newsfirstkannada.com

ರಾತ್ರಿ ಅಂತ್ಯಸಂಸ್ಕಾರ ಮಾಡಿದ್ದ ಮಗುವಿನ ಮೃತದೇಹ.. ಬೆಳಗ್ಗೆ ಉಯ್ಯಾಲೆಯಲ್ಲಿ ಪ್ರತ್ಯಕ್ಷ..! ಗಾಬರಿಬಿದ್ದ ಜನ

Share :

Published July 1, 2024 at 2:24pm

  ಸಂಜೆ ಸಾವನ್ನಪ್ಪಿದ್ದ ಮಗುವಿನ ಮೃತದೇಹ ತಡರಾತ್ರಿ ಅಂತ್ಯಸಂಸ್ಕಾರ

  ಹಲವು ಅನುಮಾನಗಳು, ಮಗುವಿನ ಸಾವಿಗೆ ಕಾರಣವೇನು..?

  ಒಂದೂವರೆ ವರ್ಷದ ಮಗುವಿನ ದೇಹ ಜೋಕಾಲಿಯಲ್ಲಿ ಪತ್ತೆ

ಬೀದರ್: ರಾತ್ರಿ ಅಂತ್ಯಸಂಸ್ಕಾರ ಮಾಡಿದ್ದ ಒಂದೂವರೆ ವರ್ಷದ ಮಗುವಿನ ಮೃತದೇಹ ಬೆಳಗ್ಗೆ ಎನ್ನುವಷ್ಟರಲ್ಲಿ ಉಯ್ಯಾಲೆಯಲ್ಲಿ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು, ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ನಟ ದರ್ಶನ್ ತಾಯಿ ಮೀನಾ, ಸಹೋದರ ದಿನಕರ ಜೈಲಿಗೆ ಭೇಟಿ.. ಮಗನ ಸಂಕಟ ನೋಡಿ ಅಮ್ಮ ಭಾವುಕ..

ಮಂಠಾಳ ಗ್ರಾಮದ ನಿವಾಸಿ ಅಂಬಯ್ಯಸ್ವಾಮಿ ಎಂಬುವವರ ಒಂದೂವರೆ ವರ್ಷದ ದೀಪ್ತಿ ಅನಾರೋಗ್ಯದಿಂದ ಜೂನ್ 29ರ ಸಂಜೆ ಸಾವನ್ನಪ್ಪಿದ್ದಳು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ತಡರಾತ್ರಿ ಮಗುವಿನ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಿದ್ದರು. ಆದರೆ ಮರುದಿನ ಅಂದರೆ ಜೂನ್ 30ರ ಬೆಳಗ್ಗೆ ಮರಕ್ಕೆ ಕಟ್ಟಿದ್ದ ಉಯ್ಯಾಲೆ (ಜೋಕಾಲಿ) ಯಲ್ಲಿ ಮಗುವಿನ ಮೃತದೇಹ ಪ್ರತ್ಯಕ್ಷವಾಗಿದೆ. ಇದರಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: RCB ಫ್ಯಾನ್ಸ್​ಗೆ ಗುಡ್​ನ್ಯೂಸ್​.. ಬೆಂಗಳೂರು ಫ್ರಾಂಚೈಸಿಯಿಂದ ಕಾರ್ತಿಕ್​​ಗೆ ಮಹತ್ವದ ಜವಾಬ್ದಾರಿ, ಏನದು?

ಮಗುವಿನ ಮೃತದೇಹವನ್ನು ಕುಟುಂಬಸ್ಥರು ಜೂನ್ 30 ರಂದು ಮತ್ತೆ ಅಂತ್ಯಸಂಸ್ಕಾರ ಮಾಡಿದ್ದಾರೆ. ಮಗುವಿನ ಕಾಲುಗಳಲ್ಲಿದ್ದ ಚೈನ್​​ಗಳ ಆಸೆಗಾಗಿ ಮೃತದೇಹವನ್ನು ಹೊರ ತೆಗೆದಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರಾತ್ರಿ ಅಂತ್ಯಸಂಸ್ಕಾರ ಮಾಡಿದ್ದ ಮಗುವಿನ ಮೃತದೇಹ.. ಬೆಳಗ್ಗೆ ಉಯ್ಯಾಲೆಯಲ್ಲಿ ಪ್ರತ್ಯಕ್ಷ..! ಗಾಬರಿಬಿದ್ದ ಜನ

https://newsfirstlive.com/wp-content/uploads/2024/07/BDR_BABY_DIE.jpg

Load More