/newsfirstlive-kannada/media/post_attachments/wp-content/uploads/2025/06/huli-karthi8k.jpg)
ಕನ್ನಡ ಕಿರುತೆರೆಯಲ್ಲಿ ಅದ್ಭುತವಾಗಿ ಮೂಡಿ ಬಂದಿತ್ತು ಗಿಚ್ಚಿ ಗಿಲಿಗಿಲಿ ಶೋ. ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದ ಹುಲಿ ಕಾರ್ತಿಕ್​ ಗಿಚ್ಚಿ ಗಿಲಿಗಿಲಿ ಸೀಸನ್ 3 ವಿನ್ನರ್ ಆಗಿ ಹೊರ ಹೊಮ್ಮಿದ್ದರು.
ಇದನ್ನೂ ಓದಿ: ಟಾಪ್​ 6ರಲ್ಲಿ ಯಾರ ಕೈಗೆ ಸೇರಲಿದೆ Sa Re Ga Ma Pa ಟ್ರೋಫಿ.. ವೀಕ್ಷಕರ ಚಿತ್ತ ಯಾರತ್ತ?
/newsfirstlive-kannada/media/post_attachments/wp-content/uploads/2025/06/huli-karthi8k1.jpg)
ಕಲರ್ಸ್ ಸೂಪರ್​ನಲ್ಲಿ ಮೂಡಿ ಬರುತ್ತಿದ್ದ ಮಜಾ ಭಾರತ, ಬಳಿಕ ಗಿಚ್ಚಿ ಗಿಲಿಗಿಲಿ ಶೋ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದರು. ಬರೋಬ್ಬರಿ 8 ವರ್ಷದ ಬಳಿಕ ಹುಲಿ ಕಾರ್ತಿಕ್​ ವಿನ್ನರ್​ ಪಟ್ಟ ಗಿಟ್ಟಿಸಿಕೊಂಡಿದ್ದರು. ಸದ್ಯ ಹುಲಿ ಕಾರ್ತಿಕ್​ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್​ಗೆ ಎಂಟ್ರಿ ಕೊಟ್ಟು ಕಮಾಲ್​ ಮಾಡುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/06/huli-karthi8k2.jpg)
View this post on Instagram
ಇನ್ನೂ, ಭಾನುವಾರದ ಎಪಿಸೋಡ್​ನಲ್ಲಿ ವೇದಿಕೆ ಮೇಲೆ ಹುಲಿ ಕಾರ್ತಿಕ್​ಗೆ ಭರ್ಜರಿ ಬ್ಯಾಚುಲರ್ಸ್​ ತಂಡ ಮರೆಯಲಾರದ ಗಿಫ್ಟ್​ವೊಂದನ್ನು ಕೊಟ್ಟಿದ್ದಾರೆ. ಅದೇ ಉಡುಗೊರೆ ಕಂಡ ಹುಲಿ ಭಾವುಕರಾಗಿದ್ದಾರೆ. ಅಷ್ಟಕ್ಕೂ ಅದರಲ್ಲಿ ಇದ್ದಿದ್ದು ಬೇರೆ ಏನು ಅಲ್ಲ. ಹುಲಿ ಕಾರ್ತಿಕ್​ ಅವರ ತಾಯಿಯ ಕೈ ಹಾಗೂ ಪಾದಗಳ ಕ್ಯಾಸ್ಟಿಂಗ್ ಅನ್ನು ಕೆತ್ತರೋದನ್ನು ಗಿಫ್ಟ್​ ಆಗಿ ನೀಡಲಾಗಿದೆ. ವಿಶೇಷ ಎಂದರೆ ಸ್ಯಾಂಡಲ್​ವುಡ್​ ಹಿರಿಯ ನಟಿ ಸುಧಾರಾಣಿ ಅವರು ಹುಲಿ ಕಾರ್ತಿಕ್​ ಅವರ ತಾಯಿಯು ಕೈ ಹಾಗೂ ಪಾದ ಕೆತ್ತಿದ ಫ್ರೇಮ್​ ಅನ್ನು ನೀಡಿದ್ದಾರೆ. ಹುಲಿ ಕಾರ್ತಿಕ್​ ಅವರಿಗೆ ತನ್ನ ತಾಯಿ ಎಂದರೆ ಇಷ್ಟ ಅಂತ ಎಲ್ಲರಿಗೂ ಗೊತ್ತಿದೆ. ತಾನು ಜೀವನ ಮಾಡುತ್ತಿರುವುದೇ ಆ ಹೆತ್ತ ತಾಯಿಗಾಗಿ ಅಂತ ಸಾಕಷ್ಟು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us