/newsfirstlive-kannada/media/post_attachments/wp-content/uploads/2024/07/bagalakote.jpg)
ಬಾಗಲಕೋಟೆ: ಹೊಲದಲ್ಲಿದ್ದ ಶೆಡ್​ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಜಿಲ್ಲೆಯ ಬೆಳಗಲಿ ವ್ಯಾಪ್ತಿಯ ಹೊಲವೊಂದರಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸಜೀವ ದಹನವಾಗಿದ್ದಾರೆ. ಮೂವರು ಪಾರಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/07/Bagalakote-1.jpg)
ಮಹಾಲಿಂಗಪೂರ ಮೂಲದ ದಸ್ತಗೀರ ಸಾಬ ಮೌಲಾಸಾಬ್ ಪೆಂಡಾರಿ ಎಂಬುವವರ ಮನೆ ಮೇಲೆ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ. ಪೆಟ್ರೋಲ್ ಹಾಕಿ ಶೆಡ್​​ಗೆ ಬೆಂಕಿ ಹಚ್ಚಿದ್ದಾರೆ. ಶೆಡ್​​ನಲ್ಲಿ 5 ಜನ ನಿದ್ರೆಯಲ್ಲಿದ್ದರು. ಆದರೆ ಬೆಂಕಿಯ ಕೆನ್ನಾಲಿಗೆಗೆ ಇಬ್ಬರು ಮಹಿಳೆಯರು ಸಜೀವ ದಹನವಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/07/Bagalakote-2.jpg)
ಮಗಳು ಶಬಾನಾ ಪೆಂಡಾರಿ (26), ಜಯನಬಿ ಪೆಂಡಾರಿ ಪತ್ನಿ (50) ಮೃತ ದುರ್ದೈವಿಗಳು. ದಸ್ತಗೀರ್, ಸುಭಾನಾ, ಸಿದ್ದಿಕ್ ಎಂಬುವವರಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಕೇದಾರನಾಥ ದೇವಸ್ಥಾನದಲ್ಲಿ 228kg ಚಿನ್ನ ನಾಪತ್ತೆ! ಈ ಗಂಭೀರ ಆರೋಪ ಮಾಡಿದ್ಯಾರು ಗೊತ್ತಾ?
/newsfirstlive-kannada/media/post_attachments/wp-content/uploads/2024/07/Bagalakote-3.jpg)
ಹೊಲದಲ್ಲಿ ಉಳುಮೆ ಮಾಡಿಕೊಂಡಿದ್ದ ಕುಟುಂಬ
ದಸ್ತಗೀರ ಸಾಬ ಮೌಲಾಸಾಬ್ ಪೆಂಡಾರಿ ಕುಟುಂಬ ಎರಡೂವರೆ ಎಕರೆ ಹೊಲದಲ್ಲಿ ಉಳುಮೆ ಮಾಡಿಕೊಂಡಿದ್ದರು. ಆದರೆ ತಡರಾತ್ರಿ ದುಷ್ಕರ್ಮಿಗಳು ಶೆಡ್​ ಮೇಲೆ ಪೆಟ್ರೋಲ್ ಸುರಿದು ಕೃತ್ಯವೆಸಗಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಮೂವರು ಮನೆಯಿಂದ ಓಡೋಡಿ ಹೊರಬಂದಿದ್ದಾರೆ. ಇನ್ನಿಬ್ಬರನ್ನ ಪಾರು ಮಾಡುವಷ್ಟರಲ್ಲಿ ಬೆಂಕಿಗೆ ಹೊತ್ತಿ ಉರಿದಿದ್ದಾರೆ.
ಇದನ್ನೂ ಓದಿ: ವಿಶ್ವದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ತಾಯಿ ಬಳಿಯಿರೋ ಆಸ್ತಿ ಎಷ್ಟು ಗೊತ್ತಾ?
/newsfirstlive-kannada/media/post_attachments/wp-content/uploads/2024/07/Bagalakote-4.jpg)
ಡೋರ್​ ಲಾಕ್​ ಮಾಡಿ ಬೆಂಕಿ ಹಚ್ಚಿದ್ರು
ದುಷ್ಕರ್ಮಿಗಳು ಶೆಡ್ ಗೆ ಪೆಟ್ರೋಲ್ ಸುರಿಯಲು 2 HP ಸಾಮರ್ಥ್ಯದ ಮೋಟರ್ ಬಳಕೆ ಮಾಡಿದ್ದಾರೆ. 100 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಗೆ ಪೆಟ್ರೋಲ್ ಹಾಕಿ​​ ಸಿಂಪಡಿಸಿದ್ದಾರೆ. ಶೆಡ್ ನ ಹೊರಗಡೆಯಿಂದ ಬೀಗ ಹಾಕಿ ಬೆಂಕಿ ಹಚ್ಚಿದ್ದಾರೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಜಿಲ್ಲೆಯ ಮುಧೋಳ ಪೋಲಿಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us