಸಿದ್ಧಕಿ ಆಫೀಸ್ ಬಳಿ ಇದ್ದಾಗ ಶೂಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮೂರರಿಂದ ನಾಲ್ಕು ಸುತ್ತು ಗುಂಡಿನ ದಾಳಿ ನಡೆಸಿರುವ ಕಿರಾತಕರು ಪರಾರಿಯಾಗಿದ್ದರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ