Advertisment

ಬಾಬಾ ಸಿದ್ಧಿಕಿ ಕೊ*ಲೆ ಮಾಡಿದ ಆರೋಪಿಗಳು ಅರೆಸ್ಟ್​.. ಒಬ್ಬೊಬ್ಬರ ಜಾತಕ ಬಿಚ್ಚಿಟ್ಟ ಪೊಲೀಸರು

author-image
AS Harshith
Updated On
ಬಾಬಾ ಸಿದ್ಧಿಕಿ ಕೊ*ಲೆ ಮಾಡಿದ ಆರೋಪಿಗಳು ಅರೆಸ್ಟ್​.. ಒಬ್ಬೊಬ್ಬರ ಜಾತಕ ಬಿಚ್ಚಿಟ್ಟ ಪೊಲೀಸರು
Advertisment
  • NCP ನಾಯಕ ಬಾಬಾ ಸಿದ್ಧಿಕಿ ಹತ್ಯೆ ಪ್ರಕರಣ
  • 2 ಶೂಟರ್​ಗಳನ್ನು ಬಂಧಿಸಿದ ಕ್ರೈ ಬ್ರಾಂಚ್​ ಪೊಲೀಸರು
  • ಆರೋಪಿಗಳ ಜಾತಕವನ್ನು ತೆರೆದಿಟ್ಟಿರುವ ಪೊಲೀಸರು

NCP ನಾಯಕ ಬಾಬಾ ಸಿದ್ಧಿಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶೂಟರ್​ಗಳನ್ನು ಕ್ರೈ ಬ್ರಾಂಚ್​ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಹರಿಯಾಣ ನಿವಾಸಿ ಗುರ್ಮೈಲ್​​ ಬಲ್ಜೀತ್​​ ಸಿಂಗ್​ (23) ಮತ್ತು ಉತ್ತರ ಪ್ರದೇಶದ ಬಹ್ರೈಚ್​ ನಿವಾಸಿ ಧರ್ಮರಾಜ್​ ರಾಜೇಶ್​ ಕಶ್ಯಪ್​ ಎಂದು ಗುರುತಿಸಲಾಗಿದೆ.

Advertisment

ಮತ್ತೋರ್ವ ಶೂಟರ್​​ ಶಿವಕುಮಾರ್​ ಗೌತಮ್​ ಅಲಿಯಾಸ್​ ಶಿವ (20) ಕೂಡ ಉತ್ತರ ಪ್ರದೇಶದ ಬಹ್ರೈಚ್​ ನಿವಾಸಿಯಾಗಿದ್ದು, ಆತನನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.

ಬಾಬಾ ಸಿದ್ಧಿಕಿಯನ್ನು ಹತ್ಯೆ ಮಾಡಿದ ಆರೋಪಿಗಳ ಜಾತಕವನ್ನು ಪೊಲೀಸರು ತೆರೆದಿಟ್ಟಿದ್ದಾರೆ. ಅದರಲ್ಲಿ ಧರ್ಮರಾಜ್​ ಮತ್ತು ಶಿವಕುಮಾರ್ ಬಹ್ರೈಚ್​ನ​ ಕೈಸರ್​ಗಂಜ್​ ಪೊಲೀಸ್​​ ಠಾಣೆ ವ್ಯಾಪ್ತಿಯ ಗಂದಾರಾ ಪಟ್ಟಣ ನಿವಾಸಿಗಳಾಗಿದ್ದು, ಇವರ ಮೇಲೆ ಯಾವುದೇ ಕ್ರಿಮಿನಲ್​ ಪ್ರಕರಣವಿರಲಿಲ್ಲ. ಆದರೆ ಬಲ್ಜೀತ್​ ಸಿಂಗ್​ ಮೇಲೆ ಕೊಲೆ ಪ್ರಕರಣ ದಾಖಲಾಗಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿ.. ಪ್ರಿಯಕರನ ಜೊತೆ ಸೇರಿಕೊಂಡು ಮಕ್ಕಳನ್ನ ಹ*ತ್ಯೆಗೈದ ಸ್ವೀಟಿ!

Advertisment

ಪೋಷಕರನ್ನು ಕಳೆದುಕೊಂಡಿರುವ ಆರೋಪಿ ಬಲ್ಜೀತ್ ತನ್ನ ಅಜ್ಜಿ ಪುಲಿ ದೇವಿ ಜೊತೆಗೆ ಬೆಳೆದಿದ್ದನು. ಆತನ ಸಹೋದರನೊಬ್ಬ ಅಜ್ಜಿಯ ಜೊತೆ ವಾಸಿಸುತ್ತಿದ್ದಾನೆ. ಬಲ್ಜೀತ್​ ಮೇಲೆ ಈಗಾಗಲೇ ಕೊಲೆ ಪ್ರಕರಣವೊಂದಿದ್ದು, ಆತ ತನ್ನ ಅಣ್ಣನನ್ನು ಕೊಲೆ ಮಾಡಿದ್ದನು ಎಂಬ ಸಂಗತಿ ಬಯಲಾಗಿದೆ.

ಧರ್ಮರಾಜ್​ ಮತ್ತು ಶಿವ ಕೂಲಿ ಕೆಲಸಕ್ಕೆ ಪುಣೆಗೆ ಬಂದಿದ್ದರು. ಶಿವ ಸುಮಾರು 5-6 ವರ್ಷದಿಂದ ಪುಣೆಯ ಸ್ಕ್ರಾಪ್​​ ಡೀಲರ್​ನಲ್ಲಿ ಕೆಲಸ ಮಾಡುತ್ತಿದ್ದ. ಕೆಲ ತಿಂಗಳ ಹಿಂದೆ ಧರ್ಮರಾಜ್​ನನ್ನು ಪುಣೆಗೆ ಕರೆಸಿಕೊಂಡಿದ್ದ. ಈ ವೇಳೆ ​ಬಲ್ಜೀತ್​ನ ಪರಿಚಯವಾಗಿದೆ.

ಇದನ್ನೂ ಓದಿ: ಬೆಂಗಳೂರು: ಶ್ವಾನದ ಮರಿಗಳ ಮೇಲೆ ಕಾರು ಚಲಾಯಿಸಿ ಅಟ್ಟಹಾಸ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ

Advertisment

ಪೊಲೀಸರು ಹೇಳುವ ಪ್ರಕಾರ, ಅಕ್ಟೋಬರ್ 12, 2024 ರಂದು ರಾತ್ರಿ 9:15 ರಿಂದ 9:30 ರ ನಡುವೆ, ಬಾಬಾ ಸಿದ್ದಿಕಿ ಅವರು ತಮ್ಮ ಕಚೇರಿಯಿಂದ ಹೊರಟು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದ ಕಡೆಗೆ ಹೊರಟಿದ್ದಾರೆ. ಈ ವೇಳೆ ಆರೋಪಿಗಳು ಗುಂಡು ಹಾರಿಸಿದ್ದಾರೆ.

ಬಾಬಾ ಸಿದ್ದಿಕಿಯನ್ನು ತಕ್ಷಣವೇ ಚಿಕಿತ್ಸೆಗಾಗಿ ಬಾಂದ್ರಾದ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಈ ಪ್ರಕರಣ ಸಂಬಂಧ ನಿರ್ಮಲ್ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 589/2024 ರಂತೆ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1), 109, 125 ಮತ್ತು 3(5) ಜೊತೆಗೆ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3, 25, 5 ಮತ್ತು 27 ಮತ್ತು ಸೆಕ್ಷನ್ 37 ಮತ್ತು 137 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment