/newsfirstlive-kannada/media/post_attachments/wp-content/uploads/2025/07/baby-theft-arrest.jpg)
ರಾಯಚೂರು: ಸೀರೆ ಉಟ್ಟು ಶಿಶುಗಳನ್ನು ಕಿಡ್ನಾಪ್ಗೆ ಯತ್ನಿಸಿದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿ ನಿದ್ರೆಯಲ್ಲಿದ್ದಾಗ ಶಿಶುಗಳನ್ನು ಹೊತ್ತೊಯ್ಯುವ ಖತರ್ನಾಕ್ ಗ್ಯಾಂಗ್ ಪ್ರತ್ಯಕ್ಷವಾಗಿದೆ.
ಇದನ್ನೂ ಓದಿ: ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ಅಮಿತ್ ಶಾ -ಮುಂದೆ ಏನು ಮಾಡ್ತಾರಂತೆ ಗೊತ್ತಾ..?
ನಗರದಲ್ಲಿನ ರಿಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ತಾಯಿ ನಿದ್ರೆಗೆ ಜಾರಿರುವ ವೇಳೆ ಬಂದು ಶಿಶುಗಳನ್ನು ಕದಿಯಲು ಯತ್ನಿಸಿದ್ದ. ಹೀಗಾಗಿ ಅನುಮಾನ ಬಂದ ಕೂಡಲೇ ಜನರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಖತರ್ನಾಕ್ ಶಿಶುಗಳ ಕಳ್ಳ ಸೀರೆಯನ್ನು ತೊಟ್ಟುಕೊಂಡು ಅಪಹರಿಸಲು ರಿಮ್ಸ್ ಆಸ್ಪತ್ರೆಯ ಬಾಣಂತಿಯರ ವಾರ್ಡ್ಗೆ ನುಗ್ಗಿದ್ದ. ಮಹಿಳೆಯಂತೆ ಸಿದ್ಧವಾಗಿ ಬಂದಿದ್ದ ಕಳ್ಳನನ್ನು ಜನರು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೇ ರಿಮ್ಸ್ ಆಡಳಿತ ಮಂಡಳಿ ಮತ್ತು ಗೃಹ ರಕ್ಷಕ ಸಿಬ್ಬಂದಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ಜನರ ತಂಡ ಶಿಶುಗಳನ್ನು ಕಳ್ಳತನ ಮಾಡಲು ಬಂದಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್ ಆತನನ್ನು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ