newsfirstkannada.com

35 ವರ್ಷಗಳ ಬಳಿಕ ಕಾಣಿಸಿಕೊಂಡ ಬೇಬಿ ಇಂದಿರಾ; ಬಾಲನಟಿ ಬಾಳಲ್ಲಿ ಆಗಿದ್ದೇನು? ಈಗ ಎಲ್ಲಿದ್ದಾರೆ?

Share :

Published April 10, 2024 at 5:42pm

Update April 10, 2024 at 5:44pm

    ಪುಟಾಣಿ ಏಜೆಂಟ್ 123, ಸಿಂಹದ ಮರಿ ಸೈನ್ಯ, ರಾಮ ಲಕ್ಷ್ಮಣದ ನಟಿ

    ಕನ್ನಡ, ತಮಿಳು, ತೆಲುಗು, ಮಲಯಾಳಂನ 100 ಸಿನಿಮಾಗಳಲ್ಲಿ ಅಭಿನಯ

    ಕನ್ನಡಿಗರಿಗೆ ಸಹಸ್ರ ಕೋಟಿ ಅನಂತ ಧನ್ಯವಾದಗಳು ತಿಳಿಸಿದ ಬೇಬಿ ಇಂದಿರಾ

ಪುಟಾಣಿ ಏಜೆಂಟ್ 123, ಸಿಂಹದ ಮರಿ ಸೈನ್ಯ, ರಾಮ ಲಕ್ಷ್ಮಣ ಸಿನಿಮಾ ನೋಡಿದವರಿಗೆ ಬೇಬಿ ಇಂದಿರಾರನ್ನು ಮರೆಯಲು ಸಾಧ್ಯವೇ ಇಲ್ಲ. 1980ರ ದಶಕದಲ್ಲಿ ಬಾಲನಟಿಯಾಗಿ ಬೇಬಿ ಇಂದಿರಾ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಬೇಬಿ ಇಂದಿರಾ ಅಭಿನಯದ ಸಿನಿಮಾ ಅಂದ್ರೆ ಮಕ್ಕಳಿಗೆ ಅಚ್ಚುಮೆಚ್ಚಾಗಿತ್ತು. ಪುಟ್ಟ ವಯಸ್ಸಿನಲ್ಲೇ ಬೇಬಿ ಇಂದಿರಾ ಅಷ್ಟು ಅದ್ಭುತವಾಗಿ ಅಭಿನಯ ಮಾಡಿದ್ದರು.

ಬಾಲನಟಿಯಾಗಿ ಗಮನ ಸೆಳೆದಿದ್ದ ಬೇಬಿ ಇಂದಿರಾ ನಾಯಕ ನಟಿಯಾಗಿ ಹೆಚ್ಚು ಹೆಸರು ಮಾಡಲಿಲ್ಲ. ಆದರೆ, ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇಂದಿರಾ ನಟಿಸಿದ್ದಾರೆ. ಇತ್ತೀಚೆಗೆ ಬೇಬಿ ಇಂದಿರಾ ಅವರ ಬಾಳಲ್ಲಿ ಸಾಕಷ್ಟು ಕಹಿ ಘಟನೆಗಳು ನಡೆದಿದ್ದು, ಅವರು ಎಲ್ಲಿದ್ದಾರೆ. ಹೇಗಿದ್ದಾರೆ ಅನ್ನೋ ವಿಷಯ ಯಾರಿಗೂ ಗೊತ್ತಿರಲಿಲ್ಲ.

ಬೇಬಿ ಇಂದಿರಾ ಅವರು ಬರೋಬ್ಬರಿ 35 ವರ್ಷಗಳ ಬಳಿಕ ಮತ್ತೆ ಕನ್ನಡಿಗರ ಮುಂದೆ ಬಂದಿದ್ದಾರೆ. ಕನ್ನಡ ಸಿನಿಮಾ ಅಭಿಮಾನಿಗಳು ಕೊಟ್ಟ ಪ್ರೋತ್ಸಾಹ, ಬೆಂಬಲವನ್ನು ನೆನೆದು ಭಾವುಕರಾಗಿ ಮಾತನಾಡಿದ್ದಾರೆ. ರಘುರಾಮ್ ಅನ್ನೋ ಯೂಟ್ಯೂಬ್ ಚಾನೆಲ್‌ಗೆ ಬೇಬಿ ಇಂದಿರಾ ಅವರು ಅಪರೂಪದ ಸಂದರ್ಶನವನ್ನು ನೀಡಿದ್ದಾರೆ. ಅದರಲ್ಲಿ ಬೇಬಿ ಇಂದಿರಾ ಅವರು ಮುಕ್ತವಾಗಿ ತಮ್ಮ ಬದುಕಿನ ಪಯಣದ ಸಾಕಷ್ಟು ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: ಪಿಯುಸಿ ಪರೀಕ್ಷೆಯಲ್ಲಿ ಅಮ್ಮ-ಮಗಳ ಸಾಧನೆ; ಮಗಳು ಡಿಸ್ಟಿಂಕ್ಷನ್, ತಾಯಿಗೆ ಬಂದ ಮಾರ್ಕ್ಸ್‌ ಎಷ್ಟು?

ಕನ್ನಡದಲ್ಲೇ ಮಾತನಾಡುತ್ತಾ ವಿಶೇಷ ಸಂದರ್ಶನ ನೀಡಿರುವ ಬೇಬಿ ಇಂದಿರಾ ಅವರು ನನ್ನ ಪ್ರೀತಿಸೋ ಅಭಿಮಾನಿಗಳಿಗೆ ಏನು ಹೇಳಬಲ್ಲೆ ಎನ್ನುತ್ತಾ ಕನ್ನಡ ಚಿತ್ರರಂಗದ ಕಲಾಭಿಮಾನಿಗಳಿಗೂ ಹೃದಯ ತುಂಬಿದ ನಮಸ್ಕಾರ ಹೇಳಿದ್ದಾರೆ. ಬೇಬಿ ಇಂದಿರಾ ಅವರು ಇಲ್ಲಿವರೆಗೂ ಯಾರಿಗೂ ಸಂದರ್ಶನ ಕೊಟ್ಟಿರಲಿಲ್ಲ. ಚಿತ್ರರಂಗ ಬಿಟ್ಟು 35 ವರ್ಷಗಳಾದ ಬಳಿಕ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಬೇಬಿ ಇಂದಿರಾ ಅವರು ಸದ್ಯ ತಮಿಳುನಾಡಿನ ಚೆನ್ನೈನಲ್ಲಿ ವಾಸವಿದ್ದಾರೆ. ತಮ್ಮ ಚಿತ್ರರಂಗದ ಸಾಕಷ್ಟು ಅನುಭವಗಳ ಬಗ್ಗೆ ಮೆಲುಕು ಹಾಕಿರುವ ಬೇಬಿ ಇಂದಿರಾ ಅವರು ನಿಮ್ಮ ಪ್ರೀತಿಯ ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ. ದೇವರು ನನಗೆ ಒಳ್ಳೆಯ ಮಕ್ಕಳನ್ನು ಕೊಟ್ಟಿದ್ದಾರೆ. ನಾನೀಗ ಮಕ್ಕಳ ಜೊತೆ ಸಂತೋಷವಾಗಿ ಇದ್ದೇನೆ ಎಂದು ಕನ್ನಡಿಗರಿಗೆ ಸಹಸ್ರ ಕೋಟಿ ಅನಂತ ಧನ್ಯವಾದಗಳು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

35 ವರ್ಷಗಳ ಬಳಿಕ ಕಾಣಿಸಿಕೊಂಡ ಬೇಬಿ ಇಂದಿರಾ; ಬಾಲನಟಿ ಬಾಳಲ್ಲಿ ಆಗಿದ್ದೇನು? ಈಗ ಎಲ್ಲಿದ್ದಾರೆ?

https://newsfirstlive.com/wp-content/uploads/2024/04/Baby-Indira-Kannada-Actress.jpg

Load More