/newsfirstlive-kannada/media/post_attachments/wp-content/uploads/2024/12/BABY_AB.jpg)
2025ರ ಐಪಿಎಲ್ ಟ್ರೋಫಿ ಆರಂಭಕ್ಕೆ ಇನ್ನೇನು ಕೆಲವೇ ಕೆಲವು ತಿಂಗಳು ಬಾಕಿ ಉಳಿದಿದ್ದು ಫ್ರಾಂಚೈಸಿಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಮೆಗಾ ಆಕ್ಷನ್ನಲ್ಲಿ ಈಗಾಗಲೇ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು ಟೂರ್ನಿ ಆರಂಭಕ್ಕಾಗಿ ಫ್ರಾಂಚೈಸಿಗಳು ಕಾದು ಕುಳಿತಿವೆ. ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮೊತ್ತೊಂದು ಬದಲಾವಣೆ ಆಗಿದ್ದು ಟೀಮ್ಗೆ ಜೂನಿಯರ್ ಎಬಿ ಡಿವಿಲಿಯರ್ಸ್ ಬರುತ್ತಿದ್ದಾರೆ ಎಂದು ಹೇಳಲಾಗಿದೆ.
ಬೆಂಗಳೂರು ಫ್ರಾಂಚೈಸಿ ಖರೀದಿ ಮಾಡಿರುವ ಸೌತ್ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ, ಇಂಜುರಿಗೆ ಒಳಗಾದ ಕಾರಣ 2025ರ ಐಪಿಎಲ್ ಟೂರ್ನಿಯಲ್ಲಿ ಅವರು ಆಡುತ್ತಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಲುಂಗಿ ಎನ್‌ಗಿಡಿ ಬದಲಿಗೆ ಬೇಬಿ ಎಬಿರನ್ನು ಆರ್ಸಿಬಿ ತಂಡದಲ್ಲಿ ಆಡಿಸುವ ನಿರೀಕ್ಷೆ ಇದೆ. ಸದ್ಯ ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗುತ್ತಿದೆ.
ಇದನ್ನೂ ಓದಿ:ಕ್ಯಾಪ್ಟನ್ ರೋಹಿತ್ ಇಲ್ಲದಿದ್ದಾಗ ಭಾರೀ ಅವಮಾನ.. R ಅಶ್ವಿನ್ಗೆ ಹೀಗೆ ಮಾಡಬಹುದಿತ್ತಾ?
ಒಂದು ಸಮಯದಲ್ಲಿ ಎಬಿ ಡಿ ವಿಲಿಯರ್ಸ್ ಆರ್ಸಿಬಿ ತಂಡದಲ್ಲಿ ಬಿಗ್ ಸನ್ಷೆಷನ್ ಮೂಡಿಸಿದ ಬ್ರಿಲಿಯಂಟ್ ಬ್ಯಾಟ್ಸ್ಮನ್. ಚಿತ್ರ ವಿಚಿತ್ರ ಶಾಟ್ಗಳನ್ನು ಬಾರಿಸುತ್ತಿದ್ದ ವಿಲಿಯರ್ಸ್ ತನ್ನ ಬ್ಯಾಟಿಂಗ್ನಿಂದಲೇ ಕನ್ನಡಿಗರ ಮನ ಗೆದ್ದಿದ್ದರು. ಕ್ರಿಕೆಟ್ಗೆ ಡಿ ವಿಲಿಯರ್ಸ್ ವಿದಾಯ ಹೇಳಿದ ಮೇಲೆ ಅವರಂತೆ ಸೇಮ್ ಟು ಸೇಮ್ ಆಡುವಂತ ಯಂಗ್ ಪ್ಲೇಯರ್ ಆಫ್ರಿಕಾ ತಂಡದಲ್ಲಿ ಇದ್ದಾರೆ. ಆ ಯಂಗ್ ಪ್ಲೇಯರ್ ಅನ್ನು ಬೇಬಿ ಎಬಿ ಎಂದು ಕರೆಯಲಾಗುತ್ತಿದೆ.
ಬೇಬಿ ಎಬಿ ನಿಜವಾದ ಹೆಸರು ಡೆವಾಲ್ಡ್ ಬ್ರೆವಿಸ್ ಆಗಿದೆ. ಆದರೆ ಇವರು ಆಡುವ ಶೈಲಿ ಎಲ್ಲ ಡಿವಿಲಿಯರ್ಸ್ ಮಾದರಿ ಇರುವುದರಿಂದ ಎಲ್ಲರೂ ಬ್ರೆವಿಸ್ನ್ನ ಬೇಬಿ ಎಬಿ ಎಂದು ಕರೆಯಲಾಗುತ್ತಿದೆ. ಅಲ್ಲದೇ ಡಿ ವಿಲಿಯರ್ಸ್ ಗರಡಿಯಲ್ಲಿ ಬೆಳೆದ ಯುವ ಆಟಗಾರನಾಗಿದ್ದು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ನಲ್ಲಿ ಎಲ್ಲ ಚಾಣಕ್ಷತೆಗಳನ್ನು ಹೇಳಿಕೊಟ್ಟಿದ್ದಾರೆ. ಸದ್ಯ ಡಿ ವಿಲಿಯರ್ಸ್ ಶಿಷ್ಯ ಆರ್ಸಿಬಿ ಬರುತ್ತಿರುವುದು ಫ್ಯಾನ್ಸ್ಗೆ ಸಂತಸ ತಂದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ