/newsfirstlive-kannada/media/post_attachments/wp-content/uploads/2024/07/BGK-FIRE-1.jpg)
ಬಾಗಲಕೋಟೆ: ಹೊಲದಲ್ಲಿದ್ದ ಶೆಡ್​ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಜಿಲ್ಲೆಯ ಬೆಳಗಲಿ ವ್ಯಾಪ್ತಿಯ ಹೊಲವೊಂದರಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸಜೀವ ದಹನವಾಗಿದ್ದಾರೆ. ಮೂವರು ಪಾರಾಗಿದ್ದಾರೆ. ಶಭಾನಾ ಪೆಂಡಾರಿ (26), ಜಯನಬಿ ಪೆಂಡಾರಿ (60) ದುಷ್ಕೃತ್ಯಕ್ಕೆ ಬಲಿಯಾದವರು.
ಮಹಾಲಿಂಗಪೂರ ಮೂಲದ ದಸ್ತಗೀರ ಸಾಬ ಮೌಲಾಸಾಬ್ ಪೆಂಡಾರಿ ಎಂಬುವವರ ಮನೆ ಮೇಲೆ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ. ಪೆಟ್ರೋಲ್ ಹಾಕಿ ಶೆಡ್​​ಗೆ ಬೆಂಕಿ ಹಚ್ಚಿದ್ದಾರೆ. ಶೆಡ್​​ನಲ್ಲಿ 5 ಜನ ನಿದ್ರೆಯಲ್ಲಿದ್ದರು. ಬೆಂಕಿಯ ಕೆನ್ನಾಲಿಗೆಗೆ ಇಬ್ಬರು ಮಹಿಳೆಯರು ಸಜೀವ ದಹನವಾಗಿದ್ದಾರೆ.
ಇದನ್ನೂ ಓದಿ:ರಮಾನಂದ್ ಶೆಟ್ಟಿ ಸಾವಿನ ಬೆನ್ನಲ್ಲೇ ಅವರ ಪತ್ನಿಯೂ ನಿಧನ.. ರೀಲ್ಸ್ ಮೂಲಕ ಖ್ಯಾತಿ ಗಳಿಸಿದ್ದ ಅಶ್ವಿನಿ
/newsfirstlive-kannada/media/post_attachments/wp-content/uploads/2024/07/BGK-FIRE.jpg)
ದಸ್ತಗೀರ್, ಸುಭಾನಾ, ಸಿದ್ದಿಕ್ ಎಂಬುವವರಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ದಸ್ತಗೀರ ಸಾಬ ಮೌಲಾಸಾಬ್ ಪೆಂಡಾರಿ ಕುಟುಂಬ ಎರಡೂವರೆ ಎಕರೆ ಹೊಲದಲ್ಲಿ ಉಳುಮೆ ಮಾಡಿಕೊಂಡಿದ್ದರು. ಆದರೆ ತಡರಾತ್ರಿ ದುಷ್ಕರ್ಮಿಗಳು ಶೆಡ್​ ಮೇಲೆ ಪೆಟ್ರೋಲ್ ಸುರಿದು ಕೃತ್ಯವೆಸಗಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಮೂವರು ಮನೆಯಿಂದ ಓಡೋಡಿ ಹೊರಬಂದಿದ್ದಾರೆ.
ದುಷ್ಕರ್ಮಿಗಳು ಶೆಡ್ ಗೆ ಪೆಟ್ರೋಲ್ ಸುರಿಯಲು 2 HP ಸಾಮರ್ಥ್ಯದ ಮೋಟರ್ ಬಳಕೆ ಮಾಡಿದ್ದಾರೆ. 100 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್​​ಗೆ ಪೆಟ್ರೋಲ್ ಹಾಕಿ​​ ಸಿಂಪಡಿಸಿದ್ದಾರೆ. ಶೆಡ್​ನ ಹೊರಗಡೆಯಿಂದ ಬೀಗ ಹಾಕಿ ಬೆಂಕಿ ಹಚ್ಚಿದ್ದಾರೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಜಿಲ್ಲೆಯ ಮುಧೋಳ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿಯಿಂದ ಎಫ್ಎಸ್ಎಲ್ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸ್ಥಳದಲ್ಲಿ ಇದ್ದ ಪ್ರಮುಖ ಸಾಕ್ಷ್ಯ ಸಂಗ್ರಹ ಮಾಡಿದೆ.
ಇದನ್ನೂ ಓದಿ:‘ಸ್ವಲ್ಪದ್ರಲ್ಲೇ ನನ್ನ ಸಾವು ತಪ್ಪಿತು..’ 7 ಮಂದಿ ಬಲಿ ಪಡೆದ ಗುಡ್ಡ ಕುಸಿತದ ಭಯಾನಕ ಕ್ಷಣ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ
/newsfirstlive-kannada/media/post_attachments/wp-content/uploads/2024/07/Bagalakote-2.jpg)
ಮೃತ ಸಭಾನಾ ಪಿಎಸ್ಐ ಆಗುವ ನಿರೀಕ್ಷೆಯಲ್ಲಿದ್ದರು. ಇತ್ತೀಚೆಗೆ ನಡೆದ ಪಿಎಸ್​ಐ ಪರೀಕ್ಷೆಯನ್ನು ಅಟೆಂಡ್ ಮಾಡಿದ್ದರು. ಮುಧೋಳದಲ್ಲಿ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡ್ತಿದ್ದ ಶಭಾನಾ, ಕಳೆದೊಂದು ವಾರದ ಹಿಂದೆ ಮನೆಗೆ ಬಂದಿದ್ದರು. ರಕ್ಕಸ ಕೃತ್ಯಕ್ಕೆ ಸ್ಕೂಟಿ, ಸ್ಕಾರ್ಪಿಯೋ ಕಾರು, ಬುಲೆಟ್ ಬೈಕ್​ ಬೆಂಕಿಗೆ ಆಹುತಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us