/newsfirstlive-kannada/media/post_attachments/wp-content/uploads/2025/02/BADRINATH-TEMPLE.jpg)
ಬದ್ರಿನಾಥ್ ಮಂದಿರದ ವಿಶೇಷತೆ ಎಂದರೆ ಅದು ಆರು ತಿಂಗಳು ಭಕ್ತಾದಿಗಳಿಗೆ ದರ್ಶನ ನೀಡಿದರೆ. ಉಳಿದ ಆರು ತಿಂಗಳು ವಿಪರೀತ ಚಳಿಯ ಕಾರಣ ಹಾಗೂ ಕೆಲವು ಪೌರಾಣಿಕ ಹಿನ್ನೆಲೆಗಳ ಕಾರಣ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗಿರುತ್ತದೆ. ಕಳೆದ ದೀಪಾವಳಿ ಮುಗಿದ ಬಳಿಕ ಬದ್ರಿನಾಥ್ ಮಂದಿರದ ಬಾಗಿಲು ಮುಚ್ಚಿದ್ದು ಇನ್ನು ಕೆಲವೇ ದಿನಗಳಲ್ಲಿ ಭಕ್ತಾದಿಗಳ ದರ್ಶನಕ್ಕೆ ಬಾಗಿಲನ್ನು ತೆರಯಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.
ವಸಂತ ಪಂಚಮಿಯ ದಿನದಂದು ಹಿಂದು ಕ್ಯಾಲೆಂಡರ್ ಪ್ರಕಾರ ಮಂದಿರದ ಬಾಗಿಲು ತೆಗೆಯುವ ದಿನಾಂಕವನ್ನು ನಿಶ್ಚಯ ಮಾಡಲಾಗಿದೆ. ಮೇ 4, 2025ರಂದು ಬೆಳಗ್ಗೆ 6 ಗಂಟೆಗೆ ಬದ್ರಿನಾಥ್ ಮಂದಿರ ಭಕ್ತಾದಿಗಳ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಮಂದಿರದ ಆಡಳಿತ ಮಂಡಳಿ ಹೇಳಿದೆ. ನರೇಂದ್ರ ನಗರದ ರಾಯಲ್ ಕೋರ್ಟ್ನಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಈ ಒಂದು ದಿನಾಂಕವನ್ನು ನಿರ್ಧಾರ ಮಾಡಲಾಗಿದೆ. ಈ ವಿಶೇಷ ಪೂಜೆಯಲ್ಲಿ ಆಚಾರ್ಯ ಕೃಷ್ಣ ಪ್ರಸಾದ್ ಪ್ರಮುಖ ವಿಧಿ ವಿಧಾನಗಳ ಮೂಲಕ ಪೂಜೆಯನ್ನು ನೇರವೇರಿಸಿದರು.
ಇದನ್ನೂ ಓದಿ:ವಸಂತ ಪಂಚಮಿಯಂದು ಗಂಗೆಯಲ್ಲಿ ಮಿಂದೆದ್ದವರ ಸಂಖ್ಯೆ ಎಷ್ಟು ಲಕ್ಷ: ಹೇಗಿತ್ತು ಮಹಾಕುಂಭದ ಅಮೃತ ಸ್ನಾನ
ಈ ಪ್ರಮುಖ ಕಾರ್ಯಕ್ರಮದಲ್ಲಿ ತೆಹ್ರಿಯ ಮಾಜಿ ಮಹರಾಜ ಮನ್ವೆಂದರ್ ಶಾ ಮತ್ತು ಉಳಿದ ಧಾರ್ಮಿಕ ಮುಖಂಡರು ಸೇರಿಕೊಂಡಿದ್ದರು. ಬದ್ರನಾಥ್ ಮಂದಿರ ಚಾರ್ಧಾಮ್ಗಳಲ್ಲಿ ಒಂದು. ಕೇದರಾನಾಥ್, ಗಂಗೋತ್ರಿ,ಯಮನೋತ್ರಿ ಬಳಿಕ ಚಾರ್ಧಾಮ್ನಲ್ಲಿ ಗುರುತಿಸಿಕೊಳ್ಳುವ ಅತ್ಯಂತ ಪವಿತ್ರ ಕ್ಷೇತ್ರ ಬದ್ರಿನಾಥ್. ಈ ಒಂದು ಮಂದಿರ ಸಾಮಾನ್ಯವಾಗಿ ಪ್ರತಿ ದೀಪಾವಳಿ ಮುಗಿದ ಬಳಿಕ ಬಂದ್ ಆಗುತ್ತದೆ. ಬಳಿಕ ಏಪ್ರಿಲ್ ಇಲ್ಲವೇ ಮೇನಲ್ಲಿ ಮರಳಿ ಬಾಗಿಲನ್ನು ತೆರೆಯುತ್ತದೆ.
ಇದನ್ನೂ ಓದಿ:ವಸಂತ ಪಂಚಮಿ; ಸುತ್ತೂರುಶ್ರೀ, ವಚನಾನಂದಶ್ರೀ ನೇತೃತ್ವದಲ್ಲಿ ಕರ್ನಾಟಕದ ಸ್ವಾಮೀಜಿಗಳಿಂದ ಅಮೃತ ಸ್ನಾನ
ಕಳೆದ ವರ್ಷ ಚಾರ್ದಾಮ್ ಯಾತ್ರೆಯಲ್ಲಿ ಸುಮಾರು 50 ಲಕ್ಷ ಜನರು ಈ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗಿದೆ. ಈಗ ಮತ್ತೆ ಈ ನಾಲ್ಕು ಪುಣ್ಯಕ್ಷೇತ್ರಗಳು ಭಕ್ತಾದಿಗಳ ದರ್ಶನಕ್ಕೆ ಅವಕಾಶ ಮಾಡಿಕೊಡಲು ಶುರು ಮಾಡಿದ ಮೇಲೆ ಅದರಲ್ಲೂ ಮೇ 17 ರಿಂದ 23ರವರೆಗೆ ಅತಿಹೆಚ್ಚು ಭಕ್ತಾದಿಗಳು ಭೇಟಿ ನೀಡುವ ನಿರೀಕ್ಷೆಯಿದೆ. 2024ರಲ್ಲಿ ದುರದೃಷ್ಟವಷಾತ್ ಸುಮಾರು 183ಜನ ಯಾತ್ರಾರ್ಥಿಗಳು ಆರೋಗ್ಯ ಸಮಸ್ಯೆಯಿಂದಾಗಿ ಜೀವಬಿಟ್ಟ ದುರ್ಘಟನೆಗಳು ನಡೆದಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ