newsfirstkannada.com

BREAKING: ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಭಾರೀ ಹಿನ್ನಡೆ

Share :

Published June 4, 2024 at 9:57am

    ಇಡೀ ದೇಶದ ಕಣ್ಣು ಬಿದ್ದಿರೋದು ಈಗ ವಾರಣಾಸಿ ಕ್ಷೇತ್ರದ ಮೇಲೆ

    ಸತತ 3ನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ

    2019ರಲ್ಲಿ 4 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಮೋದಿಗೆ ಹಿನ್ನಡೆ

ಲೋಕಸಭಾ ಚುನಾವಣೆಯ ಫಲಿತಾಂಶ ರಣರೋಚಕವಾಗಿದೆ. ದೇಶಾದ್ಯಂತ ಮತಎಣಿಕೆ ಬಿರುಸಿನಿಂದ ನಡೆಯುತ್ತಾ ಇದ್ದು, ಯಾರ್ ಗೆಲ್ತಾರೆ? ಯಾರ್ ಸೋಲ್ತಾರೆ ಅನ್ನೋ ಕುತೂಹಲ ಮುಗಿಲು ಮುಟ್ಟಿದೆ.

543 ಲೋಕಸಭಾ ಕ್ಷೇತ್ರದಲ್ಲಿ ಇಡೀ ದೇಶದ ಕಣ್ಣು ಬಿದ್ದಿರೋದು ವಾರಣಾಸಿ ಲೋಕಸಭಾ ಕ್ಷೇತ್ರದ ಮೇಲೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸಿರುವ ವಾರಣಾಸಿ ಲೋಕಸಭಾ ಕ್ಷೇತ್ರದ ಫಲಿತಾಂಶ ಭಾರೀ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಮೋದಿಗೆ ಬಿಗ್​ ಶಾಕ್​​.. ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆ; ಕಾಂಗ್ರೆಸ್​​-ಎಸ್​​ಪಿಗೆ ಭಾರೀ ಮುನ್ನಡೆ! 

ಉತ್ತರಪ್ರದೇಶದಲ್ಲಿ ಸದ್ಯ ಎನ್‌ಡಿಎ, ಇಂಡಿಯಾ ಮೈತ್ರಿಕೂಟ ಅಭ್ಯರ್ಥಿಗಳ ಮಧ್ಯೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್‌ – 18629
ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ – 14540

ವಾರಣಾಸಿ ಲೋಕಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ಮೋದಿ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್‌ 4089 ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ 4 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ 5 ಲಕ್ಷ ಮತಗಳ ಅಂತರದಲ್ಲಿ ಮೋದಿ ಅವರನ್ನು ಗೆಲ್ಲಿಸಲು ಬಿಜೆಪಿ ನಾಯಕರು ಪಣತೊಟ್ಟಿದ್ದರು. 2014, 2019ರಲ್ಲಿ ಗೆದ್ದಿದ್ದ ಪ್ರಧಾನಿ ಮೋದಿ ಅವರು ಸತತ 3ನೇ ಬಾರಿ ಗೆಲ್ಲುವ ಉತ್ಸಾಹದಲ್ಲಿದ್ದರು. ಆದರೆ ವಾರಣಾಸಿಯಲ್ಲಿ ಸದ್ಯ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಭಾರೀ ಹಿನ್ನಡೆ

https://newsfirstlive.com/wp-content/uploads/2024/05/Modi-7.jpg

Load More