/newsfirstlive-kannada/media/post_attachments/wp-content/uploads/2024/12/PV_SINDHU.jpg)
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರು ವೈವಾಹಿಕ ಜೀವನ ಕಾಲಿಡಲು ಸಜ್ಜಾಗಿದ್ದಾರೆ ಎಂದು ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಸದ್ಯ ಇದರ ಬೆನ್ನಲ್ಲೇ ಅಧಿಕೃತವಾಗಿ ನಿಶ್ಚಿತಾರ್ಥವನ್ನು ಅದ್ಧೂರಿಯಾಗಿ ಮಾಡಿಕೊಂಡಿದ್ದಾರೆ.
ಹೈದರಾಬಾದ್​ನ ಪಿ.ವಿ ಸಿಂಧು ಅವರು ಉದ್ಯಮಿ ಆಗಿರುವ ವೆಂಕಟ ದತ್ತ ಸಾಯಿ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಭಾರತದ ಅತ್ಯಂತ ಯಶಸ್ವಿ ಕ್ರೀಡಾಪಟುಗಳಲ್ಲಿ ಒಬ್ಬರಾದ ಸಿಂಧು ಸ್ಟಾರ್ ಬ್ಯಾಡ್ಮಿಂಟನ್ ಪ್ಲೇಯರ್ ಆಗಿದ್ದಾರೆ. ಹಲವಾರು ಪ್ರಶಸ್ತಿಗಳನ್ನು ಭಾರತಕ್ಕೆ ತಂದು ಕೊಟ್ಟು ದೇಶದ ಕೀರ್ತಿಯನ್ನು ಬೆಳಗಿಸಿದ್ದಾರೆ. 2024ರಲ್ಲಿ ಇತ್ತೀಚೆಗೆ ನಡೆದ ಏಷ್ಯಾ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು. ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 01 ಬಾರಿ ಬಂಗಾರದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಒಲಿಂಪಿಕ್ ಗೇಮ್ಸ್, ಏಷ್ಯನ್ ಗೇಮ್ಸ್​, ಕಾಮನ್‌ವೆಲ್ತ್ ಗೇಮ್ಸ್ ಸೇರಿದಂತೆ ಇನ್ನು ಕೆಲ ಗೇಮ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರು ಮದುವೆ ಆಗುತ್ತಿರುವ ವೆಂಕಟ ದತ್ತ ಸಾಯಿ ಅವರು ಸಕ್ಸಸ್​ಫುಲ್ ಉದ್ಯಮಿ. ಯಾವುದೇ ಕೆಲಸಕ್ಕೆ ಕೈ ಹಾಕಿದರು ಸೋಲು ಎನ್ನುವುದೇ ಇಲ್ಲ. ಇವರು ಕೂಡ ಮೂಲತಃ ಹೈದರಾಬಾದ್​ನವರು. ಉದ್ಯಮಿಯಾದ ವೆಂಕಟ ದತ್ತ ಸಾಯಿ, ಸದ್ಯ Posidex Technologies ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾರೆ. ಲಿಬರಲ್ ಸ್ಟಡೀಸ್​ನಲ್ಲಿ ಡಿಪ್ಲೊಮಾ ಪದವಿ ಪಡೆದುಕೊಂಡಿದ್ದಾರೆ. Flame Universityಯಲ್ಲಿ ಬಿಬಿಎ ಅಕೌಂಟಿಂಗ್ ಮತ್ತು ಫಿನಾನ್ಸ್​​ ಪದವಿ ಮುಗಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/12/PV-SINDHU.jpg)
ಇದನ್ನೂ ಓದಿ: 3ನೇ ಟೆಸ್ಟ್ ಮಳೆಯಿಂದ ರದ್ದು ಆದ್ರೆ ಟೀಮ್ ಇಂಡಿಯಾಕ್ಕೆ ಲಾಭ-ನಷ್ಟಗಳೇನು.. ಫೈನಲ್​ಗೆ ಭಾರತ ಏನು ಮಾಡಬೇಕು?
ಬೆಂಗಳೂರಿನ ಇಂಟರ್​ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಇನ್ಫಾರ್ಮೆಷನ್ ಟೆಕ್ನೊಲಜಿ ಸಂಸ್ಥೆಯಲ್ಲಿ ಸೈನ್ಸ್ ಅಂಡ್ ಮಷಿನ್ ಲರ್ನಿಂಗ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಅನುಭವಿ ಉದ್ಯಮಿ ಆಗಿರುವ ಇವರು ಹಣಕಾಸು, ಡೇಟಾ ವಿಜ್ಞಾನ ಮತ್ತು ಆಸ್ತಿ ನಿರ್ವಹಣೆ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದಾರೆ. ಸದ್ಯ ಇವರ ಜೊತೆ ಪಿವಿ ಸಿಂಧು ಅವರು ಹೊಸ ಇನ್ನಿಂಗ್ಸ್​ ಆರಂಭ ಮಾಡಲಿದ್ದಾರೆ. ಇನ್ನು ಈ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಪಿ.ವಿ ಸಿಂಧು ಅವರೇ ತಮ್ಮ ಅಧಿಕೃತ ಇನ್​ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನೇನು ಪಿವಿ ಸಿಂಧು ಹಾಗೂ ವೆಂಕಟ ದತ್ತ ಸಾಯಿ ಅವರ ಮನೆಗಳಲ್ಲಿ ಮದುವೆ ಕಳೆ ಮೂಡಿದೆ. ಎರಡು ಮನೆಯಲ್ಲಿ ಸಡಗರ, ಸಂಭ್ರಮ ಮನೆ ಮಾಡಿದ್ದು ಇನ್ನೇನು 10 ದಿನದಲ್ಲಿ ಇಬ್ಬರು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಅಂದರೆ ಡಿಸೆಂಬರ್ 20 ರಿಂದ ಇವರ ವಿವಾಹ ಕಾರ್ಯಕ್ರಮಗಳು ನಡೆಯಲಿವೆ. ಅದರಂತೆ ಡಿಸೆಂಬರ್ 24 ರಂದು ಸಂಪ್ರದಾಯದಂತೆ ರಾಜಸ್ಥಾನದ ‘ಲೇಕ್ ಸಿಟಿ’ಯಲ್ಲಿ ಭರ್ಜರಿಯಾಗಿ ಮದುವೆ ಕಾರ್ಯಕ್ರಮ ನಡೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us