newsfirstkannada.com

×

ಸುಬ್ಬ-ಸುಬ್ಬಿಗೆ ಬೇಲಾ? ಜೈಲಾ? ಇಂದು ನಟ ದರ್ಶನ್‌ಗೆ ನಿರ್ಣಾಯಕ ದಿನ; ಜಾಮೀನು ಸಿಗುತ್ತಾ?

Share :

Published September 30, 2024 at 6:24am

    ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ನಟ ದರ್ಶನ್​ ಗ್ಯಾಂಗ್‌!

    ಇಂದು ದರ್ಶನ್​, ಪವಿತ್ರಗೌಡ ಇಬ್ಬರ ಜಾಮೀನು ಭವಿಷ್ಯ ನಿರ್ಧಾರ

    ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯ ಇಲ್ಲ!

ಬೆಂಗಳೂರು: ರೇಣುಕಾಸ್ವಾಮಿ ಕೊ*ಲೆ ಕೇಸ್​ನಲ್ಲಿ ಬಂಧಿಯಾಗಿರೋ ನಟ ದರ್ಶನ್ ಜೈಲು ಸೇರಿ ಈಗಾಗಲೇ 100 ದಿನಗಳು ಕಳೆದಿವೆ. ಸದ್ಯ ಪ್ರಕರಣದಲ್ಲಿ ಜಾಮೀನು ಕೋರಿ ದರ್ಶನ್​ ಅರ್ಜಿ ಸಲ್ಲಿಸಿದ್ದು, ಜಾಮೀನು ಭವಿಷ್ಯ ಇಂದು ಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ನಿರೀಕ್ಷೆ ಇದೆ.

ರೀಲ್​ ಮೇಲೆ ಹೀರೋ ಆಗಿ ಮೆರೆದು ರಿಯಲ್​ನಲ್ಲಿ ವಿಲನ್​ ಆಗಿ ಜೈಲು ಹಕ್ಕಿಯಾಗಿರೋ ದರ್ಶನ್​, ಬಂಧಿಖಾನೆಯಿಂದ ಸ್ವಾತಂತ್ರ್ಯವಾಗಿ ಹಾರೋಕೆ ಹಪಹಪಿಸ್ತಿದ್ದಾರೆ. ಜೈಲಿನಿಂದ ಹಾರೋಕೆ ಜಾಮೀನೆಂಬ ರೆಕ್ಕೆಯ ಅವಶ್ಯಕತೆ ಇದ್ದು, ಆ ರೆಕ್ಕೆಗಾಗಿ ದಾಸ ಆ ದಿನವನ್ನೇ ಎದುರು ನೋಡ್ತಿದ್ದಾರೆ.

ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ
ಸುಬ್ಬ-ಸುಬ್ಬಿಗೆ ಬೇಲ್​? ಇಲ್ಲ ಜೈಲೇ ಗತಿನಾ?
ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ದರ್ಶನ್ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುತ್ತಿದ್ದಂತೆ, ದಾಸ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ರು. ಇಂದು ಸಿಟಿ ಸಿವಿಲ್ ಕೋರ್ಟ್​ನಲ್ಲಿ ಬೇಲ್​ ಅರ್ಜಿ ವಿಚಾರಣೆ ನಡೆಯಲಿದೆ. ಪವಿತ್ರಾ ಗೌಡ ಪರ ಈಗಾಗ್ಲೇ ಲಾಯರ್​ ಸಬಾಷ್ಟಿಯನ್​ ವಾದ ಮಂಡಿಸಿದ್ದಾರೆ. ಇಂದು ದರ್ಶನ್​ ಮತ್ತು ಪವಿತ್ರಗೌಡ ಇಬ್ಬರ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.

ಇದನ್ನೂ ಓದಿ: ಬೇಲ್ ಸಿಕ್ಕರು ದರ್ಶನ್ ಗ್ಯಾಂಗ್​ನ ಮೂವರು ಜೈಲಿನಲ್ಲೇ ಇರೋದು ಯಾಕೆ.. ಕಾರಾಗೃಹದಿಂದ ಬಿಡುಗಡೆ ಯಾವಾಗ? 

ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯ ಇಲ್ಲ
ಜೈಲಲ್ಲೇ ಇದ್ದಾರೆ ಮೂವರು ಆರೋಪಿಗಳು
ಮತ್ತೊಂದ್ಕಡೆ ಬೇಲ್ ಸಿಕ್ಕಿದ್ರೂ ಕೂಡ ತುಮಕೂರು ಜೈಲಿನಲ್ಲಿರುವ ಮೂವರು ಆರೋಪಿಗಳಿಗೆ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಕಾರ್ತಿಕ್ ಅಲಿಯಾಸ್ ಕಪ್ಪೆ, ನಿಖಿಲ್ ನಾಯಕ್ ಹಾಗೂ ಕೇಶವಮೂರ್ತಿಗೆ ಕಳೆದ ಸೋಮವಾರ ಅಂದ್ರೆ, ಜಾಮೀನು ಸಿಕ್ಕಿ ಒಂದು ವಾರವಾಗಿದೆ. ಕೋರ್ಟ್​ ಒಂದು ಲಕ್ಷ ಬಾಂಡ್, ಇಬ್ಬರು ವ್ಯಕ್ತಿಗಳ ಶ್ಯೂರಿಟಿ, ಸಾಕ್ಷ್ಯಗಳಿಗೆ ಬೆದರಿಕೆ ಹಾಕಬಾರದು. ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಷರತ್ತು ಬದ್ಧ ಜಾಮೀನು ನೀಡಿತ್ತು. ಅದ್ರೆ, ಆರೊಪಿಗಳಿಗೆ ಶ್ಯೂರಿಟಿ ವ್ಯವಸ್ಥೆಯಾಗದೇ ಪರದಾಡುತ್ತಿದ್ದಾರೆ.

ಬೇಲ್​ ಆದ್ರೂ ಜೈಲಲ್ಲೇ ವಾಸ!
5 ಲಕ್ಷ ಸಿಗುತ್ತೆಂದು ಆರೋಪಿ ಕಾರ್ತಿಕ್, ನಿಖಿಲ್ ನಾಯಕ್ ಹಾಗೂ ಕೇಶವಮೂರ್ತಿ ಕೊ*ಲೆ ಕೇಸ್ ಮೈಮೇಲೆ ಎಳೆದುಕೊಂಡಿದ್ದರು. ಹಣಕಾಸು ವಿಚಾರದಲ್ಲಿ ತಾವೇ ಕೊಲೆ ಮಾಡಿದ್ದಾಗಿ ಸರೆಂಡರ್ ಆಗಿದ್ರು. ಸಾಕ್ಷ್ಯನಾಶ ಆರೋಪದಡಿ ಮೂವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಮೂವರಿಗೆ ಜಾಮೀನು ಮಂಜೂರಾಗಿದೆ. ಆದ್ರೆ, ಶ್ಯೂರಿಟಿ ವ್ಯವಸ್ಥೆ ಆಗದೇ ಮೂವರು ಆರೋಪಿಗಳು ಇನ್ನೂ ಜೈಲಿನಲ್ಲಿದ್ದಾರೆ. ಸರೆಂಡರ್ ಆಗಲು ಹೇಳಿದವರು ಇವತ್ತು ಯಾವ ಸಹಾಯ ಮಾಡಿಲ್ಲ. ಆರೋಪಿಗಳು ವಕೀಲರ ಮೂಲಕ ಶ್ಯೂರಿಟಿ ವ್ಯವಸ್ಥೆ ಮಾಡುತ್ತಿದ್ದಾರೆ.

ಹಣದ ಆಸೆಗೆ ಕೊ*ಲೆ ಕೇಸ್​ ಮೈಮೇಲೆ ಎಳೆದುಕೊಂಡಿದ್ದಾರೆ. ಆದರೆ ಸರೆಂಡರ್​ ಆಗಲು ಹೇಳಿದ್ದವರು ಕೂಡ ಇವತ್ತು ಆರೋಪಿಗಳನ್ನ ನಡುರೋಡಲ್ಲಿ ಕೈ ಬಿಟ್ಟಿದ್ದಾರೆ. ಈಗ್ಲಾದ್ರೂ ಆ ಮೂವರಿಗೆ ತಾವು ಮಾಡಿದ ತಪ್ಪಿನ ಅರಿವಾಗಿರಬೇಕು. ಈ ಮಧ್ಯೆ ಇಂದು ದಾಸನಿಗೆ ಬೇಲ್​ ಸಿಗುತ್ತಾ ಇಲ್ಲ ಅನ್ನೋ ಕುತೂಹಲ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುಬ್ಬ-ಸುಬ್ಬಿಗೆ ಬೇಲಾ? ಜೈಲಾ? ಇಂದು ನಟ ದರ್ಶನ್‌ಗೆ ನಿರ್ಣಾಯಕ ದಿನ; ಜಾಮೀನು ಸಿಗುತ್ತಾ?

https://newsfirstlive.com/wp-content/uploads/2024/09/Darshan-Pavithra-Gowda-Photo-2.jpg

Load More