ನಟಿ ಪವಿತ್ರಾಗೌಡಗೆ ಬಿಗ್​ ಶಾಕ್; ಕೊಲೆ ಕೇಸಲ್ಲಿ ಕೋರ್ಟ್​ನಿಂದ ಮಹತ್ವದ ತೀರ್ಪು

author-image
Ganesh Nachikethu
Updated On
ಮೃತದೇಹ ವಿಲೇವಾರಿಗೆ ₹30 ಲಕ್ಷಕ್ಕೆ ಡೀಲ್​ ಒಪ್ಪಿಸಿದ್ದ ದರ್ಶನ್​.. ಆದ್ರೆ ಪ್ಲಾನ್ ಫೇಲ್ ಆಗಿದ್ದು ಎಲ್ಲಿ ಗೊತ್ತಾ?
Advertisment
  • ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಕೇಸ್​​
  • A1 ಆರೋಪಿಯಾಗಿರೋ ಪವಿತ್ರಾಗೌಡ
  • ಪವಿತ್ರಾಗೌಡ ಜಾಮೀನು ಅರ್ಜಿ ವಜಾ

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ A1 ಆರೋಪಿಯಾಗಿರೋ ಪವಿತ್ರಾಗೌಡ ಜಾಮೀನು ಅರ್ಜಿ ವಜಾಗೊಂಡಿದೆ. ಇಂದು ಅರ್ಜಿ ವಿಚಾರಣೆ ನಡೆಸಿದ ಸಿಸಿಹೆಚ್ 57 ಕೋರ್ಟ್ ನ್ಯಾಯಧೀಶರು ಈ ಮಹತ್ವದ ತೀರ್ಪು ನೀಡಿದ್ದಾರೆ.

ಅಸಲಿಗೆ ಆಗಿದ್ದೇನು?

ಈ ಹಿಂದೆ ಪ್ರಕರಣದ A1 ಆರೋಪಿಯಾಗಿರೋ ಪವಿತ್ರಾಗೌಡ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಆದೇಶವನ್ನು ಇಂದಿಗೆ ಕಾಯ್ದಿರಿಸಿತ್ತು. ಕೊಲೆಯಲ್ಲಿ ಭಾಗಿಯಾದ ಸಾಕ್ಷ್ಯಗಳ ಬಗ್ಗೆ ಸಂಪೂರ್ಣ ಉಲ್ಲೇಖ ಮಾಡಲಾಗಿತ್ತು. ಪವಿತ್ರಾಗೌಡ ಪರವಾಗಿ ಟಾಮಿ ಸೆಬಾಸ್ಟಿಯನ್ ವಾದ ಮಾಡಿದ್ದರು. ಎಸ್​ಪಿಪಿ ಪ್ರಸನ್ನ ಕುಮಾರ್ ಕಡ್ಡಾಯವಾಗಿ ಪ್ರಮುಖ ನಾಲ್ಕು ಆರೋಪಿಗಳಿಗೆ ಜಾಮೀನು ನೀಡಬಾರದು ಎಂದಿದ್ದರು.

ಜಾರ್ಮಿನು ಅರ್ಜಿ ಸಂಬಂಧ ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಅರ್ಜಿ ವಜಾ ಮಾಡಿದ್ದಾರೆ. ಹಾಗಾಗಿ ಪವಿತ್ರಾಗೌಡ ಅವರು ಜಾಮೀನು ಕೋರಿ ಹೈಕೋರ್ಟ್​ ಮೆಟ್ಟಿಲೇರಬೇಕಿದೆ.

ಇದನ್ನೂ ಓದಿ: Big Breaking: ಆರೋಪಿ ದರ್ಶನ್​​​ಗೆ ಜೈಲೇ ಗತಿ.. ಜಾಮೀನು ಅರ್ಜಿ ವಜಾ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment