ಬೇಲ್ ಸಿಕ್ಕ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಂದ ಪೋಸ್ಟ್
6 ವಾರ ದರ್ಶನ್ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಕೋರ್ಟ್ ಅನುಮತಿ
ಜಾಮೀನು ಸಿಗುತ್ತಿದ್ದಂತೆ ದರ್ಶನ್ ಅಭಿಮಾನಿಗಳಿಗೆ ದೀಪಾವಳಿ ಸಂಭ್ರಮ
ರೇಣುಕಾಸ್ವಾಮಿ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಕೊನೆಗೂ ಮಧ್ಯಂತರ ಜಾಮೀನು ಸಿಕ್ಕಿದೆ. ಹೈಕೋರ್ಟ್ ಮೆಡಿಕಲ್ ವರದಿ ಆಧಾರದ ಮೇಲೆ ಚಿಕಿತ್ಸೆ ನೀಡಲು ಮಧ್ಯಂತರ ಬೇಲ್ ಮಂಜೂರು ಮಾಡಿದೆ. 6 ವಾರಗಳ ಕಾಲ ಬೆನ್ನು ನೋವಿನ ಚಿಕಿತ್ಸೆ ಪಡೆಯಲು ಕೋರ್ಟ್ ಅನುಮತಿ ನೀಡಿದೆ.
ದರ್ಶನ್ ಅವರಿಗೆ ಬೇಲ್ ಸಿಕ್ಕ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಾಮಾಕ್ಯ ದೇವಿ ದೇವಸ್ಥಾನದ ಫೋಟೋ ಹಾಕಿರುವ ವಿಜಯಲಕ್ಷ್ಮಿ ದರ್ಶನ್, ದೇವರಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ.
ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿದ ಮೇಲೆ ವಿಜಯಲಕ್ಷ್ಮಿ ಅವರು ದೇವರ ಮೊರೆ ಹೋಗಿದ್ದರು. ಕಾಮಾಕ್ಯ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದು, ಶಕ್ತಿ ದೇವತೆಯ ಪೂಜಾ ಫಲ ವಿಜಯಲಕ್ಷ್ಮಿ ಅವರ ಕೈ ಹಿಡಿದಿದೆ.
ಇದನ್ನೂ ಓದಿ: ದರ್ಶನ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್.. ‘ಸ್ಪೆಷಲ್ ಫೋಟೋ’ ಶೇರ್ ಮಾಡಿ ಹೊಸ ಭರವಸೆ ಮೂಡಿಸಿದ ವಿಜಯಲಕ್ಷ್ಮಿ
ದರ್ಶನ್ ಫ್ಯಾನ್ಸ್ ಅಬ್ಬರ ಶುರು!
ನಟ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಸಿಗುತ್ತಿದ್ದಂತೆ ಅವರ ಅಭಿಮಾನಿಗಳ ದೀಪಾವಳಿ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸೆಲಬ್ರೇಷನ್ ನಡೆಸುತ್ತಿರುವ ಅಭಿಮಾನಿಗಳು ದರ್ಶನ್ ರಿಲೀಸ್ ಆಗುವುದನ್ನೇ ಕಾಯುತ್ತಿದ್ದಾರೆ.
ಈ ಹಿಂದೆ ದರ್ಶನ್ ಅವರು ಅಕ್ಟೋಬರ್‌ಗೆ ಹೇಳ್ಬಿಡು ಚಿನ್ನಾ ಬಂದೇ ಬರ್ತೀವಿ ಎಂದು ಹೇಳಿದ್ದರು. ಈ ಡೈಲಾಗ್ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಒಂದು ದೀಪ ಹಚ್ಚಿದ್ರೆ ಮನೆ ಬೆಳಗುತ್ತೆ. ಆದ್ರೆ ಈ ತೂಗದೀಪ ಬೆಳಗಿದ್ರೆ ಇಡೀ ಕರುನಾಡಲ್ಲಿ ದೀಪಾವಳಿ ನಡೆಯುತ್ತೆ. ಕಾಟೇರ ಸಿನಿಮಾದ ವಯಸ್ಸು ನೆತ್ತಿಗೆ ಆಗೈತೆ ಗೌಡ ನೆತ್ತರಿಗೆ ಅಲ್ಲ ಅನ್ನೋ ದರ್ಶನ್ ಸಿನಿಮಾದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ