newsfirstkannada.com

ಕಾಂಗ್ರೆಸ್​ನಿಂದ ಲೋಕಸಭೆ ಟಿಕೆಟ್​​ ಮಿಸ್​; ಕಣ್ಣೀರು ಹಾಕಿದ ರಕ್ಷಿತಾ ಈಟಿ

Share :

Published March 23, 2024 at 9:34am

    ಲೋಕಸಭೆ ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್​ನಲ್ಲಿ ಅಸಮಾಧಾನ

    ನಾನು ಸಂಸದೆಯಾಗಿ ಕೆಲಸ ಮಾಡುವ ಕನಸು ಕಂಡಿದ್ದೆ- ರಕ್ಷಿತಾ ಈಟಿ

    8 ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ- ರಕ್ಷಿತಾ ಈಟಿ

ಬಾಗಲಕೋಟೆಯಲ್ಲಿ ಕಾಂಗ್ರೆಸ್ ಟಿಕೆಟ್ ಮಿಸ್ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ ಕಣ್ಣೀರು ಇಟ್ಟಿದ್ದಾರೆ. ಬಾಗಲಕೋಟೆಯಿಂದ ಸಂಯುಕ್ತಾ ಪಾಟೀಲ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಕಣಕ್ಕೆ ಇಳಿಸಿದೆ.

ಇದೇ ವಿಚಾರಕ್ಕೆ ನ್ಯೂಸ್​ಫಸ್ಟ್ ಜೊತೆ ಮಾತನಾಡಿರುವ ರಕ್ಷಿತಾ ಈಟಿ.. ಕೆಲಸ ಮಾಡಿದ್ದೆ, 8 ಮತಕ್ಷೇತ್ರದ ತಾಲೂಕಿಗೆ ಹೋಗಿ ಕೆಲಸ ಮಾಡಿದ್ದೆ. ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು 8 ವರ್ಷಗಳಾಗಿದೆ. ನೋವಿದೆ. ಒಂದು ಹೆಣ್ಣು ಮಗುವಾಗಿ ಸಂಸದೆಯಾಗುವ ಆಸೆಪಟ್ಟಿತ್ತು ಎಂದು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿBreaking: ಕಾಂಗ್ರೆಸ್​ನ 2ನೇ ಪಟ್ಟಿ ರಿಲೀಸ್.. ಸಚಿವರ ಮಕ್ಕಳಿಗೆ ಮಣೆ ಹಾಕಿದ ಹೈಕಮಾಂಡ್​​!

ನಾನೊಬ್ಬ ಹಿಂದುಳಿದ ವರ್ಗಗಳ ಹೆಣ್ಣು ಮಗಳು. ಟಿಕೆಟ್ ಸಿಗದೇ ಇರೋದು ನೋವು ತಂದಿದೆ. ನಮ್ಮ ನಾಯಕರ ಮೇಲೆ ನನಗೆ ಭರವಸೆ ಇದೆ. ಮುಂಬರುವ ದಿನಗಳಲ್ಲಿ ನನ್ನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನಾನು ಯಾವಾಗಲೂ ಪಕ್ಷದ ಜೊತೆಗೆ ಹೋಗುತ್ತೇನೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತೆ ನಾನು. ಈ ಸಲ ಅವಕಾಶ ಸಿಗಲಿಲ್ಲ, ಅಂದರೆ ಮುಂದಿನ ಸಾರಿ ಅವಕಾಶ ಸಿಗುವ ಭರವಸೆ ಇದೆ. ಪಕ್ಷದಲ್ಲಿಯೇ ಇದ್ದು ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡ್ತೀನಿ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ನಿಂದ ಲೋಕಸಭೆ ಟಿಕೆಟ್​​ ಮಿಸ್​; ಕಣ್ಣೀರು ಹಾಕಿದ ರಕ್ಷಿತಾ ಈಟಿ

https://newsfirstlive.com/wp-content/uploads/2024/03/RAKSHITA-EETI.jpg

Load More