/newsfirstlive-kannada/media/post_attachments/wp-content/uploads/2023/10/Babar-Azam-1.jpg)
ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ ಟ್ರೋಫಿಗೆ ಇನ್ನೇನು ಮೂರು ತಿಂಗಳು ಬಾಕಿ ಇದೆ. ಮುಂದಿನ ವರ್ಷ ಫೆಬ್ರವರಿ 19ನೇ ತಾರೀಕಿನಿಂದ ಮಾರ್ಚ್ 9 ರವರೆಗೂ ನಡೆಯಲಿರೋ ಮಹತ್ವದ ಚಾಂಪಿಯನ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸಲಿದೆ. ಇದರ ಮಧ್ಯೆ ಪಾಕ್ ಕ್ರಿಕೆಟ್ ಮಂಡಳಿ ಬಗ್ಗೆ ಒಂದು ಶಾಕಿಂಗ್ ಮಾಹಿತಿ ಹೊರಬಿದ್ದಿದೆ.
ಕಳೆದ ತಿಂಗಳಿನಿಂದ ಪಾಕಿಸ್ತಾನ ಕ್ರಿಕೆಟಿಗರಿಗೆ ಪಿಸಿಬಿ ಸಂಬಳ ನೀಡಿಲ್ಲ ಎಂದು ವರದಿಯಾಗಿದೆ. ಇದು 2025ರ ಐಸಿಸಿ ಚಾಂಪಿಯನ್ ಟ್ರೋಫಿ ಟೂರ್ನಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ತಂಡದ ಆಟಗಾರರಿಗೆ ಸಂಬಳ ನೀಡದ ಪಾಕ್ ಕ್ರಿಕೆಟ್ ಮಂಡಳಿ ಚಾಂಪಿಯನ್ ಟ್ರೋಫಿಗೆ ಹಣಕಾಸು ವ್ಯವಸ್ಥೆ ಹೇಗೆ ಮಾಡಲಿದೆ ಎಂಬುದು ಸದ್ಯಕ್ಕಿರೋ ಪ್ರಶ್ನೆ.
ಎಷ್ಟು ದಿನದ ಸಂಬಳ ನೀಡಬೇಕು?
ಪಾಕಿಸ್ತಾನ ಆಟಗಾರರಿಗೆ ಜುಲೈನಿಂದ ಅಕ್ಟೋಬರ್ 2024 ರವರೆಗೆ ಪಿಸಿಬಿ ಸಂಬಳ ನೀಡಿಲ್ಲ. ಇದರ ಪರಿಣಾಮ ಶಾಹೀನ್ ಆಫ್ರಿದಿ, ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಮ್ ರೀತಿಯ ಸ್ಟಾರ್ ಆಟಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿಯೇ ಪಾಕ್ ತಂಡದ ನಾಯಕತ್ವಕ್ಕೆ ಬಾಬರ್ ಅಜಂ ರಾಜೀನಾಮೆ ನೀಡಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ.
ಪಿಸಿಬಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದೇ ಕಾರಣಕ್ಕೆ ಆಟಗಾರಿಗೆ ಸಂಬಳವನ್ನು ನೀಡಲು ಸಾಧ್ಯವಾಗಿಲ್ಲ. ಆಟಗಾರರ ಜರ್ಸಿಯಲ್ಲಿ ಪ್ರಾಯೋಜಕತ್ವದ ಲೋಗೋಗೆ ಸಂಬಂಧಿಸಿದ ಬಾಕಿ ಮೊತ್ತವನ್ನೂ ಪಾವತಿಸಿಲ್ಲ. ಈ ಪರಿಸ್ಥಿತಿ ಪಿಸಿಬಿ ದಿವಾಳಿಯಾಗಿರುವುದನ್ನು ಬೊಟ್ಟು ಮಾಡಿ ತೋರಿಸುತ್ತಿದೆ.
ಇದನ್ನೂ ಓದಿ: ಬಾಂಗ್ಲಾ ವಿರುದ್ಧ T20 ಸರಣಿ; ಟೀಮ್ ಇಂಡಿಯಾಗೆ ಸಿಕ್ಕೇಬಿಟ್ರು ಜೂನಿಯರ್ ಬುಮ್ರಾ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ