newsfirstkannada.com

ಪಾರ್ಕಿಂಗ್ ವಿಚಾರಕ್ಕೆ ಕಿರಿಕ್.. ಅನ್ಯಕೋಮಿನ ಯುವಕರ ವಿರುದ್ಧ ಹಲ್ಲೆ ಆರೋಪ

Share :

Published April 20, 2024 at 7:34am

Update April 20, 2024 at 8:26am

  ಅಲ್ಲಿದ್ದ ಬೈಕ್ ತೆಗೆಯುವಂತೆ ಹೇಳಿದ್ದಕ್ಕೆ ಕೆರಳಿದ ಯುವಕರು

  ಚಿನ್ನದ ಅಂಗಡಿ ಮುಂದೆ ನಡೆದ ಪಾರ್ಕಿಂಗ್ ಗಲಾಟೆ

  ಆನಂದ್, ಪ್ರಶಾಂತ್ ರೇವಣಕರ್ ಮಾಲೀಕತ್ವದ ಅಂಗಡಿ

ರಾಜ್ಯದಲ್ಲಿ ಚುನಾವಣೆ ಹೊತ್ತಲ್ಲಿ ಒಂದು ರೀತಿಯ ಅಶಾಂತಿಯ ವಾತಾವರಣ ನಿರ್ಮಾಣ ಆದಂತೆ ಕಾಣ್ತಿದೆ. ಕಾರು ಪಾರ್ಕ್ ಮಾಡುವ ಕ್ಷುಲ್ಲಕ ವಿಚಾರಕ್ಕೆ ಅನ್ಯಕೋಮಿನ ಯುವಕರು ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪಾರ್ಕಿಂಗ್ ಫೈಟ್!
ಚಿನ್ನದ ಅಂಗಡಿ ಮುಂದೆ ಪಾರ್ಕಿಂಗ್ ಗಲಾಟೆ ನಡೆದಿದೆ.. ಆನಂದ್ ರೇವಣಕರ್​ ಹಾಗೂ, ಪ್ರಶಾಂತ್ ರೇವಣಕರ್ ಸಹೋದರರಿಗೆ ಸೇರಿದ ಚಿನ್ನದ ಅಂಗಡಿ ಮುಂಭಾಗ ಕಾರು ಪಾರ್ಕಿಂಗ್​​ ಮಾಡುವ ವಿಚಾರಕ್ಕೆ ಗಲಾಟೆ ನಡೆದಿದೆ. ಕಾರು ಪಾರ್ಕ್ ಮಾಡಲು ಅಲ್ಲಿದ್ದ ಬೈಕ್ ತೆಗೆಯುವಂತೆ ಹೇಳಿದ್ದಕ್ಕೆ ಕೆರಳಿದ ಅನ್ಯಕೋಮಿನ ಯುವಕರು ರೇವಣಕರ್​​ ಸಹೋದರರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ:ಮುದ್ದಾದ ಬಲೆ ಹೆಣೆದು ಕೊನೆಯ ಭೇಟಿಗೆ ಕರೆದ; ಇಬ್ಬರ ಜೀವ ತೆಗೆದ ‘ಆ ಹತ್ತು ನಿಮಿಷ’..!

ಆನಂದ್ ಹಾಗೂ ಪ್ರಶಾಂತ್​ ತಲೆ, ಮುಖಕ್ಕೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಇಬ್ಬರ ಮೇಲೆ 10 ಜನರ ಗುಂಪು ಹಲ್ಲೆ ಮಾಡಿದೆ ಎನ್ನಲಾಗಿದೆ. ಇಮ್ರಾನ್ ಹೊಂಡಕಟ್ಟಿ, ಆಸೀಫ್ ಯಾದವಾಡ, ನಿಜಾಮ್ ದಾಲಾಯತ್, ಶಬೀರ್ ಭಾಗವಾನ್ ಎಂಬುವವರ ವಿರುದ್ಧ ದೂರು ದಾಖಲಾಗಿದ್ದು ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾರ್ಕಿಂಗ್ ವಿಚಾರಕ್ಕೆ ಕಿರಿಕ್.. ಅನ್ಯಕೋಮಿನ ಯುವಕರ ವಿರುದ್ಧ ಹಲ್ಲೆ ಆರೋಪ

https://newsfirstlive.com/wp-content/uploads/2024/04/BGK-BADAMI-1.jpg

Load More