newsfirstkannada.com

ಬಾಗಲಕೋಟೆಯಲ್ಲೊಂದು ಅಮಾನವೀಯ ಕೃತ್ಯ.. ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ನಿರಾಕರಣೆ

Share :

Published February 24, 2024 at 5:58pm

Update February 24, 2024 at 6:04pm

    ಊರಿನ ಹಿರಿಯರಿಂದ ಶವ ಸಂಸ್ಕಾರಕ್ಕೆ ಅಡ್ಡಿ

    ಸ್ಮಶಾನದಲ್ಲಿ ಶವ ಹೂಳಲು ಅವಕಾಶ ಕೊಡದ ಹಿರಿಯರು

    ಮನೆಯಲ್ಲೇ ಶವ ಇಟ್ಟುಕೊಂಡು ಕುಳಿತ ಕುಟುಂಬಸ್ಥರು

ಬಾಗಲಕೋಟೆ: ವೃದ್ದನ ಶವ ಸಾಗಿಸಲು ಡೋಲಿ ಕೊಡಲು ನಿರಾಕರಿಸಿದ ಅಮಾನವೀಯ ಘಟನೆ ಬಾಗಲಕೋಟೆ ಮುಧೋಳ ತಾಲೂಕಿನ ರನ್ನಬೆಳಗಲಿಯಲ್ಲಿ ನಡೆದಿದೆ. ಸ್ಮಶಾನದಲ್ಲಿ ಹೂಳಲು ಅವಕಾಶ ಕೊಡದೆ ಕೊನೆಗೆ ಮೃತ ವೃದ್ದನ ಮಗನಿಗೆ ಥಳಿಸಿದ್ದಾರೆ.

ಹುಸೇನಸಾಬ್ ಹುದ್ದಾರ (90) ಸಾವನ್ನಪ್ಪಿರುವ ವೃದ್ದ. ಬೆಳಗ್ಗೆ 10 ಗಂಟೆಗೆ ಹುಸೇನಸಾಬ್ ಮೃತಪಟ್ಟಿದ್ದಾರೆ. ಆದರೆ ವೃದ್ಧನ ಶವ ಸಾಗಿಸಲು ಡೋಲಿ ಕೊಡೊದೆ ನೋಯಿಸಿದ್ದಾರೆ. ನಂತರ ಸ್ಮಶಾನದಲ್ಲೂ ಜಾಗ ಕೊಡೋದಿಲ್ಲ ಎಂದು‌ ಕೆಲ ಹಿರಿಯರು ವಾದ ಮಾಡಿದ್ದಾರೆ. ಮಾತ್ರವಲ್ಲದೆ, ಹುಸೇನಸಾಬ್ ಮಗ ವಜೀರ್​ಗೆ ಥಳಿಸಿದ್ದಾರೆ. ಅತ್ತ ಸ್ಮಶಾನದಲ್ಲಿ ಹೂಳಲು ಅವಕಾಶ ಕೊಡದೆ ಕೊನೆಗೆ ಹುಸೇನಸಾಬ್ ಕುಟುಂಬಸ್ಥರು ಮನೆಯಲ್ಲೇ ಶವ ಇಟ್ಟುಕೊಂಡು ಕೂತಿದ್ದಾರೆ.

ಹುಸೇನಸಾಬ್ ಮಗ ವಜೀರ್

ನೀವು ಮುಸ್ಲಿಂ ಸಮಾಜದ ಯಾವುದೇ ಧಾರ್ಮಿಕ ಕಾರ್ಯಕ್ಕೆ ಬರೋದಿಲ್ಲ. ಸಮಾಜಕ್ಕೆ ಸಹಕಾರ ನೀಡೋದಿಲ್ಲ. ನಿಮಗೆ ಯಾಕೆ ಡೋಲಿ ಎಂದು ಪ್ರಶ್ನಿಸುತ್ತಾ ಸ್ಮಶಾನದಲ್ಲಿ ಜಾಗ ಕೊಡಲು ನಿರಾಕರಿಸಿದ್ದಾರೆ. ಅತ್ತ ಕುಟುಂಬಸ್ಥರು ಶವ ಅಂತ್ಯಸಂಸ್ಕಾರ ಮಾಡದೆ ಹಾಗೆ ಕೂತಿದ್ದಾರೆ.

ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಅವರ ಮಧ್ಯಸ್ಥಿಕೆಯಲ್ಲಿ ಘಟನೆ ತಿಳಿಗೊಂಡಿದೆ. ಡೋಲಿ ನೀಡಿ ಸ್ಮಶಾನದಲ್ಲಿ ಹೂಳಲು ಅವಕಾಶ ನೀಡಿದ್ದಾರೆ. ಬಳಿಕ ಹುಸೇನಸಾಬ್ ಕುಟುಂಬ ಶವ ಹೂತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಗಲಕೋಟೆಯಲ್ಲೊಂದು ಅಮಾನವೀಯ ಕೃತ್ಯ.. ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ನಿರಾಕರಣೆ

https://newsfirstlive.com/wp-content/uploads/2024/02/bagalkote-1.jpg

Load More