/newsfirstlive-kannada/media/post_attachments/wp-content/uploads/2025/05/Chinnaswamy-2.jpg)
ಮುಂದಿನ ಮೂರು ಗಂಟೆಗಳ ಕಾಲ ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್​ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈಗಾಗಲೇ ಸಿಲಿಕಾನ್ ಸಿಟಿಯಲ್ಲಿ ಗುಡು, ಗಾಳಿಯೊಂದಿಗೆ ಭಾರೀ ಮಳೆ ಆಗ್ತಿದೆ. ಇದರಿಂದ ಆರ್​ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯಕ್ಕೆ ಅಡ್ಡಿಯಾಗಿದೆ.
ಮಳೆಯಿಂದ ಟಾಸ್​ ಪ್ರಕ್ರಿಯೆ ವಿಳಂಬ ಆಗಲಿದೆ. ಮಳೆ ನಿಂತು 45 ನಿಮಿಷ ಕಳೆದ ನಂತರ ಪಂದ್ಯದ ಭವಿಷ್ಯ ನಿರ್ಧಾರ ಆಗಲಿದೆ. ಆದರೆ ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಮುಂದಿನ ಮೂರು ಗಂಟೆಗಳ ಕಾಲ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿ ಹಲವೆಡೆ ಮಳೆಯಾಗಲಿದೆ.
ಆರ್​​ಸಿಬಿ ಅಭಿಮಾನಿಗಳು ಕೆಕೆಆರ್​ ವಿರುದ್ಧ ಗೆಲುವು ನಿರೀಕ್ಷೆ ಮಾಡಿದ್ದರು. ಆ ಮೂಲಕ ಆರ್​ಸಿಬಿ ತವರಿನ ಅಂಗಳದಲ್ಲೇ ಪ್ಲೇ-ಆಫ್​​ಗೆ ಅಧಿಕೃತವಾಗಿ ಎಂಟ್ರಿ ನೀಡುವ ಕನಸು ಕಂಡಿದ್ದರು. ಜೊತೆಗೆ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿಗೆ ಅಭಿನಂದನೆ ಸಲ್ಲಿಸಲು ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಮೈದಾನಕ್ಕೆ ಬಂದಿದ್ದರು. ಇದೀಗ ಅವರೆಲ್ಲರಿಗೂ ನಿರಾಸೆ ಆಗಿದೆ.
ಇದನ್ನೂ ಓದಿ: ಪ್ಲೇ-ಆಫ್ ಕನಸಿಗೆ ಮಳೆರಾಯನ ಕಾಟ.. ಚಿನ್ನಸ್ವಾಮಿಯಲ್ಲಿ ಮಳೆ ಮಳೆ..! ಮ್ಯಾಚ್ ಕತೆ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us