newsfirstkannada.com

ಬಾಗಲಕೋಟೆಯಲ್ಲಿ ಒಬ್ಬ ರಾಮನ ಭಕ್ತೆ.. ಕಳೆದ ಮೂರು ದಶಕಗಳಲ್ಲಿ 31 ‘ಶ್ರೀರಾಮ ನಾಮ ಪುಸ್ತಕ’ ಬರೆದ ವೃದ್ಧೆ

Share :

Published January 15, 2024 at 1:58pm

Update January 15, 2024 at 1:59pm

    16,68,368 ಸಾರಿ ಶ್ರೀರಾಮನ ನಾಮ ಬರೆದ ವೃದ್ಧೆ

    ಬಾಗಲಕೋಟೆ ಗದ್ದನಕೇರಿ ಗ್ರಾಮದ ವೃದ್ಧೆ ಇವರು

    ಪ್ರಾಣ ಪ್ರತಿಷ್ಠಾಪನೆ ದಿನ ಅಯೋಧ್ಯೆಗೆ ಹೋಗುವ ಆಸೆ

ಬಾಗಲಕೋಟೆ: ದೇಶದ ಜನರ ಚಿತ್ತ ಅಯೋಧ್ಯೆಯ ಕಡೆ. ಭಗವಾನ್ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಕೋಟ್ಯಾಂತರ ಜನ ಕಾದಿದ್ದಾರೆ. ರಾಮ ಮಂದಿರಕ್ಕಾಗಿ ಅದೆಷ್ಟೋ ಭಕ್ತರು ಅನೇಕ ಸೇವೆಗಳನ್ನು ಮಾಡಿಕೊಂಡು ಬರುತ್ತಿರುವ ರೋಚಕ ಕಥೆಗಳು ಒಂದೊಂದೇ ಈ ಸಂದರ್ಭದಲ್ಲಿ ಬರುತ್ತಿವೆ. ಅದರಂತೆ ಬಾಗಲಕೋಟೆಯಲ್ಲಿ ಇದ್ದಾರೆ ಒಬ್ಬ ವಿಶೇಷ ಭಕ್ತೆ.

60 ವರ್ಷದ ಅನ್ನಪೂರ್ಣ ಯಲ್ಲೂಸಾ ನಿರಂಜನ್ ಎಂಬ ವೃದ್ಧೆ ಅಪ್ಪಟ ರಾಮನ ಭಕ್ತೆ ಆಗಿದ್ದಾರೆ. ಅನ್ನಪೂರ್ಣ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಗ್ರಾಮದವರು. ಕಳೆದ 3 ದಶಕಗಳಿಂದ ಶ್ರೀರಾಮನ ಜಪ ಮಾಡ್ತಿರೋ ಇವರು, ಇಲ್ಲಿಯವರೆಗೆ 16,68,368 ಸಾರಿ ಶ್ರೀರಾಮ ನಾಮ ಬರೆದಿದ್ದಾರೆ. ಪ್ರತಿದಿನ ಎರಡು ಗಂಟೆ ಕಾಲ ಶ್ರೀರಾಮ ನಾಮ ಜಪಕ್ಕೆ ತಮ್ಮ ಸಮಯವನ್ನು ಮೀಸಲು ಇಡುತ್ತಿದ್ದಾರೆ.

1989ರಲ್ಲಿ ಫಂಡರಪುರದಲ್ಲಿ ಶ್ರೀರಾಮ ನಾಮ ಬರೆಯುವ ಸಂಕಲ್ಪ ಮಾಡಿದ್ದ ಅನ್ನಪೂರ್ಣ, ಅಂದಿನಿಂದ‌ ಇಂದಿನವರೆಗೂ ತಪ್ಪದೇ ಶ್ರೀರಾಮನ ನಾಮ ಬರೆಯುತ್ತಿದ್ದಾರೆ. ಇಲ್ಲಿಯವರೆಗೆ 31 ಶ್ರೀರಾಮ ನಾಮ ಪುಸ್ತಕಗಳನ್ನು ಬರೆದು ಪೂರ್ಣಗೊಳಿಸಿದ್ದಾರೆ. ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಲ್ಲಿ ಹಾಜರಿರಬೇಕು ಅನ್ನೋದು ಅವರ ಆಸೆ ಆಗಿತ್ತು. ಸದ್ಯ ತಾವು ಬರೆದಿರುವ ಪುಸ್ತಕವನ್ನು ಅಯೋಧ್ಯೆಗೆ ಕಳುಹಿಸಲು ಆಸೆಯನ್ನು ಹೊತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಗಲಕೋಟೆಯಲ್ಲಿ ಒಬ್ಬ ರಾಮನ ಭಕ್ತೆ.. ಕಳೆದ ಮೂರು ದಶಕಗಳಲ್ಲಿ 31 ‘ಶ್ರೀರಾಮ ನಾಮ ಪುಸ್ತಕ’ ಬರೆದ ವೃದ್ಧೆ

https://newsfirstlive.com/wp-content/uploads/2024/01/BGK-RAM-JAPA.jpg

Load More