newsfirstkannada.com

ಸಂಯುಕ್ತಾ, ಶಶಿಕಲಾ ಜೊಲ್ಲೆ ಗಂಡನಿಗಿಂತ ಶ್ರೀಮಂತರು.. ಇಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನೂ ಕೋಟ್ಯಾಧಿಪತಿ..!

Share :

Published April 16, 2024 at 7:17am

    ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಎಷ್ಟು ಕೋಟಿ ಆಸ್ತಿ ಒಡೆಯ?

    ಕೋಟಿ ಕೋಟಿ ಒಡೆಯರಾಗಿ ಕಣದಲ್ಲಿ ಹೊರ ಹೊಮ್ಮಿದ ಅಭ್ಯರ್ಥಿಗಳು

    ಹುಬ್ಬಳ್ಳಿ-ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಆಸ್ತಿ ಎಷ್ಟಾಗಿದೆ?

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮೇ 7ರಂದು ನಡೆಯಲಿರುವ 2ನೇ ಹಂತದ ಮತಯುದ್ಧಕ್ಕೆ ಹುರಿಯಾಳುಗಳ ನಾಮಪತ್ರ ಸಲ್ಲಿಕೆ ಹಬ್ಬ ಜೋರಾಗಿದೆ. ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸಿದ್ದು ಕಣದಲ್ಲಿರುವ ಅಭ್ಯರ್ಥಿಗಳು ಕೋಟಿ ಕೋಟಿ ಒಡೆಯರಾಗಿ ಹೊರಹೊಮ್ಮಿದ್ದಾರೆ..

ಇದು ಯುದ್ಧ.. ಲೋಕಸಭೆ ರಣರಂಗಕ್ಕೆ ಮುಹೂರ್ತ ಫಿಕ್ಸ್ ಆಗಿದೆ.. ಎಲ್ಲ ಪಕ್ಷಗಳ ಸೇನಾನಿಗಳು ಉಮೇದುವಾರಿಕೆ ಸಲ್ಲಿಸಿ ಯುದ್ಧಕ್ಕೆ ಸಜ್ಜಾಗ್ತಿದ್ದಾರೆ.. ಚುನಾವಣಾ ಆಯೋಗ ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಚುನಾವಣೆ ನಡೆಸುವ ಉದ್ದೇಶ ಹೊಂದಿದೆ. ಆದ್ರೆ ಅಭ್ಯರ್ಥಿಗಳು ಹೊಂದಿರುವ ಆಸ್ತಿಯ ಮೌಲ್ಯ ರಾಜ್ಯದ ಜನರನ್ನು ಹುಬ್ಬೇರಿಸುವಂತಿದೆ.

ಲೋಕ ಕದನ ಕಣದಲ್ಲಿರುವ ಕಲಿಗಳು ಕೋಟಿ ಕುಬೇರರು!

ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮೇ 7ರಂದು 2ನೇ ಹಂತದ ಮತದಾನ ನಡೆಯಲಿದ್ದು ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸ್ತಿದ್ದಾರೆ. ನಾಮಪತ್ರ ಸಲ್ಲಿಕೆ ಜೊತೆ ಆಸ್ತಿ ವಿವರ ಘೋಷಣೆ ಮಾಡಿದ್ದು ಕಳೆದ ಚುನಾವಣೆಯಲ್ಲಿ ಘೋಷಿಸಿದ್ದಕ್ಕೆ ಆಸ್ತಿ ಮೌಲ್ಯ ದುಪ್ಪಟ್ಟಾಗಿರೋದು ವಿಶೇಷವಾಗಿದೆ. ಮಾಜಿ ಸಿಎಂ ಬೊಮ್ಮಾಯಿ ಹಾವೇರಿ-ಗದಗ ಬಿಜೆಪಿ ಅಭ್ಯರ್ಥಿಯಾಗಿದ್ದು 51.06 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ್ದಾರೆ.

ಬೊಮ್ಮಾಯಿ ಸಂಪತ್ತು!

  • ಒಟ್ಟು ಆಸ್ತಿ- ₹51.06 ಕೋಟಿ
  • ಪತ್ನಿ ಚನ್ಮಮ್ಮ- ₹1.32 ಕೋಟಿ
  • ಮಗಳು ಅದಿತಿ- ₹1.53 ಕೋಟಿ
  • ಒಟ್ಟು ಚರಾಸ್ತಿ-₹10.46 ಕೋಟಿ
  • ಸ್ಥಿರಾಸ್ತಿ- ₹43.45 ಕೋಟಿ
  • 2018ರಲ್ಲಿ- ₹10.19 ಕೋಟಿ

ಹಾವೇರಿ-ಗದಗ ‘ಕೈ’ ಅಭ್ಯರ್ಥಿ ಕೋಟ್ಯಧಿಪತಿ!

ಇನ್ನು ಹಾವೇರಿ-ಗದಗ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಆನಂದ್ ಗಡ್ಡದೇವರಮಠ ಸುಮಾರು 55.67 ಕೋಟಿ ಆಸ್ತಿಯನ್ನು ಅಫಿಡವಿಟ್​​ನಲ್ಲಿ ಘೋಷಿಸಿಕೊಂಡಿದ್ದಾರೆ.

‘ಕೋಟಿ’ ಕೈ ಅಭ್ಯರ್ಥಿ!

  • ಒಟ್ಟು ಆಸ್ತಿ- ₹55.67 ಕೋಟಿ
  • ಒಟ್ಟು ಚರಾಸ್ತಿ- ₹13 ಲಕ್ಷ
  • ಸ್ಥಿರಾಸ್ತಿ- ₹50 ಲಕ್ಷ
  • ವಾಹನಗಳು- ₹50.54 ಲಕ್ಷ

ಪ್ರಲ್ಹಾದ್ ಜೋಶಿ 21 ಕೋಟಿ ಆಸ್ತಿ ಒಡೆಯ!

ಇನ್ನು ಹುಬ್ಬಳ್ಳಿ-ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ 21 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದು ಕಳೆದ 5 ವರ್ಷಗಳಲ್ಲಿ ಪ್ರಲ್ಹಾದ್ ಜೋಶಿ ಆಸ್ತಿ 7 ಕೋಟಿಯಷ್ಟು ಹೆಚ್ಚಳವಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ 21.09 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. 2019ರ ಚುನಾವಣೆಯಲ್ಲಿ 14.71 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದು 7 ಕೋಟಿ ಹೆಚ್ಚಳವಾಗಿದೆ. 2.72 ಕೋಟಿ ಮೊತ್ತದ ಚರಾಸ್ತಿ ಹೊಂದಿದ್ದು 11.24 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಜೋಶಿ 6.63 ಕೋಟಿ ರೂ. ಸಾಲ ಕೂಡ ಹೊಂದಿದ್ದಾರೆ.

ಬಾಗಲಕೋಟೆ ಅಭ್ಯರ್ಥಿ ಉದ್ಯಮಿ ಪತಿಗಿಂತಲೂ ಶ್ರೀಮಂತೆ!

ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ 2 ಕೋಟಿ ಆಸ್ತಿ ಹೊಂದಿದ್ದು ಉದ್ಯಮಿ ಪತಿಗಿಂತಲೂ ಶ್ರೀಮಂತೆಯಾಗಿ ಹೊರಹೊಮ್ಮಿದ್ದಾರೆ. ಹೀಗಿದ್ದರೂ ಪತಿಯಿಂದಲೇ 2 ಲಕ್ಷ ರೂಪಾಯಿ ಸಾಲ ಕೂಡ ಪಡೆದಿದ್ದಾರೆ.

ಸಂಯುಕ್ತ ಪಾಟೀಲ್ ಆಸ್ತಿ!

ಸಂಯುಕ್ತ ಪಾಟೀಲ್ 2 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. 93 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. 1.12 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 3.95 ಲಕ್ಷ ರೂ. ಸಾಲ ಕೂಡ ಹೊಂದಿದ್ದಾರೆ.

ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಬಳಿ 21 ಕೋಟಿ ಮೌಲ್ಯ ಆಸ್ತಿ

ಇನ್ನು ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಒಟ್ಟು ‌‌21.62 ಕೋಟಿ ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದಾರೆ. ಅಣ್ಣಾಸಾಹೇಬ್ ಜೊಲ್ಲೆಗಿಂತ‌ ಪತ್ನಿ ಶಶಿಕಲಾ ‌ಜೊಲ್ಲೆಯೇ ಸಿರಿವಂತೆ ಆಗಿದ್ದಾರೆ.  ಅಣ್ಣಾಸಾಹೇಬ್ ಜೊಲ್ಲೆ 21 ಕೋಟಿ ಕುಬೇರರಾಗಿದ್ದಾರೆ. ಇವರ ಚರಾಸ್ತಿ 5.83 ಕೋಟಿ ಆಗಿದೆ. ಇನ್ನು ಸ್ಥಿರಾಸ್ತಿ 15.79 ಕೋಟಿ ಮೌಲ್ಯದ್ದಾಗಿದೆ. 12 ಕೋಟಿ ರೂ. ಸಾಲ ಮಾಡಿರುವ ಜೊಲ್ಲೆ 67.68 ಲಕ್ಷ ಮೌಲ್ಯದ ಸ್ವಂತ ವಾಹನಗಳನ್ನು ಹೊಂದಿದ್ದಾರೆ.

ಬೆಳಗಾವಿ ಕ್ಷೇತ್ರದ ಕೈ ಅಭ್ಯರ್ಥಿ ‘ಲಕ್ಷ್ಮಿ’ಪುತ್ರ!

ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ‌13.63 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸಿದ್ರೂ ಲಕ್ಷ್ಮಿಪುತ್ರರಾಗಿ ಹೊರಹೊಮ್ಮಿದ್ದಾರೆ.

‘ಲಕ್ಷ್ಮಿ’ಪುತ್ರನ ಸಂಪತ್ತು!

  • ಒಟ್ಟು ಆಸ್ತಿ- ₹13.63 ಕೋಟಿ
  • ಚರಾಸ್ತಿ- ₹10.01 ಕೋಟಿ
  • ಸ್ಥಿರಾಸ್ತಿ- ₹‌3.62 ಕೋಟಿ
  • ಸಾಲ- ₹6.16 ಕೋಟಿ
  • ಸ್ವಂತ ವಾಹನ- ಇಲ್ಲ

ಲೋಕ ಕಣದಲ್ಲಿರುವ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳೆಲ್ಲರೂ ಕೋಟಿ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು ಧನಿಕರಾಗಿರೋದು ವಿಶೇಷ ಎನಿಸಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಂಯುಕ್ತಾ, ಶಶಿಕಲಾ ಜೊಲ್ಲೆ ಗಂಡನಿಗಿಂತ ಶ್ರೀಮಂತರು.. ಇಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನೂ ಕೋಟ್ಯಾಧಿಪತಿ..!

https://newsfirstlive.com/wp-content/uploads/2024/04/SAMYUKTA_PATIL.jpg

Load More