ನಿಜವಾಗ್ತಿದೆ ಬಾಬಾ ವಂಗಾ ಭವಿಷ್ಯ..! ಇದಕ್ಕೆ ಬಿಸಿಲಿನ ತೀವ್ರತೆಯೇ ಸಾಕ್ಷಿ, 2024ರ ಬಗ್ಗೆ ಕೊಟ್ಟಿದ್ದ ಎಚ್ಚರಿಕೆ ಏನು?

author-image
Ganesh
Updated On
ನಿಜವಾಗ್ತಿದೆ ಬಾಬಾ ವಂಗಾ ಭವಿಷ್ಯ..! ಇದಕ್ಕೆ ಬಿಸಿಲಿನ ತೀವ್ರತೆಯೇ ಸಾಕ್ಷಿ, 2024ರ ಬಗ್ಗೆ ಕೊಟ್ಟಿದ್ದ ಎಚ್ಚರಿಕೆ ಏನು?
Advertisment
  • ಬಾಬಾ ವಂಗಾ ಪ್ರಕಾರ ಜಗತ್ತು ಕೊನೆಗೊಳ್ಳೋದು ಯಾವಾಗ?
  • ಬಲ್ಗೇರಿಯಾದ ಬಾಬಾ ವಂಗಾ ಹೇಳಿದ ಭವಿಷ್ಯಗಳೆಲ್ಲ ನಿಜವಾಗಿವೆ
  • 2024ರಲ್ಲಿ ವೈದ್ಯಕೀಯ ಲೋಕಕ್ಕೆ ಗುಡ್​ನ್ಯೂಸ್​ ಎಂದಿದ್ದ ಬಾಬಾ ವಂಗಾ

2023 ಕಳೆದು 2024 ಎಂಟ್ರಿಯಾಗಿ ಮೂರು ತಿಂಗಳ ಪೂರೈಸಿ ನಾಲ್ಕನೇ ತಿಂಗಳು ರನ್ನಿಂಗ್​ನಲ್ಲಿದೆ. ಈ ಹೊತ್ತಿನಲ್ಲಿ ಪ್ರಪಂಚವು ಕೊಂಚ ಪ್ರಕ್ಷುಬ್ಧತೆ ಅನುಭವಿಸುತ್ತಿದೆ. ಇದನ್ನು ಗಮನಿಸಿದ ಕೆಲವರು ಬಾಬಾ ವಂಗಾ (Baba Vanga) ನುಡಿದಿದ್ದ ಭವಿಷ್ಯವಾಣಿಯನ್ನು ಮುನ್ನಲೆಗೆ ತಂದಿದ್ದಾರೆ. 2024ರ ಬಗ್ಗೆ ಬಾಬಾ ಅವರು ನುಡಿದಿರುವ ಭವಿಷ್ಯಗಳು ನಿಜವಾಗುತ್ತಿವೆ ಎನ್ನುತ್ತಿದ್ದಾರೆ.

ಹೌದು, 9/11, ಚೆರ್ನೋಬಿಲ್ ದುರಂತ ಮತ್ತು ರಾಜಕುಮಾರಿ ಡಯಾನಾ ಸಾವಿನ ಬಗ್ಗೆ ನಿಖರವಾಗಿ ಭವಿಷ್ಯ ನುಡಿದಿದ್ದ ಬಲ್ಗೇರಿಯನ್​ನ ಜನಪ್ರಿಯ ಬಾಬಾ ವಂಗಾ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಸಾಯುವುದಕ್ಕೂ ಮೊದಲು 1996ರಲ್ಲಿ ನುಡಿದಿರುವ ಭವಿಷ್ಯಗಳು ನಿಜವಾಗುತ್ತಿವೆ. ಅಂತೆಯೇ 2024ರ ಬಗ್ಗೆ ನುಡಿದಿರುವ ಭವಿಷ್ಯ ಕೂಡ ನಿಜವಾಗುತ್ತಿದೆ ಎಂಬ ಚರ್ಚೆ ಶುರುವಾಗಿದೆ.

ಬಾಬಾಳ ಕೆಲವು ಭವಿಷ್ಯವಾಣಿಗಳು..!
2024ರಲ್ಲಿ ತೀವ್ರ ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ವಿಕೋಪಗಳ ಬಗ್ಗೆ ಬಾಬಾ ವಂಗಾ ಊಹೆ ಮಾಡಿದ್ದರು. ಸೈನ್ಸ್ ಅಡ್ವಾನ್ಸ್‌ನಲ್ಲಿ (Science Advances) ಪ್ರಕಟವಾದ ಮಾಹಿತಿ ಪ್ರಕಾರ, ಜಾಗತಿಕ ಬಿಸಿಲಿನ ಆರ್ಭಟ ಜೋರಾಗಿದೆ. ಜಾಗತಿಕವಾಗಿ ಆಗಾಗ ಶಾಕದ ಅಲೆಗಳ (heat waves) ಪ್ರಮಾಣ 67% ರಷ್ಟು ಸಂಭವಿಸುತ್ತದೆ. ಕಳೆದ 40 ವರ್ಷಗಳ ಹಿಂದೆ ದಾಖಲಾದ ತಾಪಮಾನಕ್ಕೆ ಹೋಲಿಸಿದರೆ ಈ ವರ್ಷ ಶಾಖದ ತೀವ್ರತೆ ಹೆಚ್ಚಾಗಿದೆ ಎಂದು ತಿಳಿಸಿದೆ.

publive-image

ಇದನ್ನೂ ಓದಿ:ಬರ್ತ್​​ಡೇ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೋಗಿದ್ದಾಗ ಭೀಕರ ಅಪಘಾತ; ತಾಯಿ ಮಗು ಸಾವು

1979 ರಿಂದ 1983ರವರೆಗೆ Global heat waves ಸರಾಸರಿ ಎಂಟು ದಿನಗಳವರೆಗೆ ಇರುತ್ತಿತ್ತು. 2016 ರಿಂದ 2020 ರವರೆಗೆ ಅದರ ಅವಧಿಯು 12 ದಿನಗಳವರೆಗೆ ವಿಸ್ತರಿಸಿತು. ವಿಶ್ವ ಹವಾಮಾನ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, 2024ರಲ್ಲಿ ಅದರ ತೀವ್ರತೆ ಹೊಸ ದಾಖಲೆ ಬರೆಯುತ್ತಿದೆ ಎಂದು ತಿಳಿಸಿದೆ.

ಸೈಬರ್ ದಾಳಿಗಳು
ಸೈಬರ್ ದಾಳಿ ಬಗ್ಗೆ ಬಾಬಾ ವಂಗಾ ನುಡಿದಿದ್ದ ಅತ್ಯಂತ ಗಮನಾರ್ಹ ಭವಿಷ್ಯವಾಣಿಗಳಲ್ಲಿ ಒಂದಾಗಿದೆ. 1996ರಲ್ಲಿ ಅವರು ಸಾವನ್ನಪ್ಪಿದರು. ಆ ಕಾಲದಲ್ಲಿ ಇಂಟರ್ನೆಟ್ ಆರಂಭಿಕ ಹಂತದಲ್ಲಿತ್ತು. ಹೀಗಿದ್ದೂ ಕೂಡ ಅವರು ಸೈಬರ್ ದಾಳಿ ಬಗ್ಗೆ ಊಹಿಸಿದ್ದರು. ಜಾಗತಿಕ ಮಟ್ಟದಲ್ಲಿ ಸೈಬರ್ ದಾಳಿ ಮೂಲಕ ಭದ್ರತಾ ಅಪಾಯ ಇದೆ ಎಂದಿದ್ದರು.

publive-image

ಇದನ್ನೂ ಓದಿ:ಇಬ್ಬರು ಮಕ್ಕಳ ಮೇಲೆ ಬೀದಿ ನಾಯಿಗಳು ಭಯಾನಕ ದಾಳಿ; ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಿ..

ಇತ್ತೀಚೆಗೆ AT ಅಂಡ್ T ‘ಡಾರ್ಕ್ ವೆಬ್’ನಲ್ಲಿ ಪತ್ತೆಯಾದ ಮಾಹಿತಿ ಪ್ರಕಾರ.. ಪ್ರಸ್ತುತ ಸುಮಾರು 70ಲಕ್ಷಕ್ಕೂ ಅಧಿಕ ಜನರ ಪಾಸ್​ವರ್ಡ್​ ಸೇರಿದಂತೆ ಖಾಸಗಿ ಮಾಹಿತಿಗಳು ಪತ್ತೆಯಾಗಿವೆ. ಒಂದು ಅಂದಾಜಿನ ಪ್ರಕಾರ ಸುಮಾರು 60 ಕೋಟಿಗೂ ಹೆಚ್ಚು ಮಂದಿಯ ಖಾಸಗಿ ಮಾಹಿತಿಗಳು ಸಿಕ್ಕಿವೆ. ಈ ಸಂಬಂಧ ತನಿಖೆಗಳು ನಡೆಯುತ್ತಿವೆ. ಕಳೆದ 12 ತಿಂಗಳುಗಳಲ್ಲಿ, Apple, Meta ಮತ್ತು X ನಂತಹ ಪ್ರಮುಖ ಕಂಪನಿಗಳು ಸೈಬರ್‌ ಸುರಕ್ಷತೆ ಉಲ್ಲಂಘನೆ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿತ್ತು.

ಆರ್ಥಿಕ ಬಿಕ್ಕಟ್ಟು
ಜಾಗತಿಕ ಆರ್ಥಿಕ ಬೆಳವಣಿಗೆಗೆ ಹೊಡೆತ, ರಾಜಕೀಯ ಉದ್ವಿಗ್ನತೆ, ಸಾಲದ ಪ್ರಮಾಣ ಹೆಚ್ಚಾಗುವ ಬಗ್ಗೆ ಭವಿಷ್ಯ ನುಡಿದಿದ್ದರು. ಇದು ಈಗಾಗಲೇ ಸಂಭವಿಸಿದೆ. ಲಕ್ಷಾಂತರ ಅಮೆರಿಕನ್ನರು ನಿರಂತರ ಹಣದುಬ್ಬರ ಎದುರಿಸುತ್ತಿದ್ದಾರೆ ಎಂದು ಅಲಿಯಾನ್ಸ್ ಲೈಫ್ (Allianz Life) ಅಧ್ಯಯನ ತಿಳಿಸಿದೆ. 2023ರ ವರೆಗೂ US ಆರ್ಥಿಕತೆಯು ವಿಶ್ವದಲ್ಲೇ ಅತಿ ದೊಡ್ಡದಾಗಿದೆ. 2022ರಲ್ಲಿ ಶೇಕಡಾ 1.9 ರಿಂದ 2.5 ರಷ್ಟು ವಿಸ್ತರಿಸಿಕೊಂಡಿತು. ಪ್ರಸ್ತುತ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಅಮೆರಿಕದ ಆರ್ಥಿಕತೆ ಮಂದಗತಿಯಲ್ಲಿ ಸಾಗಿದೆ. ಜಪಾನ್ ಕೂಡ ಇದೇ ಸಂಕಟ ಅನುಭವಿಸುತ್ತಿದೆ. ಚೀನಾ ಕೂಡ ಇದರಿಂದ ಹೊರತಾಗಿಲ್ಲ.

publive-image

ಇದನ್ನೂ ಓದಿ:ತೆಲಂಗಾಣದಲ್ಲಿ ಮತ್ತೊಂದು ದುರಂತ; ತೀವ್ರ ಸ್ಫೋಟಕ್ಕೆ ಐವರು ಸ್ಥಳದಲ್ಲೇ ಸಾವು

ಭಯೋತ್ಪಾದನೆ, ಶಸ್ತ್ರಾಸ್ತ್ರಗಳ ಪರೀಕ್ಷೆ
ಯುರೋಪ್ ರಾಷ್ಟ್ರಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಜೊತೆಗೆ ಯುದ್ಧಗಳು ಸಂಭವಿಸುವ ಆತಂಕ ವ್ಯಕ್ತಪಡಿಸಿದ್ದರು. ಇಂದು ಇಸ್ರೇಲ್-ಹಮಾಸ್ ಸಂಘರ್ಷ ಮತ್ತು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ದೊಡ್ಡ ಸಮಸ್ಯೆಯಾಗಿದೆ.

ವೈದ್ಯಕೀಯ ಬೆಳವಣಿಗೆ
ಬಾಬಾ ವಂಗಾ, 2024ರಲ್ಲಿ ವೈದ್ಯಕೀಯ ಬೆಳವಣಿಗೆ ಕೂಡ ನಡೆಯುತ್ತದೆ ಎಂದಿದ್ದರು. ಅದರಂತೆ ಆಲ್ಝೈಮರ್ (Alzheimer) ಮತ್ತು ಕ್ಯಾನ್ಸರ್ ಸೇರಿದಂತೆ ಗುಣಪಡಿಸಲಾಗದ ಕೆಲವು ಕಾಯಿಲೆಗಳ ಔಷಧಿ ಸಂಶೋಧನೆಯಲ್ಲಿ ಪ್ರಗತಿ ಸಿಕ್ಕಿದೆ. ಶ್ವಾಸಕೋಶದ ಕ್ಯಾನ್ಸರ್ ಲಸಿಕೆ ಅಭಿವೃದ್ಧಿಯಲ್ಲಿ ಪ್ರಗತಿ ಕಂಡಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ. ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ ವಿವಿ ತಿಳಿಸಿರುವಂತೆ DNA ಆಧಾರಿತ ಶ್ವಾಸಕೋಶದ ಕ್ಯಾನ್ಸರ್ ಲಸಿಕೆಗೆ ಔಷಧಿ ಕಂಡು ಹಿಡಿಯಲಾಗಿದೆ. ಅದಕ್ಕಾಗಿ 3000 ಡೋಸ್‌ಗಳನ್ನು ಅಭಿವೃದ್ಧಿ ಪಡಿಸಲು ಹಣ ಮೀಸಲಿಡಲಾಗಿದೆ. ಕ್ಯಾನ್ಸರ್ ಲಸಿಕೆ ಅಭಿವೃದ್ಧಿ ಹಂತದಲ್ಲಿದೆ ಎಂದು ರಷ್ಯಾ ಹೇಳಿಕೊಂಡಿದೆ.

publive-image

ಇದನ್ನೂ ಓದಿ:RCB ಹುಡುಗರ ಅತೀ ದೊಡ್ಡ ದಾಖಲೆ ಧೂಳಿಪಟ ಮಾಡಿದ ಕೆಕೆಆರ್​; ಏನದು..?

ಪ್ರಪಂಚದ ಅಂತ್ಯದ ಬಗ್ಗೆಯೂ ವಂಗಾ ಭವಿಷ್ಯ ನುಡಿದಿದ್ದಾರೆ. ಅವರ ಭವಿಷ್ಯವಾಣಿ ಪ್ರಕಾರ 5079ರಲ್ಲಿ ಜಗತ್ತು ಕೊನೆಗೊಳ್ಳುತ್ತದೆ ಎಂದಿದ್ದಾರೆ. ಅಂದು ವಂಗಾ ಹೇಳಿದ್ದ ಮಾತುಗಳು ನಿಜವಾಗುತ್ತಿರುವುದರಿಂದ ವಿಶ್ವದ ಗಮನ ಸೆಳೆದಿದೆ. ಈ ಹಿಂದೆ ಬರಾಕ್‌ ಒಬಾಮಾ, ಡೊನಾಲ್ಡ್‌ ಟ್ರಂಪ್ ಅಧ್ಯಕ್ಷಗಿರಿ, 9/11 ದಾಳಿಗಳು, ರಾಜಕುಮಾರಿ ಡಯಾನಾ ಮರಣ, ಚೆರ್ನೋಬಿಲ್ ದುರಂತ, ಬ್ರೆಕ್ಸಿಟ್‌ ಫಲಿತಾಂಶದ ಬಗ್ಗೆ ನಿಖರವಾಗಿ ಹೇಳಿದ್ದರು.

ವಿಶೇಷ ವರದಿ: ಗಣೇಶ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment