ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು; ಬಾಗಪ್ಪ ಹರಿಜನ ಹಳೇ ಶಿಷ್ಯನ ಬರ್ಬರ ಹತ್ಯೆ, ಫೈರಿಂಗ್..

author-image
Ganesh
Updated On
ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು; ಬಾಗಪ್ಪ ಹರಿಜನ ಹಳೇ ಶಿಷ್ಯನ ಬರ್ಬರ ಹತ್ಯೆ, ಫೈರಿಂಗ್..
Advertisment
  • ಬಾಗಪ್ಪ ಹರಿಜನ ಹಳೇ ಶಿಷ್ಯ ಸುಶೀಲ್ ಕಾಳೆಯ ಹತ್ಯೆ
  • ಇಂದು ಬೆಳಗ್ಗೆ ಇಬ್ಬರು ಆರೋಪಿಗಳ ಬಂಧನ ಆಗಿದೆ
  • ಆರೋಪಿಗಳ ಕಾಲಿಗೆ ಗುಂಡೇಟು ಕೊಟ್ಟ ಪೊಲೀಸರು

ವಿಜಯಪುರದಲ್ಲಿ ಮತ್ತೆ ನೆತ್ತರು ಹರಿದಿದೆ. ಬಾಗಪ್ಪ ಹರಿಜನನ ಹಳೆಯ ಶಿಷ್ಯ ಸುಶೀಲ್ ಕಾಳೆಯನ್ನು ಮಾರಾಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ನಿನ್ನೆ ಎಸ್​ಎಸ್ ರಸ್ತೆ ಬಳಿ ಇರುವ ಅಮರವರ್ಷಿಣಿ ಸಹಕಾರಿ ಬ್ಯಾಂಕ್​ಗೆ ಸುಶೀಲ್ ಕಾಳೆ ಬಂದಿದ್ದ. ಈ ವೇಳೆ ಆರೋಪಿಗಳು ಗುಂಡು ಹಾರಿಸಿ ಬಳಿಕ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಪೊಲೀಸರಿಂದ ಫೈರಿಂಗ್

ಗಾಂಧಿಚೌಕ್ ಪೊಲೀಸ್​ ಠಾಣೆಯಲ್ಲಿ ನಿನ್ನೆಯೇ ಪ್ರಕರಣ ದಾಖಲಾಗಿತ್ತು. ತನಿಖೆಗೆ ಇಳಿದಿದ್ದ ಪೊಲೀಸರು ತಡರಾತ್ರಿಯಿಂದ ಕಾರ್ಯಾಚರಣೆಗೆ ಇಳಿದಿದ್ದರು. ಇಂದು ಬೆಳಗ್ಗೆ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಗುಂಡೇಟು ಕೊಟ್ಟು ಬಂಧಿಸಿದ್ದಾರೆ. ಆರೋಪಿಗಳು ಪೊಲೀಸರ ಮೇಲೆಯೇ ದಾಳಿಗೆ ಯತ್ನಿಸಿದ ಹಿನ್ನೆಲೆಯಲ್ಲಿ ಸಿಪಿಐ ಪ್ರದೀಪ್ ತಳಕೇರಿ ಮೂರು ಸುತ್ತು ಗುಂಡು ಹಾರಿಸಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ವಿರೋಚಿತ ಸೋಲು.. ಆಂಗ್ಲರಿಗೆ ನೀರು ಕುಡಿಸಿದ ಜಡೇಜಾ, ಸಿರಾಜ್, ಬೂಮ್ರಾ..!

ಘಟನಾ ಸ್ಥಳದಲ್ಲಿ ಆರೋಪಿಗಳ ಕಂಟ್ರಿ ಪಿಸ್ತೂಲ್ ಬಿದ್ದಿದೆ. ಅಲ್ಲದೇ ಆರೋಪಿಗಳು ಬಳಸುತ್ತಿದ್ದ ನಂಬರ್ ಪ್ಲೇಟ್ ಇಲ್ಲದ ಸ್ಪ್ಲೆಂಡರ್ ಬೈಕ್ ಕೂಡ ಅಲ್ಲಿಯೇ ಬಿದ್ದಿದೆ. ಬೈಕ್ ಮೇಲೆ ಪರಾರಿಯಾಗ್ತಿದ್ದ ಆರೋಪಿಗಳನ್ನ ಹಿಡಿಯಲು ಯತ್ನಿಸಿದ್ದಾಗ ಪೊಲೀಸರ ಮೇಲೆಯೇ ಫೈರಿಂಗ್​ಗೆ ಯತ್ನಿಸಿದ್ದರು. ಆತ್ಮರಕ್ಷಣೆಗಾಗಿ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಆರೋಪಿ ಆಕಾಶ ಕಲ್ಲವ್ವಗೋಳ, ಸುದೀಪ್ ಅಲಿಯಾಸ್ ಸುಭಾಷ್ ಕಾಲಿಗೆ ಗುಂಡೇಟು ನೀಡಿದ್ದಾರೆ. ಬಂಧಿತ ಆರೋಪಿ ಆಕಾಶ ಮೇಲೆ ಈಗಾಗಲೇ 7 ಪ್ರಕರಣಗಳಿದ್ದವು. ಫೈರಿಂಗ್ ನಡೆದ ಘಟನಾ ಸ್ಥಳ ಇಟ್ಟಂಗಿಹಾಳಕ್ಕೆ ಎಸ್​ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಒಂದು ಬ್ಯಾಡ್​ ಲಕ್, ಗೆಲುವು ಮಿಸ್​ -ಕ್ರಿಕೆಟ್ ಅಭಿಮಾನಿಗಳಿಗೆ ನೋವು ತಂದ ಈ ವಿಡಿಯೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment