ಕೃಷ್ಣಾ ನದಿಗೆ ಸ್ನಾನ ಮಾಡಲು ಹೋಗಿದ್ದ ಮೂವರು ಬಾಲಕರು ನಾಪತ್ತೆ.. ಓರ್ವನ ದೇಹ ಪತ್ತೆ

author-image
Bheemappa
Updated On
ಕೃಷ್ಣಾ ನದಿಗೆ ಸ್ನಾನ ಮಾಡಲು ಹೋಗಿದ್ದ ಮೂವರು ಬಾಲಕರು ನಾಪತ್ತೆ.. ಓರ್ವನ ದೇಹ ಪತ್ತೆ
Advertisment
  • ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಪೊಲೀಸರು
  • ಪಲ್ಲಕ್ಕಿ ಹಿಂದೆ ಹೋಗಿದ್ದವರು ನೀರಿಗೆ ಇಳಿದು, ವಾಪಸ್ ಬರಲೇ ಇಲ್ಲ
  • ನದಿಯಲ್ಲಿ ಹುಡುಕಾಟ ನಡೆಸಿರುವ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ

ಬಾಗಲಕೋಟೆ: ಕೃಷ್ಣಾ ನದಿಗೆ ಸ್ನಾನ ಮಾಡಲೆಂದು ತೆರಳಿದ್ದ ಮೂವರ ಬಾಲಕರ ಪೈಕಿ ಓರ್ವ ಜೀವ ಕಳೆದುಕೊಂಡಿದ್ದಾನೆ. ಇನ್ನಿಬ್ಬರು ಬಾಲಕರಿಗಾಗಿ ಪೊಲೀಸರ, ಅಗ್ನಿಶಾಮಕ ಸಿಬ್ಬಂದಿ ಇಂದ ಹುಟುಕಾಟ ಮುಂದುವರೆದಿದೆ. ಈ ಘಟನೆಯು ಬಾಗಲಕೋಟೆ ತಾಲೂಕಿನ ಇಲಿಯಾಳ ಗ್ರಾಮ ಬಳಿ ನಡೆದಿದೆ.

ಇಲಿಯಾಳ ಗ್ರಾಮದ ಬಾಲಕ ಸೋಮಶೇಖರ್ (15) ಜೀವ ಕಳೆದುಕೊಂಡಿದ್ದು ನೀರಿನಲ್ಲಿ ಮೃತದೇಹ ಮತ್ತೆ ಆಗಿದೆ. ಆದರೆ ಈ ಬಾಲಕನ ಜೊತೆ ತೆರಳಿದ್ದ ಇನ್ನು ಇಬ್ಬರ ಮೃತದೇಹಕ್ಕಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಮೂವರು ಬಾಲಕರು ನದಿಗೆ ಸ್ನಾನ ಮಾಡಲೆಂದು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ: 6, 6, 6, 6, 6; ಹೊಡಿಬಡಿ ಬ್ಯಾಟಿಂಗ್​, ರಾಣ ವೇಗದ ಅರ್ಧಶತಕ.. ಚೆನ್ನೈಗೆ ಬಿಗ್ ಟಾರ್ಗೆಟ್ ಕೊಟ್ಟ RR

publive-image

ದೇವರ ಪಲ್ಲಕ್ಕಿ ಉತ್ಸವ ಇದ್ದಿದ್ದರಿಂದ ಇದೇ ವೇಳೆ ಮೂವರು ಬಾಲಕರು ನದಿ ದಂಡೆಗೆ ಬಂದಿದ್ದಾರೆ. ಆಗ ಈಜಾಡಲೆಂದು ನದಿ ನೀರಿಗೆ ಇಳಿದಿದ್ದಾರೆ ಎನ್ನಲಾಗಿದೆ. ಈ ವೇಳೆ ನೀರಿನಲ್ಲಿ ಮುಳುಗಿ ಮೂವರು ಪ್ರಾಣ ಬಿಟ್ಟಿದ್ದಾರೆ. ಇದರಲ್ಲಿ ಓರ್ವನ ಮೃತದೇಹ ಪತ್ತೆ ಆಗಿದ್ದು ಇನ್ನು ಇಬ್ಬರಿಗಾಗಿ ಅಗ್ನಿಶಾಮಕದಳ ಹಾಗೂ ಪೊಲೀಸರಿಂದ ನೀರಿನಲ್ಲಿ ಹುಡುಕಾಟ ನಡೆದಿದೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೋಲಿಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment