ಹರ್ಷಿತ್ ರಾಣಾ, ಬುಮ್ರಾ ಬೆನ್ನಲ್ಲೇ ಟೀಂ ಇಂಡಿಯಾದಿಂದ ಮತ್ತೊಂದು ಕೆಟ್ಟ ಸುದ್ದಿ..!

author-image
Ganesh
Updated On
ಹರ್ಷಿತ್ ರಾಣಾ, ಬುಮ್ರಾ ಬೆನ್ನಲ್ಲೇ ಟೀಂ ಇಂಡಿಯಾದಿಂದ ಮತ್ತೊಂದು ಕೆಟ್ಟ ಸುದ್ದಿ..!
Advertisment
  • ಜುಲೈ 2 ರಂದು ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯ
  • ಟೀಂ ಇಂಡಿಯಾದ ಯುವ ಆಟಗಾರ ಆಡೋದು ಡೌಟ್
  • ಭುಜದ ಗಾಯಕ್ಕೆ ಒಳಗಾಗಿರುವ ಯುವ ಬ್ಯಾಟ್ಸ್​​ಮನ್

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಜುಲೈ 2 ರಿಂದ ಬರ್ಮಿಂಗ್​​ಹ್ಯಾಮ್​ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಇದೀಗ ಟೀಂ ಇಂಡಿಯಾ ಕ್ಯಾಂಪ್​ನಿಂದ ಆಘಾತಕಾರಿ ಸುದ್ದಿಯೊಂದು ಸಿಕ್ಕಿದೆ.

ವರದಿ ಪ್ರಕಾರ.. ಸಾಯಿ ಸುದರ್ಶನ್ ಗಾಯಗೊಂಡಿದ್ದಾರೆ! ಸುದರ್ಶನ್ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಆಡುವುದು ಕಷ್ಟಕರ ಎಂದು ಹೇಳಲಾಗುತ್ತಿದೆ. ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸುದರ್ಶನ್ ಭುಜದ ಗಾಯಕ್ಕೆ ಒಳಗಾಗಿದ್ದರು. ಪ್ರಸ್ತುತ ಸಾಯಿ ಸುದರ್ಶನ್ ಗಾಯದ ಬಗ್ಗೆ ಬಿಸಿಸಿಐನಿಂದ ಯಾವುದೇ ಮಾಹಿತಿ ಬಂದಿಲ್ಲ.

ಇದನ್ನೂ ಓದಿ: ನಾಯಕ ಮಾಡಿದ ತಪ್ಪುಗಳೇ ಹೊರೆಯಾದ್ವು.. ಪ್ಲಾನ್​-ಬಿ ಇಲ್ಲದೆ ಗಿಲ್ ಇದೆಂಥ ಯಡವಟ್ಟು..!

publive-image

ಸಾಯಿ ಸುದರ್ಶನ್ ಬದಲಿಗೆ ಯಾರು..?

ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದೊಂದಿಗೆ ಸಾಯಿ ಸುದರ್ಶನ್ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಆದಗ್ಯೂ ತಮ್ಮ ಚೊಚ್ಚಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 30 ರನ್‌ಗಳಿಸಿ ನಿರಾಸೆ ಮೂಡಿಸಿದರು. ಅವರು ಎರಡನೇ ಟೆಸ್ಟ್‌ ಆಡದಿದ್ದರೆ ಅವರ ಸ್ಥಾನದಲ್ಲಿ ಧ್ರುವ್ ಜುರೆಲ್ ಅಥವಾ ನಿತೀಶ್ ಕುಮಾರ್ ರೆಡ್ಡಿ ಪ್ಲೇಯಿಂಗ್-11ನಲ್ಲಿ ಸೇರಿಕೊಳ್ಳಬಹುದು. ಕರುಣ್ ನಾಯರ್ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಬರಬಹುದು.

ವೇಗದ ಬೌಲರ್ ಭಾರತಕ್ಕೆ ವಾಪಸ್

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತದ 18 ಸದಸ್ಯರ ತಂಡದಲ್ಲಿ ಯುವ ವೇಗಿ ಹರ್ಷಿತ್ ರಾಣಾರನ್ನು ಕೈಬಿಡಲಾಗಿದೆ. ಭಾರತ-ಎ ಪಂದ್ಯ ಮುಗಿದ ನಂತರ ಅವರಿಗೆ ಟೀಂ ಇಂಡಿಯಾ ಕ್ಯಾಂಪ್​​ಗೆ ಬರುವಂತೆ ಸೂಚಿಸಲಾಗಿತ್ತು. ಮೊದಲ ಟೆಸ್ಟ್ ಮುಗಿದ ಬೆನ್ನಲ್ಲೇ ಅವರನ್ನು ಅವರನ್ನು ತಂಡದಿಂದ ಕೈಬಿಡಲಾಗಿದೆ. ಮತ್ತೊಂದು ಕಡೆ, ಟೀಂ ಇಂಡಿಯಾದ ಬೌಲಿಂಗ್ ಶಕ್ತಿ ಜಸ್​ಪ್ರಿತ್ ಬುಮ್ರಾ ಕೂಡ ಎರಡನೇ ಟೆಸ್ಟ್​ನಲ್ಲಿ ಆಡ್ತಿಲ್ಲ.

ಇದನ್ನೂ ಓದಿ:ಟೀಂ ಇಂಡಿಯಾಗೆ ಆಘಾತ.. ಎರಡನೇ ಟೆಸ್ಟ್​ಗೆ ಕೈಕೊಟ್ಟ ಸ್ಟಾರ್​ ವೇಗಿ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment