/newsfirstlive-kannada/media/post_attachments/wp-content/uploads/2025/03/BNG_HALAGE_MELA.jpg)
ಬಣ್ಣಗಳ ಹಬ್ಬ.. ಈ ನಮ್ಮ ಹೋಳಿ ಹಬ್ಬಕ್ಕೆ ಕೌಂಟ್ಡೌನ್ ಶುರುವಾಗಿದೆ. ಕಲರ್ ಫುಲ್ ಹೋಳಿ ಹಬ್ಬದ ಬೆನ್ನಲ್ಲೇ ಬಾಗಲಕೋಟೆಯಲ್ಲಿ ವಿಶೇಷವಾಗಿ ಹಲಗೆಮೇಳ ಆಚರಿಸಲಾಗುತ್ತದೆ. ಸದ್ಯ ಈ ವೈಭವ ಸಿಲಿಕಾನ್ ಸಿಟಿಯಲ್ಲಿ ಮೇಳೈಸಿತ್ತು.
ಸಿಲಿಕಾನ್ ಸಿಟಿಯಲ್ಲಿ ಕಲರ್ಫುಲ್ ಹಲಗೆ ಮೇಳ.. ಬೆಂಗಳೂರಲ್ಲಿ ಬಾಗಲಕೋಟೆ ಮಂದಿಯ ಸಮಾಗಮ. ಹೋಳಿ ಹಬ್ಬದ ಸಮಯದಲ್ಲಿ ಬಾಗಲಕೋಟೆಯಲ್ಲಿ ಹಲಗೆ ಬಾರಿಸಿ ಆಚರಿಸೋ ಈ ವಿಶೇಷ ಹಬ್ಬ ಆಚರಿಸಲಾಗುತ್ತೆ. ಇದನ್ನು ಯಾವುದೇ ಜಾತಿ, ಧರ್ಮದ ಅಡ್ಡಿಯಿಲ್ಲದೇ ಆಚರಿಸಿಕೊಂಡು ಬರಲಾಗ್ತಿದೆ. ಈ ಪರಂಪರೆ ಎಲ್ಲೆಡೆ ಪ್ರಸರಿಸಬೇಕು ಅಂತಾ ಬೆಂಗಳೂರಿನಲ್ಲಿ ಹಲಗೆಮೇಳ ನಡೆಸಲಾಯಿತು. ರಾಜಾಜಿನಗರ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದಿಂದ ಸರ್ದಾರ್ ವಲ್ಲಭಬಾಯ್ ಪಟೇಲ್ ಮೈದಾನದಲ್ಲಿ ಹಲಗೆ ಬಾರಿಸಿ ಬಾಗಲಕೋಟೆಯ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇದೇ ಮೊದಲ ಬಾರಿಗೆ ಹೋಳಿ ಹುಣ್ಣಿಮೆಯ ಅಲಗೆಮೇಳ ಬಾಗಲಕೋಟೆಯನ್ನು ಬಿಟ್ಟು ಬೆಂಗಳೂರಿನಲ್ಲಿ ಆಚರಿಸಲಾಗುತ್ತಿದೆ. ಎರಡು ತಂಡ ಬಾಗಲಕೋಟೆಯಿಂದ ಬಂದಿದೆ. ಹಲಗೆಗಳನ್ನು ಐತಿಹಾಸಿಕವಾಗಿ ತಯಾರು ಆಗಿರುವಂತಹದ್ದು.
ನಾಗರಾಜ್ ಹುಂಡೇಕರ್, ಹೋಳಿ ಹಲಗೆಮೇಳ ಆಯೋಜಕರು
ಹೋಳಿಹಬ್ಬದಲ್ಲಿ ಆಚರಿಸೋ ವಿಶೇಷ ಹಲಗೆಮೇಳದ ಕಂಪನ್ನ ರಾಜಧಾನಿಯಲ್ಲಿ ಪ್ರಸರಿಸೋ ಸಲುವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅರವಿಂದ್ ಲಿಂಬಾವಳಿ, ಶಾಸಕ ಗೋಪಾಲಯ್ಯ, ಹರೀಶ್ ಸೇರಿ ಹಲವರು ಭಾಗಿಯಾಗಿದ್ದರು. ಈ ವೇಳೆ ಹಲಗೆಮೇಳದ ವೈಶಿಷ್ಟ್ಯತೆಗಳನ್ನ ವಿವರಿಸಿದ ಅರವಿಂದ್ ಲಿಂಬಾವಳಿ, ಬಾಗಲಕೋಟೆ ಈಗ ಮೊದಲಿನಂತಿಲ್ಲ. ಬೇರೆ ಬೇರೆ ಭಾಗದಲ್ಲಿ ಹರಿದು ಹಂಚಿ ಹೋಗಿದೆ. ಆದ್ರೆ ಐದು ದಿನ ಆಚರಿಸ್ತಿದ್ದ ಹೋಳಿಹಬ್ಬ ಇದೀಗ ರಾಜಧಾನಿಯಲ್ಲಿ ಆಚರಣೆಯಾಗ್ತಿದೆ ಎಂದರು.
ಇದನ್ನೂ ಓದಿ: ಇನ್ಸ್ಟಾದಲ್ಲಿ ಜಸ್ಟ್ 20,000 ರೂಪಾಯಿಗೆ iPhone.. ಜಾಹೀರಾತು ಬಗ್ಗೆ ಹುಷಾರ್..!
ಬಳಿಕ ಶಾಸಕ ಗೋಪಾಲಯ್ಯ ಮಾತನಾಡಿ ಬಾಗಲಕೋಟೆಯ ಹಲಗೆಮೇಳ ನನ್ನ ಕ್ಷೇತ್ರದಲ್ಲಿ ನಡೆಯುತ್ತಿರೋದು ಸಂತಸ ತಂದಿದೆ. ಮುಂದಿನ ವರ್ಷ ನಮ್ಮ ಕ್ಷೇತ್ರದಲ್ಲೂ ಬಾಗಲಕೋಟೆ ರೀತಿಯಲ್ಲೇ ಹೋಳಿ ಹಬ್ಬ ಆಚರಿಸಬೇಕು. ಅದಕ್ಕೆ ಎಲ್ಲ ರೀತಿ ಸಹಕಾರ ನೀಡುವುದಾಗಿ ಹೇಳಿದರು.
ಸಂಭ್ರಮದ ಹಲಗೆಮೇಳದಲ್ಲಿ ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್ ಸೇರಿ ಅಕ್ಕಪಕ್ಕದ ಏರಿಯಾಗಳ ನಿವಾಸಿಗಳು ಹಾಗೂ ಬಾಗಲಕೋಟೆ ಜನರು ಭಾಗಿಯಾಗಿದ್ದರು. ವೀಕೆಂಡ್ನಲ್ಲಿ ಜೊತೆಗೂಡಿ ಸಂಭ್ರಮಿಸಿದರು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ